ಭಾರತಕ್ಕೆ ಮತ್ತೊಂದು ಪದಕ: ವೇಟ್ಲಿಫ್ಟಿಂಗ್ ನಲ್ಲಿ ಲವ್ಪ್ರೀತ್ ಗೆ ಕಂಚು
Team Udayavani, Aug 3, 2022, 10:41 PM IST
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. ಇದನ್ನು ತಂದಿತ್ತವರು ಪಂಜಾಬ್ನ 24 ವರ್ಷದ ಲಿಫ್ಟರ್ ಲವ್ಪ್ರೀತ್ ಸಿಂಗ್. ಬುಧವಾರದ 109 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅವರು ತೃತೀಯ ಸ್ಥಾನ ಸಂಪಾದಿಸಿ ಕಂಚಿನ ಪದಕವನ್ನು ತಮ್ಮ ದಾಗಿಸಿಕೊಂಡರು.
ಲವ್ಪ್ರೀತ್ ಸಿಂಗ್ ಒಟ್ಟು 355 ಕೆಜಿ ಭಾರ ಎತ್ತಿದರು. ಸ್ನ್ಯಾಚ್ನಲ್ಲಿ 163 ಕೆಜಿ ಭಾರವೆತ್ತಿದ ಅವರು ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 192 ಕೆಜಿ ಸಾಧನೆಯೊಂದಿಗೆ ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದರು.
ಕ್ಯಾಮರೂನ್ನ ಜೂನಿಯರ್ ನ್ಯಬೆಯು ಚಿನ್ನ (361 ಕೆಜಿ) ಮತ್ತು ಸಮೋವಾದ ಜಾಕ್ ಒಪೆಲೊ ಬೆಳ್ಳಿ ಪದಕ ಗೆದ್ದರು (358 ಕೆಜಿ).
ಇದು ವೇಟ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಒಲಿದ 8ನೇ ಪದಕ. 3 ಚಿನ್ನದ ಪದಕಗಳನ್ನು ಇದು ಒಳಗೊಂಡಿದೆ.
ಸ್ಪರ್ಧೆ ಕಠಿನವಾಗಿತ್ತು
“ಇದು ಸೀನಿಯರ್ ವಿಭಾಗದಲ್ಲಿ ನನ್ನ ಮೊದಲ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ. ಹೀಗಾಗಿ ಸಹಜವಾಗಿ ನರ್ವಸ್ ಆಗಿದ್ದೆ. ಈ ಸಾಧನೆ ತೃಪ್ತಿಕೊಟ್ಟಿಲ್ಲ.
ಸ್ಪರ್ಧೆ ಕಠಿನವಾಗಿತ್ತು. ಕೇವಲ 3 ಕೆಜಿ ಅಂತರದಲ್ಲಿ ಬೆಳ್ಳಿ ಪದಕ ಕಳೆದು ಕೊಳ್ಳ ಬೇಕಾಯಿತು. ಆದರೆ ಪದಕ ದೊಂದಿಗೆ ಮರಳುತ್ತಿದ್ದೇನೆ ಎಂಬುದು ಖುಷಿ ಕೊಟ್ಟಿದೆ’ ಎಂದು ಮಾಜಿ ಕಾಮನ್ವೆಲ್ತ್ ಜೂನಿಯರ್ ಚಾಂಪಿಯನ್ ಆಗಿರುವ ಲುಧಿಯಾನದ ಟೈಲರ್ ಒಬ್ಬರ ಪುತ್ರನಾಗಿರುವ ಲವ್ಪ್ರೀತ್ ಹೇಳಿದರು.
2015ರಲ್ಲಿ ಭಾರತೀಯ ನೌಕಾಪಡೆಯನ್ನು ಸೇರಿಕೊಂಡ ಬಳಿಕ ಲವ್ಪ್ರೀತ್ಗೆ
ಅದೃಷ್ಟ ಖುಲಾಯಿಸತೊಡಗಿತು. ಪಟಿಯಾಲ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆ ಯಾದರು. 2017ರಲ್ಲಿ ಕಾಮನ್ವೆಲ್ತ್ ಜೂನಿಯರ್ ಚಾಂಪಿಯನ್ನಲ್ಲಿ ಚಿನ್ನ, ಏಷ್ಯನ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.