Lord’s Test: ಎಂಟನೇ ಕ್ರಮಾಂಕದಲ್ಲಿ ಆಡಲಿಳಿದು ಅಟ್ಕಿನ್ಸನ್ ಶತಕ
Team Udayavani, Aug 31, 2024, 12:08 AM IST
ಲಂಡನ್: ಎಂಟನೇ ಕ್ರಮಾಂಕದಲ್ಲಿ ಆಡಲಿಳಿದು ಶತಕ ಬಾರಿಸಿದ ಗಸ್ ಅಟ್ಕಿನ್ಸನ್, ಶ್ರೀಲಂಕಾ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ಗೆ ಮೇಲುಗೈ ತಂದಿತ್ತಿದ್ದಾರೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 427 ರನ್ ಪೇರಿಸಿದೆ. ಇದರಲ್ಲಿ ಅಟ್ಕಿನ್ಸನ್ ಗಳಿಕೆ 118 ರನ್. ಮೂಲತಃ ಬೌಲರ್ ಆಗಿರುವ ಅಟ್ಕಿನ್ಸನ್ ತಮ್ಮ ಕ್ರಿಕೆಟ್ ಬಾಳ್ವೆಯಲ್ಲಿ ಬಾರಿಸಿದ ಮೊದಲ ಶತಕ ಇದಾಗಿದೆ. 115 ಎಸೆತ ನಿಭಾಯಿಸಿದ ಅವರು 14 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ಲಾರ್ಡ್ಸ್ ಅಂಗಳದಲ್ಲಿ ಮೆರೆದರು. ಈ ಐತಿಹಾಸಿಕ ಅಂಗಳದಲ್ಲಿ ಶತಕ ಬಾರಿಸಿದ ವಿಶ್ವದ ಕೇವಲ 6ನೇ ಬೌಲರ್ ಎಂಬುದು ಅಟ್ಕಿನ್ಸನ್ ಹೆಗ್ಗಳಿಕೆ. ಉಳಿದವರೆಂದರೆ ಗಾಬಿ ಅಲೆನ್, ರೇ ಇಲ್ಲಿಂಗ್ವರ್ತ್, ಬರ್ನಾರ್ಡ್ ಜೂಲಿಯನ್, ಸ್ಟುವರ್ಟ್ ಬ್ರಾಡ್ ಮತ್ತು ಅಜಿತ್ ಅಗರ್ಕರ್.
ಜವಾಬು ನೀಡಿದ ಲಂಕಾ 196ಕ್ಕೆ ಆಲೌಟ್ ಆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
England vs Australia: ಲಿವಿಂಗ್ಸ್ಟೋನ್ ಅಬ್ಬರ; ಆಸೀಸ್, ಇಂಗ್ಲೆಂಡ್ ಟಿ20 ಸರಣಿ ಸಮಬಲ
Duleep Trophy: ಪ್ರಥಮ್ ಸಿಂಗ್, ತಿಲಕ್ ವರ್ಮ ಶತಕ
Dodda Ganesh: ಕೀನ್ಯಾ ಕೋಚ್ ಸ್ಥಾನದಿಂದ ದೊಡ್ಡ ಗಣೇಶ್ ವಜಾ
Pakistan Cricket Board: ಪಾಕ್ ಕ್ರಿಕೆಟ್ ಸ್ಟೇಡಿಯಂ ನವೀಕರಣಕ್ಕೆ ದೊಡ್ಡ ಮೊತ್ತ
Hockey; ಪಾಕ್ ವಿರುದ್ದ ಪ್ರಾಬಲ್ಯ ಮೆರೆದ ಭಾರತ; 2 ಗೋಲು ಬಾರಿಸಿದ ನಾಯಕ ಹರ್ಮನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.