ಸಂಗೀತ ಕೇಳ್ತಾ ಕೇಳ್ತಾನೇ 5 ಕಿ.ಮೀ. ಮ್ಯಾರಥಾನ್ ಓಡಿ..!
Team Udayavani, Aug 2, 2017, 12:29 PM IST
ಬೆಂಗಳೂರು: ಸಿಲಿಕಾನ್ ಸಿಟಿ ಮ್ಯಾರಥಾನ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಇಷ್ಟು ದಿನ ನೀವು 10ಕೆ ಮ್ಯಾರಥಾನ್ ಓಡಿದ್ದೀರಿ. ನಿಮಗೆ ಅದರ ಅನುಭವವೂ ಇದೆ. ಈಗ ನಿಮಗಾಗಿ ಹೊಸ ರೀತಿಯಲ್ಲಿ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿದೆ. ಅದೇನೆಂದರೆ ಹಾಡು (ಸಂಗೀತ) ಕೇಳ್ತಾ ಕೇಳ್ತಾ ಓಡುವುದು. ಒಟ್ಟಾರೆ 5 ಕಿ.ಮೀ. ಓಟವಾಗಿದ್ದು ವಿನೂತನ ಶೈಲಿಯಲ್ಲಿ ಸಂಘಟಕ ವಿಶಾಲ್ ಕೂಟ ಆಯೋಜಿಸಲು ನಿರ್ಧರಿಸಿದ್ದಾರೆ. ಅ.19ರಂದು ಬೆಂಗಳೂರಿನ ದೇವನಹಳ್ಳಿ ಸಮೀಪದ ಕ್ಲಾರ್ಕ್ ಎಕೊಟಿಕ ರೆಸಾರ್ಟ್ ಸಮೀಪ ಮ್ಯಾರಥಾನ್ ಆಯೋಜಿಸಲಾಗಿದೆ. ಕಳೆದ ಸಲವೂ ಕೂಟ ನಡೆದಿತ್ತು. ಆಗ ಒಟ್ಟಾರೆ 7 ಸಾವಿರ ಮಂದಿ ಭಾಗವ ಹಿಸಿದ್ದರು. ಈ ಬಾರಿ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
ಏನಿದು “ಮ್ಯೂಸಿಕ್’ ಮ್ಯಾರಥಾನ್?: ಒಟ್ಟು 5 ಕಿ.ಮೀ.ನ ಒಟ್ಟಾರೆ ರೇಸ್ ಇದು. ಒಟ್ಟು 5 ಟ್ರ್ಯಾಕ್ ಇರುತ್ತದೆ. ನಿಮಗೆ ಯಾವ ಮ್ಯೂಸಿಕ್ ಬೇಕು ಅನ್ನುವುದನ್ನು ನೀವು ಆಯ್ದುಕೊಳ್ಳಬಹುದು. ಇದಕ್ಕಾಗಿ ಮ್ಯೂಸಿಕ್ ವೊಟಿಂಗ್ ಆ್ಯಪ್‌ವೊಂದನ್ನು ತೆರೆಯಲಾಗಿದೆ. ಇಲ್ಲಿ ನಿಮ್ಮ ಆಯ್ಕೆಗೆ ಅವಕಾಶ ಇದೆ. ಹಿಪ್‌ಹಪ್, ರಾಕ್, ಓಲ್ಡ್ ಸ್ಕೂಲ್, ಡ್ಯಾನ್ಸ್ ಹಾಗೂ ಪಾಪ್ ಸಂಗೀತವಿರುತ್ತದೆ. ಇದಕ್ಕಾಗಿ ಸುಮಾರು 5 ಕಿ.ಮೀ.ವರೆಗೆ ಬೃಹತ್ ಧ್ವನಿ ವರ್ಧಕಗಳನ್ನು ಅಳವಡಿಸಲಾಗಿದೆ. ಕಿ.ಮೀ.ಗೊಂದರಂತೆ ಹಾಡುಗಳು ಬದಲಾಗುತ್ತದೆ. ಓಡುವ ನಿಮಗೆ ಜೋಶ್ ಹೆಚ್ಚಿಸುತ್ತದೆ. ಮಾತ್ರವಲ್ಲ ಥ್ರಿಲ್ ಹೆಚ್ಚಿಸುತ್ತದೆ ಎಂದು ಸಂಘಟಕ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಕೂಟಕ್ಕೆ ಖ್ಯಾತ ಡಿಜೆ ಆಸೀಸ್‌ನ ಶಾನ್ ಹಾಗೂ ಡಿಜೆ ಜಯೆಡನ್ ಪ್ರದರ್ಶನ ನೀಡುವ ಮೂಲಕ ತಾರಾ ಮೆರುಗು ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.