ಡೇವಿಸ್ ಕಪ್ ಡಬಲ್ಸ್ ಅತೀ ಹೆಚ್ಚು ಗೆಲುವು: ಪೇಸ್ ವಿಶ್ವ ದಾಖಲೆ
Team Udayavani, Apr 7, 2018, 11:16 AM IST
ತಿಯಾಂಜಿನ್ : ಭಾರತದ ಹಿರಿಯ ಟೆನಿಸ್ ಪಟು ಲಿಯಾಂಡರ್ ಪೇಸ್ ಅವರು ಇಂದು ಶನಿವಾರ ಡೇವಿಸ್ ಕಪ್ ಇತಿಹಾಸದಲ್ಲೇ ಅತೀ ಹೆಚ್ಚು ಡಬಲ್ಸ್ ಪಂದ್ಯಗಳನ್ನು ಜಯಿಸಿದ ವಿಶ್ವ ದಾಖಲೆಯನ್ನು ಮಾಡಿದರು.
ಪೇಸ್ ಅವರು ರೋಹನ್ ಬೊಪಣ್ಣ ಅವರ ಜತೆಗೂಡಿ 43ನೇ ಡಬಲ್ಸ್ ವಿಜಯವನ್ನು ದಾಖಲಿಸಿದರಲ್ಲದೆ ಆ ಮೂಲಕ ಚೀನದೊಂದಿಗಿನ ಸೆಣಸಾಟಕ್ಕೆ ಮತ್ತೆ ಭಾರತವನ್ನು ತಂದು ನಿಲ್ಲಿಸಿದರು.
ಎಐಟಿಎ ಬಲವಂತದಿಂದ ಬೋಪಣ್ಣ ಜತೆಗೂಡಿ ಆಟವಾಡಿದ 44ರ ಹರೆಯದ ಪೇಸ್ ಅವರು ಚೀನದ ಜೋಡಿ ಮೋ ಕ್ಸಿನ್ ಗಾಂಗ್ ಮತ್ತು ಝಿ ಝಾಂಗ್ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 5-7, 7-6(5), 7-6(3) ಅಂತರದಲ್ಲಿ ವಿಜಯಗಳಿಸುವಲ್ಲಿ ಮುಖ್ಯ ಪಾತ್ರವಹಿಸಿದರು. ಆ ಮೂಲಕ ಏಶ್ಯ/ಒಸಾನಿಯಾ ಗ್ರೂಪ್ 1 ಟೈಯಲ್ಲಿ ಡಬಲ್ಸ್ ರಬ್ಬರ್ ಸಂಪಾದಿಸಿದರು.
ನಿನ್ನೆ ಶುಕ್ರವಾರ ರಾಮ್‌ಕುಮಾರ್ ರಾಮನಾಥನ್ ಮತ್ತು ಸುಮಿತ್ ನಗಾಲ್ ಜೋಡಿಗೆ ಅಚ್ಚರಿಯ ಸೋಲು ಉಂಟಾಗಿದ್ದರಿಂದ ಭಾರತವನ್ನು ಈ ಸರಣಿಯಲ್ಲಿ ಸ್ಪರ್ಧೆಯಲ್ಲಿ ಇರಿಸಲು ಡಬಲ್ಸ್ ಜಯಿಸುವುದು ಅನಿವಾರ್ಯವೂ ಅಗತ್ಯವೂ ಆಗಿತ್ತು. ಆ ಅಗತ್ಯವನ್ನು ಪೇಸ್ – ಬೋಪಣ್ಣ ಜೋಡಿ ಸಮರ್ಥವಾಗಿ ನಿಭಾಯಿಸಿತು.
ಭಾರತದ ಯುವಕರು ಈಗಿನ್ನು ವಿಶ್ವ ಕಪ್ ಪ್ಲೇ ಆಫ್ ಹಂತಕ್ಕೇರಲು ರಿವರ್ಸ್ ಸಿಂಗಲ್ಸ್‌ನಲ್ಲಿ ತಮ್ಮ ಯಶಸ್ವೀ ಹೋರಾಟವನ್ನು ಸಾದರಪಡಿಸಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.