ಕ್ರೀಡಾಗ್ರಾಮಕ್ಕೆ ಮರಳಲಾಗದೆ ಲವ್ಲಿನಾ ಬೊರ್ಗೊಹೇನ್ ಅತಂತ್ರ
Team Udayavani, Jul 29, 2022, 11:11 PM IST
ಬರ್ಮಿಂಗ್‌ಹ್ಯಾಮ್: ತನಗೆ ಭಾರತ ಒಲಿಂಪಿಕ್ ಸಂಸ್ಥೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಆರೋಪಿಸಿದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಈಗ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಗುರುವಾರ ರಾತ್ರಿ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನ ಸಮಾರಂಭ ನಡೆಯುತ್ತಿದ್ದಾಗ, ಅರ್ಧದಿಂದಲೇ ಕ್ರೀಡಾಗ್ರಾಮಕ್ಕೆ ಮರಳಲು ತೀರ್ಮಾನಿಸಿದ್ದಾರೆ. ಆದರೆ ಮರಳಲು ಸೂಕ್ತ ವ್ಯವಸ್ಥೆಯಿಲ್ಲದೇ ಪರದಾಡಿದ್ದಾರೆ. ಲವ್ಲಿನಾ ಅವರ ಈ ನಡೆ ತಂಡದ ವ್ಯವಸ್ಥಾಪಕ ರಾಜೇಶ್ ಭಂಡಾರಿಯವರ ಸಿಟ್ಟಿಗೆ ಕಾರಣವಾಗಿದೆ.
ಮರುದಿನ ಬೆಳಗ್ಗೆ ಬೇಗ ಎದ್ದು ಅಭ್ಯಾಸ ನಡೆಸುವ ದೃಷ್ಟಿಯಿಂದ ಲವ್ಲಿನಾ ಮತ್ತು ಇನ್ನೊಬ್ಬ ಬಾಕ್ಸರ್ ಹುಸಮುದ್ದೀನ್ ಬೇಗ ಹಿಂದಿರುಗಲು ತೀರ್ಮಾನಿಸಿದ್ದರು. ಆದರೆ ಅವರಿಗೆ ಸಂಘಟಕರಿಂದ ಯಾವುದೇ ವಾಹನ ಸಿಗಲಿಲ್ಲ. ಉದ್ಘಾಟನೆ ಮುಗಿದ ಮೇಲಷ್ಟೇ ವಾಹನಗಳು ಲಭ್ಯವಿದ್ದವು. ಕೆಲ ಹೊತ್ತು ಅತಂತ್ರರಾಗಿ ಪರದಾಡಿದ ಅವರು “ಅಲೆಕ್ಸಾಂಡರ್ ಸ್ಟೇಡಿಯಂ’ನಿಂದ ಕ್ರೀಡಾಗ್ರಾಮಕ್ಕೆ ಬಸ್‌ನಲ್ಲಿ ಮರಳಿದ್ದಾರೆ.
ಪ್ರಶ್ನಾರ್ಹ ನಡೆ
ಇದು ಗೊಂದಲ ಸೃಷ್ಟಿಸಿದೆ. ತಮಗೆ ಬೇಕನಿಸಿದಾಗ ವಾಪಸ್ ಮರಳಲು ಒಂದೂ ವಾಹನ ಲಭ್ಯವಾಗದಿದ್ದದ್ದು ವಿವಾದಕ್ಕೆ ಕಾರಣವಾಗಿದೆ. ಹಾಗೆಯೇ ಆಟಗಾರ್ತಿಯರ ಈ ನಡೆಯೂ ಪ್ರಶ್ನಾರ್ಹವಾಗಿದೆ. ಇದನ್ನು ವ್ಯವಸ್ಥಾಪಕ ರಾಜೇಶ್ ಅವರು ನೇರವಾಗಿ ಪ್ರಶ್ನಿಸಿದ್ದಾರೆ. “ಒಂದು ವೇಳೆ ಬೆಳಗ್ಗೆ ಅಭ್ಯಾಸ ನಡೆಸಬೇಕು ಎಂದಿದ್ದರೆ ಅವರು ಉದ್ಘಾಟನೆಗೆ ಬರುವ ಅಗತ್ಯವಿರಲಿಲ್ಲ. ಬಹಳ ಮಂದಿ ಹೀಗೆಯೇ ಮಾಡಿದ್ದಾರೆ. ಬಂದ ಮೇಲೆ ಅರ್ಧಕ್ಕೆ ಮರಳಲು ವಾಹನದ ವ್ಯವಸ್ಥೆ ಇರಲಿಲ್ಲ’ ಎಂದು ರಾಜೇಶ್ ವಿವರಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ತನ್ನ ಕೋಚ್‌ಗಳಿಗೆ ಕ್ರೀಡಾಗ್ರಾಮಕ್ಕೆ ಪ್ರವೇಶ ನೀಡದೇ ತೊಂದರೆ ನೀಡಲಾಗುತ್ತಿದೆ ಎಂದು ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಆರೋಪಿಸಿದ್ದರು. ಕೂಡಲೇ ಅವರ ಕೋಚ್‌ಗೆ ಪ್ರವೇಶ ನೀಡಲಾಗಿತ್ತು. ಇದೀಗ ಇನ್ನೊಂದು ಸಣ್ಣ ವಿಷಯ ದೊಡ್ಡದಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.