ವಿಶ್ವಕಪ್ ಗೆದ್ದಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ: ಸಚಿನ್ ತೆಂಡುಲ್ಕರ್
Team Udayavani, Feb 18, 2020, 7:39 PM IST
ಬರ್ಲಿನ್: 2011ರಲ್ಲಿ ವಿಶ್ವಕಪ್ ಗೆದ್ದ ಮಹೋನ್ನತ ಕ್ಷಣಕ್ಕಾಗಿ ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ ಗೌರವಕ್ಕೆ ಪಾತ್ರರಾಗಿರುವ ವಿಶ್ವಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರು ಬರ್ಲಿನ್ ನ ವೆರ್ಟಿ ಮ್ಯೂಸಿಕ್ ಸಭಾಂಗಣದಲ್ಲಿ ಸ್ಪೂರ್ತಿಯ ಮಾತುಗಳನ್ನಾಡಿದರು.
26 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ತನ್ನ ಸಹ ಆಟಗಾರರು ನನ್ನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮೈದಾನಕ್ಕೆ ಸುತ್ತು ಬಂದಿದ್ದು ‘ನನ್ನ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದು’ ಎಂದು ಲಿಟಲ್ ಮಾಸ್ಟರ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ನನ್ನ ವೃತ್ತಿಜೀವನದ 22 ವರ್ಷಗಳಷ್ಟು ಸುದೀರ್ಘ ಸಮಯ ನಾನು ಚೇಸ್ ಮಾಡಿಕೊಂಡೇ ಬಂದಿದ್ದ ‘ಆ ಮಿರುಗುವ ಟ್ರೋಫಿ’ ಅಂತಿಮವಾಗಿ ನನ್ನ ಕೈಸೇರಿದ ಕ್ಷಣ ಮರೆಯಲಾಗದ್ದು ಮತ್ತು ಈ ಸುದೀರ್ಘ ಕಾಲದಲ್ಲಿ ನಾನು ಯಾವತ್ತೂ ಭರವಸೆಯನ್ನು ಕಳೆದುಕೊಳ್ಳಲಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.
ಮತ್ತು ಎರಡು ದಶಕಗಳ ನಿರಂತರ ಕಾಯುವಿಕೆಯ ಬಳಿಕ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಕ್ಷಣವನ್ನು ಪದಗಳಲ್ಲಿ ವರ್ಣಿಸಲಾಗದು ಎಂದೂ ಕ್ರಿಕೆಟ್ ದೇವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.