Leh; ಐಸ್ ಹಾಕಿ ಲೀಗ್ ದ್ವಿತೀಯ ಆವೃತ್ತಿಯ ಟ್ರೋಫಿ- ಜೆರ್ಸಿ ಅನಾವರಣ
Team Udayavani, Dec 16, 2024, 3:41 PM IST
ನವದೆಹಲಿ: ರಾಯಲ್ ಎನ್‍ಫೀಲ್ಡ್, ಲಡಾಕ್ ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಲಡಾಕ್ ಐಸ್ ಹಾಕಿ ಸಂಸ್ಥೆಯ ಸಹಯೋಗದಲ್ಲಿ ರಾಯಲ್ ಎನ್‍ಫೀಲ್ಡ್ ಐಸ್ ಹಾಕಿ ಲೀಗ್‌ನ ದ್ವಿತೀಯ ಆವೃತ್ತಿಯ ಅಧಿಕೃತ ಟ್ರೋಫಿ ಮತ್ತು ಜರ್ಸಿಗಳನ್ನು ಇತ್ತೀಚೆಗೆ ಅನಾವರಣಗೊಳಿಸಿದೆ.
ಜನವರಿ 2 ರಿಂದ 9 ರವರೆಗೆ ಲಡಾಕ್ ನಲ್ಲಿ ಲೀಗ್ ನಡೆಯಲಿದೆ. ಲಡಾಕ್ ನಲ್ಲಿ ಐಸ್ ಹಾಕಿ ಅಭಿವೃದ್ಧಿಗಾಗಿ ರಾಯಲ್ ಎನ್‍ಫೀಲ್ಡ್ ರೂಪಿಸಿರುವ ಗೇಮ್‍ಚೇಂಜರ್ – ಬ್ಲೂಪ್ರಿಂಟ್ ಜೊತೆಗೆ ಇದು ಹೊಂದಿಕೊಳ್ಳುತ್ತವೆ. ಈ ಸಂಪೂರ್ಣ ಯೋಜನೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ತಜ್ಞರ ಸಹಕಾರದಲ್ಲಿ ರೂಪಿತವಾಗಿದ್ದು, 2042ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಭಾಗವಹಿಸಲು ಸಜ್ಜುಗೊಳಿಸುವ ಉದ್ದೇಶವನ್ನು ಹೊಂದಿದೆ.
ಡಿಸೆಂಬರ್ 8ರಿಂದ 12ರವರೆಗೆ ಸ್ಥಳೀಯ ಕೋಚ್‌ಗಳಿಗೆ ತರಬೇತಿ ಶಿಬಿರವನ್ನು ಆಯೋಜಿಸಿತ್ತು. ಅಂತಾರಾಷ್ಟ್ರೀಯ ಐಸ್ ಹಾಕಿ ಫೆಡರೇಷನ್ (IIHF) ಪ್ರಮಾಣಿತ ಕೋಚ್ ಇನ್‌ಸ್ಟ್ರಕ್ಟರ್ ಡ್ಯಾರಿಲ್ ಈಸನ್ ಈ ಶಿಬಿರವನ್ನು ನಿರ್ವಹಿಸಿದರು. ಲಡಾಕ್ ಮತ್ತು ಹಿಮಾಚಲ ಪ್ರದೇಶದ 32 ಕೋಚ್‌ಗಳು ಶಿಬಿರದಲ್ಲಿ ಪಾಲ್ಗೊಂಡು, ಕ್ರೀಡೆಯ ಹಾಸುಹೊಕ್ಕುಗಳನ್ನು ಕಲಿತರು. ಇದರ ಮೂಲಕ ಅವರು ತಮ್ಮ ಸಮುದಾಯಗಳಿಗೆ ವಿಶ್ವಮಟ್ಟದ ತರಬೇತಿ ನೀಡಲು ಸಜ್ಜಾಗಲಿದ್ದಾರೆ. ಈ ಕೋಚ್‌ಗಳು ತಮ್ಮ ಪ್ರಾದೇಶಿಕ ಪ್ರದೇಶಗಳಿಗೆ ಮರಳಿ, ಆಟಗಾರರನ್ನು ಗುರುತಿಸಿ ತರಬೇತಿ ನೀಡಲಿದ್ದಾರೆ. ಈ ಆಟಗಾರರು ರಾಯಲ್ ಎನ್‍ಫೀಲ್ಡ್ ಐಸ್ ಹಾಕಿ ಲೀಗ್‌ನಲ್ಲಿ ಭಾಗವಹಿಸಲಿರುವ ತಂಡಗಳನ್ನು ರಚಿಸಲಿದ್ದಾರೆ.
ಒಟ್ಟಾರೆ, 10 ಪುರುಷರ ತಂಡಗಳು ಮತ್ತು 5 ಮಹಿಳಾ ತಂಡಗಳು ಲೇಹ್‌ನಲ್ಲಿ 8 ದಿನಗಳ ಲೀಗ್‌ನಲ್ಲಿ ಸ್ಪರ್ಧೆ ಮಾಡಲಿವೆ. ಲೇಹ್, ಬೋಧ್-ಖರ್ಬು, ದ್ರಾಸ್, ಕಾರ್ಗಿಲ್, ನುಬ್ರಾ, ಶಾಮ್, ಝಾನ್ಸ್ಕಾರ್ ಮತ್ತು ಚಾಂಗ್ಥಾಂಗ್ ಸೇರಿದಂತೆ ಹಲವಾರು ಪ್ರದೇಶಗಳನ್ನು ಈ ತಂಡಗಳು ಪ್ರತಿನಿಧಿಸಲಿವೆ. ನೂರು, ಡಿಸ್ಕಿಟ್, ಚಾಂಬಾ, ಗ್ಯಾಲ್ಸ್ಟನ್, ಮುಸ್ತಫಾ ಮುಂತಾದ ಪ್ರಮುಖ ಆಟಗಾರರ ಕ್ರೀಡಾ ಸ್ಪರ್ಧಾತ್ಮಕತೆಯನ್ನು ಈ ಲೀಗ್ ಒಳಗೊಂಡಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Sukma; ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.