ಮಂಡಿಯೂರಿತು ಕ್ರೊವೇಶಿಯ; ಮೆಸ್ಸಿ , ಆರ್ಜೆಂಟೀನಾ ಫೈನಲ್‌ ಯಾನ

Team Udayavani, Dec 14, 2022, 11:06 PM IST

ಮಂಡಿಯೂರಿತು ಕ್ರೊವೇಶಿಯ; ಮೆಸ್ಸಿ , ಆರ್ಜೆಂಟೀನಾ ಫೈನಲ್‌ ಯಾನ

ಲುಸೈಲ್‌ (ಕತಾರ್‌): ಮೆಸ್ಸಿ ಮತ್ತು ಆರ್ಜೆಂಟೀನಾದ ಸಂಭ್ರಮ ಮುಗಿಲು ಮುಟ್ಟಿದೆ. ಸೆಮಿಫೈನಲ್‌ನಲ್ಲಿ ಅಪಾಯಕಾರಿ ಹಾಗೂ ಊಹೆಗೆ ನಿಲುಕದ ಕ್ರೊವೇಶಿಯವನ್ನು ಒಂದಲ್ಲ, ಎರಡಲ್ಲ… 3-0 ಗೋಲುಗಳ ಅಂತರದಿಂದ ಬಗ್ಗುಬಡಿಯುವ ಮೂಲಕ 6ನೇ ಸಲ ಫಿಫಾ ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಕಳೆದ ಸಲದ ರನ್ನರ್ ಅಪ್‌ ತಂಡವಾದ ಕ್ರೊವೇಶಿಯ ಒಂದೂ ಗೋಲು ಬಾರಿಸಲಾಗದೆ ಮಂಡಿಯೂರಿತು!

ರಷ್ಯಾದಲ್ಲಿ ನಡೆದ 2018ರ ವಿಶ್ವಕಪ್‌ ಪಂದ್ಯಾವಳಿಯ ಲೀಗ್‌ ಹಂತದಲ್ಲಿ ಕ್ರೊವೇಶಿಯ ವಿರುದ್ಧ ಅನುಭವಿಸಿದ 3-0 ಸೋಲಿಗೆ ಆರ್ಜೆಂಟೀನಾ ಇಷ್ಟೇ ಅಂತರದಿಂದ ಸೇಡು ತೀರಿಸಿಕೊಂಡದ್ದು ವಿಶೇಷ. ಜತೆಗೆ ಮೊದಲ ಪಂದ್ಯದಲ್ಲೇ ಸಾಮಾನ್ಯ ತಂಡವಾದ ಸೌದಿ ಅರೇಬಿಯಕ್ಕೆ ಸೋತು ಟೀಕೆಗೊಳಗಾದ ತಂಡವೊಂದು ಈ ಹಂತಕ್ಕೆ ಏರಿದ್ದು ಕೂಡ ವಿಶೇಷ. ಹಾಲಿ ಚಾಂಪಿಯನ್‌ ಫ್ರಾನ್ಸ್‌ ಹಾಗೂ ಇದೇ ಮೊದಲ ಸಲ ಸೆಮಿಫೈನಲ್‌ಗೆ ನೆಗೆದಿರುವ ಮೊರೊಕ್ಕೊ ನಡುವಿನ ವಿಜೇತ ತಂಡವನ್ನು ರವಿವಾರದ ಪ್ರಶಸ್ತಿ ಸಮರದಲ್ಲಿ ಆರ್ಜೆಂಟೀನಾ ಎದುರಿಸಲಿದೆ.

ಮೆಸ್ಸಿ ಮಾಯಾಜಾಲ
ಆರ್ಜೆಂಟೀನಾ ಆಡಿದ ರೀತಿ ನೋಡಿದರೆ, ನಾಯಕ ಲಿಯೋನೆಲ್‌ ಮೆಸ್ಸಿ ಅವರ “ಕಪ್‌’ ಬರ ನೀಗುವ ಸಮಯ ಸನ್ನಿಹಿತವಾದಂತೆ ಗೋಚರಿಸುತ್ತಿದೆ. ಸ್ವತಃ ಮುಂಚೂಣಿಯಲ್ಲಿ ನಿಂತ ಮೆಸ್ಸಿ 34ನೇ ನಿಮಿಷದಲ್ಲೇ ಪೆನಾಲ್ಟಿ ಮೂಲಕ ಗೋಲಿನ ಖಾತೆ ತೆರೆದು ತಂಡದಲ್ಲಿ ಸ್ಫೂರ್ತಿಯ ಅಲೆಯನ್ನೆಬ್ಬಿಸಿದರು. ಸರ್ವಾಧಿಕ 25 ಪಂದ್ಯಗಳ ವಿಶ್ವಕಪ್‌ ದಾಖಲೆಯನ್ನು ಸರಿದೂಗಿಸಿದ ಈ ಮುಖಾಮುಖಿ 35 ವರ್ಷದ ಮೆಸ್ಸಿ, ಜೀವಮಾನದಲ್ಲೇ ಅತ್ಯುತ್ತಮ ಆಟವಾಡಿದರು ಎಂಬುದನ್ನು ಒಪ್ಪಲೇಬೇಕಾಗುತ್ತದೆ. ತಂಡದ ಗೆಲುವಿಗಾಗಿ ಅವರು ಸರ್ವಸ್ವವನ್ನೂ ಧಾರೆ ಎರೆದಂತಿತ್ತು.

ಅಲ್ವರೇಜ್‌ ಅಸಾಮಾನ್ಯ ಆಟ
ಮೆಸ್ಸಿ ಮಾಯಾಜಾಲ ಬೀಸಿದ ಬಳಿಕ ಸ್ಟ್ರೈಕರ್‌ ಜೂಲಿಯನ್‌ ಅಲ್ವರೇಜ್‌ ಅಸಾಮಾನ್ಯ ಸಾಹಸಗೈದರು. 39ನೇ ಹಾಗೂ 69ನೇ ನಿಮಿಷದಲ್ಲಿ ಎರಡು ಗೋಲು ಬಾರಿಸುವ ಮೂಲಕ ಆರ್ಜೆಂಟೀನಾದ ಜಯಭೇರಿ ಮೊಳಗಿಸಿದರು. ಹೀಗೆ 9ನೇ ಮತ್ತು 10ನೇ ನಂಬರ್‌ ಜೆರ್ಸಿಧಾರಿಗಳು ಮೊದಲ ಸೆಮಿಫೈನಲ್‌ ಪಂದ್ಯದ ಹೀರೋಗಳಾಗಿ ಮೂಡಿಬಂದರು.

22 ವರ್ಷದ ಅಲ್ವರೇಜ್‌ 3ನೇ ಗ್ರೂಪ್‌ ಪಂದ್ಯದಲ್ಲಷ್ಟೇ ಆರ್ಜೆಂಟೀನಾ ತಂಡದಲ್ಲಿ ಅವಕಾಶ ಪಡೆದಿದ್ದರು. ಈ ಕಿರು ಅವಕಾಶದಲ್ಲಿ 4 ಗೋಲು ಸಿಡಿಸಿ ತಂಡದ ಸ್ಟಾರ್‌ ಆಟಗಾರನಾಗಿ ಮೆರೆದಿದ್ದಾರೆ. ಮೆಸ್ಸಿ ಮತ್ತು ಎಂಬಪೆಗಿಂತ ಕೇವಲ ಒಂದು ಗೋಲಿನ ಹಿನ್ನಡೆಯಲ್ಲಿದ್ದಾರೆ. 1958ರ ಬಳಿಕ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಎರಡು ಪ್ಲಸ್‌ ಗೋಲು ಹೊಡೆದ ಅತೀ ಕಿರಿಯ ಆಟಗಾರನೆಂಬುದು ಅಲ್ವರೇಜ್‌ ಹೆಗ್ಗಳಿಕೆ. ಅಂದು 17 ವರ್ಷದ ಪೀಲೆ ಹ್ಯಾಟ್ರಿಕ್‌ ಸಾಧಿಸಿದ್ದರು.

ಫೈನಲ್‌ ಗುರಿ ಈಡೇರಿದೆ
“ನಾವು ಫೈನಲ್‌ಗೆ ನೆಗೆದಿದ್ದೇವೆ. ನಮಗೆ ಇದೇ ಬೇಕಿತ್ತು. ಅಭಿಮಾನಿಗಳ, ನಮ್ಮ ಕುಟುಂಬದವರ ಸಂಭ್ರಮ, ಪ್ರೋತ್ಸಾಹಕ್ಕೆ ಋಣಿಯಾಗಿದ್ದೇವೆ’ ಎಂಬುದಾಗಿ ಆರ್ಜೆಂಟೀನಾವನ್ನು ಎರಡನೇ ಸಲ ಫೈನಲ್‌ಗೆ ಕೊಂಡೊಯ್ದ ನಾಯಕ ಮೆಸ್ಸಿ ಭಾವುಕರಾಗಿ ನುಡಿದರು.

2014ರಲ್ಲೂ ಮೆಸ್ಸಿ ಪಡೆ ಫೈನಲ್‌ ಪ್ರವೇಶಿಸಿತ್ತು. ಆದರೆ ಅಲ್ಲಿ ಜರ್ಮನಿಗೆ ಶರಣಾಗಿ ಪ್ರಶಸ್ತಿ ವಂಚಿತವಾಗಿತ್ತು. ಟ್ರೋಫಿ ಗೆಲ್ಲುವ ಕೊನೆಯ ಅವಕಾಶವನ್ನು ಮೆಸ್ಸಿ ಯಶಸ್ವಿಗೊಳಿಸಬಲ್ಲರೇ ಎಂಬುದು ಅಭಿಮಾನಿಗಳ ದೊಡ್ಡ ನಿರೀಕ್ಷೆ.

ಮೆಸ್ಸಿ ಮೈಲುಗಲ್ಲು
– ವಿಶ್ವಕಪ್‌ ಒಂದರಲ್ಲಿ ಅತ್ಯಧಿಕ 5 ಗೋಲು ಹೊಡೆದ ಅತೀ ಹಿರಿಯ ಆಟಗಾರ (35 ವರ್ಷ).
– 4 ಬೇರೆ ಬೇರೆ ವಿಶ್ವಕಪ್‌ಗ್ಳಲ್ಲಿ ಗೋಲು ಬಾರಿಸುವ ಜತೆಗೆ ಗೋಲಿಗೆ ನೆರವು ನೀಡಿದ ಏಕೈಕ ಆಟಗಾರ.
– ವಿಶ್ವಕಪ್‌ ಕೂಟವೊಂದರ ಪ್ರಿ ಕ್ವಾರ್ಟರ್‌ ಫೈನಲ್‌, ಕ್ವಾರ್ಟರ್‌ ಫೈನಲ್‌ ಮತ್ತು ಸೆಮಿಫೈನಲ್‌ನಲ್ಲಿ ಗೋಲು ಹೊಡೆದ 6ನೇ ಆಟಗಾರ. ಉಳಿದವರೆಂದರೆ ಸಾಲ್ವಟೋರ್‌ ಶಿಲಾಸಿ (1990), ರಾಬರ್ಟೊ ಬ್ಯಾಗಿಯೊ (1994), ರಿಸ್ಟೊ ಸ್ಟೋಕೋವ್‌ (1994), ಡೇವರ್‌ ಸುಕರ್‌ (1998) ಮತ್ತು ವೆಸ್ಲಿ ಸ್ನೀಜರ್‌ (2010).
– ವಿಶ್ವಕಪ್‌ನಲ್ಲಿ ಆರ್ಜೆಂಟೀನಾ ಪರ ಅತ್ಯಧಿಕ 11 ಗೋಲು ಹೊಡೆದ ದಾಖಲೆ. ಗ್ಯಾಬ್ರಿಯಲ್‌ ಬಟಿಸ್ಟುಟ ಅವರ 10 ಗೋಲುಗಳ ದಾಖಲೆ ಪತನ.
– ವಿಶ್ವಕಪ್‌ನಲ್ಲಿ ತಂಡವೊಂದನ್ನು ಅತ್ಯಧಿಕ 18 ಸಲ ಮುನ್ನಡೆಸಿದ ದಾಖಲೆ.

ಟಾಪ್ ನ್ಯೂಸ್

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್‌ ವಶ

7-

Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.