ಎ. 24ರ ಲಂಡನ್ ಮ್ಯಾರಥಾನ್ ಅ. 4ಕ್ಕೆ
Team Udayavani, Mar 14, 2020, 11:26 PM IST
ಲಂಡನ್: ಜಾಗತಿಕ ಮ್ಯಾರಥಾನ್‌ಗಳಲ್ಲೇ ವಿಶಿಷ್ಟ ಇತಿಹಾಸ ಹೊಂದಿರುವ ಲಂಡನ್ ಮ್ಯಾರಥಾನ್ ಮುಂದೂಡಲ್ಪಟ್ಟಿದೆ. ಎ. 24ರಂದು ನಡೆಯಬೇಕಿದ್ದ ಈ ಮ್ಯಾರಥಾನ್ ಅಕ್ಟೋಬರ್ 4ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
“ಈಗಾಗಲೇ ಈ ಮ್ಯಾರಥಾನ್‌ಗೆ ಹೆಸರು ನೋಂದಾಯಿಸಿಕೊಂಡವರು ಹೆಚ್ಚುವರಿ ಪ್ರವೇಶ ಶುಲ್ಕ ನೀಡದೆ ಇದರಲ್ಲಿ ಪಾಲ್ಗೊಳ್ಳಬಹುದು. ಅಕಸ್ಮಾತ್ ಪರಿಷ್ಕೃತ ದಿನಾಂಕದಂದು ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದರೆ ಅವರ ಪ್ರವೇಶಧನವನ್ನು ಮರಳಿಸಲಾಗುತ್ತದೆ ಅಥವಾ 2021ರ ಮ್ಯಾರಥಾನ್‌ಗೆ ಇದನ್ನು ಕಾದಿರಿಸಲಾಗುತ್ತದೆ. ಆದರೆ ಆಗ ಪ್ರವೇಶಧನ 2021ರ ಮಾನದಂಡದ ವ್ಯಾಪ್ತಿಗೆ ಒಳಪಡುತ್ತದೆ’ ಎಂದು ಕೂಟದ ನಿರ್ದೇಶಕ ಹ್ಯೂಗ್ ಬ್ರಾಶರ್ ಹೇಳಿದ್ದಾರೆ.
2021ರ ಲಂಡನ್ ಮ್ಯಾರಥಾನ್ ಎ. 25ರಂದು ನಡೆಯಲಿದೆ.
ಬೋಸ್ಟನ್ ಮ್ಯಾರಥಾನ್ ಮುಂದಕ್ಕೆ
ಇದೇ ವೇಳೆ ಬೋಸ್ಟನ್ ಮ್ಯಾರಥಾನ್ ಕೂಟ ಕೂಡ ಸೆ. 14ರ ತನಕ ಮುಂದೂಡಲ್ಪಟ್ಟಿದೆ. ಬೋಸ್ಟನ್ ನಗರದ ಮೇಯರ್ ಮಾರ್ಟಿ ವಾಲ್ಶ್ ಈ ನಿರ್ಧಾರವನ್ನು ಪ್ರಕಟಿಸಿದರು. ಮೂಲ ವೇಳಾಪಟ್ಟಿಯಂತೆ ಇದು ಎ. 20ರಂದು ನಡೆಯಬೇಕಿತ್ತು.
ಇದಕ್ಕೆ ಈಗಾಗಲೇ 31 ಸಾವಿರ ಓಟಗಾರರು ಹೆಸರು ನೋಂದಾಯಿಸಿದ್ದಾರೆ. ಹಾಗೆಯೇ ಸುಮಾರು ಒಂದು ಮಿಲಿಯದಷ್ಟು ಮಂದಿ ಇದನ್ನು ವೀಕ್ಷಿಸಲಿದ್ದಾರೆ. ಪ್ರತೀ ವರ್ಷ ಈ ಮ್ಯಾರಥಾನ್‌ನಿಂದ 211 ಮಿ. ಡಾಲರ್ ಮೊತ್ತ ಸಂಗ್ರಹಗೊಳ್ಳುತ್ತದೆ. ಇದರಲ್ಲಿ 40 ಮಿ. ಡಾಲರ್‌ನಷ್ಟು ಮೊತ್ತವನ್ನು ವಿವಿಧ ಸಹಾಯಾರ್ಥ ನಿಧಿಗೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikhar Dhawan: ನೇಪಾಳದಲ್ಲಿ ಟಿ20 ಕ್ರಿಕೆಟ್ ಲೀಗ್ ಆಡಲಿದ್ದಾರೆ ಶಿಖರ್ ಧವನ್
Ekamra: ನ.23ರಂದು ದೆಹಲಿಯಲ್ಲಿ ಏಷ್ಯಾದ ಅತಿದೊಡ್ಡ ಕ್ರೀಡಾ ಸಾಹಿತ್ಯಕೂಟ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
INDvsSA: ಭುವನೇಶ್ವರ್ ಕುಮಾರ್ ರ ಟಿ20ಐ ದಾಖಲೆ ಮುರಿದ ವೇಗಿ ಅರ್ಶದೀಪ್ ಸಿಂಗ್
Arjun Tendulkar: 5 ವಿಕೆಟ್ ಕೆಡವಿದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಆಯ್ಕೆಗೆ ಸಜ್ಜು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.