ಲಿಯಾಂಡರ್‌ಗೆ ಸಾಧ್ಯವಾದದ್ದು ನನಗೇಕೆ ಅಸಾಧ್ಯ ? ಕ್ರಿಕೆಟಿಗ ಶ್ರೀಶಾಂತ್
Team Udayavani, Mar 15, 2019, 10:25 AM IST
ಹೊಸದಿಲ್ಲಿ : ಲಿಯಾಂಡರ್ ಪೇಸ್ ಅವರಿಗೆ ತಮ್ಮ 42ರ ಹರೆಯದಲ್ಲಿ ಗ್ರ್ಯಾನ್ ಸ್ಲಾಮ್ ಜಯಿಸಲು ಸಾಧ್ಯವಾಗಿದೆ; ಹಾಗಿರುವಾಗ 36ರ ಹರೆಯದಲ್ಲಿ ನನಗೆ ಸ್ವಲ್ಪವಾದರೂ ಕ್ರಿಕೆಟ್ ಆಡಲು ಏಕೆ ಸಾಧ್ಯವಾಗಬಾರದು ಎಂದು ಭಾರತೀಯ ಕ್ರಿಕೆಟಿಗ ಎಸ್ ಶ್ರೀಶಾಂತ್ ಹೇಳಿದ್ದಾರೆ.
2013ರ ಐಪಿಎಲ್ ಕೂಟದಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶಾಮೀಲಾದ ಆರೋಪದ ಮೇಲೆ ಬಿಸಿಸಿಐ ನಿಂದ ಹೇರಲ್ಪಟ್ಟಿದ ಆಜೀವ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವು ಗೊಳಿಸಿ ನೀಡಿದ ತೀರ್ಪಿನಿಂದ ನಿರಾಳರಾಗಿರುವ ಶ್ರೀಶಾಂತ್ ಇಂದು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ‘ನಾನು ಕ್ರಿಕೆಟ್ ಆಡದೆ ಆರು ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳ ಬಳಿಕ ನನಗೆ ಭವಿಷ್ಯದಲ್ಲಿ ಇನ್ನೇನು ಉಳಿದಿದೆಯೋ ಗೊತ್ತಿಲ್ಲ’ ಎಂದು ಹೇಳಿದರು.
ಶ್ರೀಶಾಂತ್ ಜತೆಗೆ ಮುಂಬಯಿ ಸ್ಪಿನ್ನರ್ ಅಂಕಿತ್ ಚವಾಣ್ ಮತ್ತು ಹರಿಯಾಣದ ಅಜಿತ್ ಚಾಂಡಿಲಾ ಅವರಿಗೂ ಬಿಸಿಸಿಐ ಇದೇ ಆರೋಪದ ಮೇಲೆ ಆಜೀವ ನಿಷೇಧ ಹೇರಿತ್ತು. ಶ್ರೀಶಾಂತ್ ತಮ್ಮ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.