ಕೊರೊನಾ ಸೋಂಕಿಲ್ಲ; ಕಿವೀಸ್ ವೇಗಿ ಲಾಕಿ ಫರ್ಗ್ಯುಸನ್ ನಿರಾಳ
Team Udayavani, Mar 15, 2020, 11:15 AM IST
ಸಿಡ್ನಿ: ಮೊನ್ನೆಯಷ್ಟೇ ಚೇತರಿಸಿಕೊಂಡು ನ್ಯೂಜಿಲೆಂಡ್ ತಂಡಕ್ಕೆ ಮರಳಿದ ವೇಗಿ ಲಾಕಿ ಫರ್ಗ್ಯುಸನ್ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.
ಸಿಡ್ನಿ ಏಕದಿನ ಪಂದ್ಯ ಮುಗಿದ ಬಳಿಕ ಅವರಿಗೆ ಗಂಟಲು ನೋವು ಕಾಣಿಸಿಕೊಂಡ ಕಾರಣ, ಕೊರೊನಾ ಭೀತಿ ಕಾಡಿತ್ತು. ಹೀಗಾಗಿ ಅವರನ್ನು ಹೊಟೇಲಿನ ಕೊಠಡಿಯಲ್ಲೇ ತೀವ್ರ ನಿಗಾದಲ್ಲಿಇರಿಸಲಾಗಿತ್ತು. ಆದರೆ ಇದು ಕೊರೊನಾ ಅಲ್ಲ ಎಂಬುದಾಗಿ ವೈದ್ಯಕೀಯ ವರದಿ ತಿಳಿಸಿದ್ದು, ಫರ್ಗ್ಯುಸನ್ ನ್ಯೂಜಿಲೆಂಡಿಗೆ ವಾಪಸಾಗಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಆಸ್ಟ್ರೇಲಿಯದ ವೇಗಿ ಕೇನ್ ರಿಚರ್ಡ್ಸನ್ ಕೂಡ ಇದೇ ಸಂಕಟಕ್ಕೆ ಸಿಲುಕಿದ್ದರು. ಅವರನ್ನು ಕೊರೊನಾ ಕಾಡಿದೆ ಎಂದು ಸುದ್ದಿಯಾಗಿತ್ತು. ಕೊನೆಗೆ ನೆಗೆಟೀವ್ ಎಂಬುದಾಗಿ ವರದಿ ಬಂದಿತ್ತು.
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಏಕದಿನ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.