2018 ಹಾಕಿ ವಿಶ್ವಕಪ್: ಅತಿಥಿಗಳಿಗೆ ಮದ್ಯ ಪೂರೈಕೆ
Team Udayavani, Jun 6, 2018, 6:00 AM IST
ಹೊಸದಿಲ್ಲಿ: ಭುವನೇಶ್ವರದಲ್ಲಿ ನ. 28ರಿಂದ ಡಿ. 16ರ ವರೆಗೆ ನಡೆಯಲಿರುವ ಹಾಕಿ ವಿಶ್ವಕಪ್ ವೇಳೆ ಕಳಿಂಗ ಕ್ರೀಡಾಂಗಣದಲ್ಲಿ ಉಪಸ್ಥಿತರಿರುವ ಆಯ್ದ ಅತಿಥಿಗಳಿಗೆ ಮದ್ಯ ಪೂರೈಕೆ ಮಾಡಲಾಗುತ್ತದೆ. ಕೂಟದ ವೇಳೆ ಕ್ರೀಡಾಂಗಣದಲ್ಲಿ ಆಯ್ದ ಅತಿಥಿಗಳಿಗೆ ಮದ್ಯ ಪೂರೈಸಲು ಅನುಮತಿ ನೀಡುವಂತೆ ಒಡಿಶಾ ಸರಕಾರದ ಕಾರ್ಯದರ್ಶಿ ತಥಾ ಆಯುಕ್ತ ವಿಶಾಲ್ ದೇವ್ ಅವರು ಒಡಿಶಾದ ಎಕ್ಸೆ„ಸ್ ಆಯುಕ್ತರಿಗೆ ಜೂ. 3ರಂದು ಪತ್ರವೊಂದನ್ನು ಬರೆದಿದ್ದಾರೆ.
ಹಾಕಿ ಫೆಡರೇಶನ್‌ಗಳ ಮತ್ತು ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್‌ನ ಅಧಿಕಾರಿ/ ಪ್ರತಿನಿಧಿಗಳಿಗೆ ಮದ್ಯ/ಬೀರ್ ಪೂರೈಸಲು ಅನುಮತಿ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ. ಈ ಸಂಬಂಧ ದೇವ್ ಅವರನ್ನು ಸಂಪರ್ಕಿಸಿದಾಗ ಬೃಹತ್ ಕೂಟಗಳ ವೇಳೆ ಮದ್ಯ ಪೂರೈಸುವುದು ದೊಡ್ಡ ವಿಷಯವಲ್ಲ. ಕೇವಲ ಮದ್ಯ ಮತ್ತು ಬೀರ್ ಪೂರೈಸಲಾಗುತ್ತದೆ. ಅವುಗಳನ್ನು ಎಫ್ಐಎಚ್ ಮತ್ತು ರಾಷ್ಟ್ರೀಯ ಫೆಡರೇಶನ್‌ಗಳ ಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಮಾತ್ರ ಎಂದು ಸ್ಪಷ್ಟಪಡಿಸಿದರು. ರಾಜ್ಯ ಸರಕಾರ ಆತಿಥ್ಯ ವಹಿಸುತ್ತಿರುವ ಕಾರಣ ಅನುಮತಿ ನೀಡುವಂತೆ ಪತ್ರ ಸಲ್ಲಿಸಲಾಗಿದೆ. ರಾಜ್ಯದ ಫೆಡರೇಶನ್ ಈ ಕೂಟವನ್ನು ಆಯೋಜಿಸುತ್ತಿದೆ. ಹಾಗಾಗಿ ರಾಜ್ಯ ಸರಕಾರ ಇದಕ್ಕಾಗಿ ಖರ್ಚು ಮಾಡುತ್ತಿಲ್ಲ ಎಂದವರು ತಿಳಿಸಿದರು.
ಸಿದ್ಧತೆ ಸಾಗುತ್ತಿದೆ
ಪುರುಷರ ಹಾಕಿ ವಿಶ್ವಕಪ್‌ಗಾಗಿ ಭಾರೀ ಸಿದ್ಧತೆ ನಡೆಸಲಾಗುತ್ತಿದೆ. ಆತಿಥ್ಯ ನಗರವನ್ನು ಸುಂದರ ಗೊಳಿಸಲು ಸರಕಾರ ಮತ್ತು ಭುವನೇಶ್ವರ್ ಮುನಿಸಿ ಪಾಲ್ ಕಾರ್ಪೊರೇಶನ್ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಭುವನೇಶ್ವರದಲ್ಲಿ 2017ರಲ್ಲಿ ಹಾಕಿ ವಿಶ್ವ ಲೀಗ್ ಫೈನಲ್ ಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಅದೇ ಉತ್ಸಾಹದಲ್ಲಿ ವಿಶ್ವಕಪ್ ಆಯೋ ಜಿಸಲು ನಗರ ಸಜ್ಜುಗೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.