ಸುಂದರಗೊಳ್ಳಲಿದೆ ಲವ್ಲಿನಾ ಹಳ್ಳಿಯ ಕಳಪೆ ರಸ್ತೆ!
Team Udayavani, Aug 4, 2021, 6:25 AM IST
ಗುವಾಹಟಿ: 69 ಕೆಜಿ ಮಹಿಳಾ ಬಾಕ್ಸಿಂಗ್ನಲ್ಲಿ ಸೆಮಿಫೈನಲ್ಗೇರಿರುವ ಅಸ್ಸಾಂನ ಲವ್ಲಿನಾ ಬೊರ್ಗೊಹೇನ್ಗೆ ಕನಿಷ್ಠ ಕಂಚು ಬರುವುದಂತೂ ಖಾತ್ರಿಯಾಗಿದೆ.
ಬುಧವಾರ ನಡೆಯುವ ಸೆಮಿಫೈನಲ್ನಲ್ಲಿ ಆಕೆ ಗೆದ್ದರೆ ಚಿನ್ನ, ಬೆಳ್ಳಿಗಾಗಿಯೂ ಯತ್ನಿಸಬಹುದು. ಅದಿರಲಿ, ಹೊಸ ಸುದ್ದಿಯೇನೆಂದರೆ ಅಸ್ಸಾಂನ ಗೋಲಘಾಟ್ ಜಿಲ್ಲೆಯಲ್ಲಿರುವ ಆಕೆಯ ಹಳ್ಳಿಯ ಬಾರೊಮುಥಿಯದಲ್ಲಿ ರಸ್ತೆ ಪೂರ್ಣ ಹಾಳಾಗಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಯೇ ಅದಕ್ಕೆ ಕಾರಣ. ಇದೀಗ ಜಿಲ್ಲಾಡಳಿತ ಈ ರಸ್ತೆಯ ದುರಸ್ತಿಗೆ ಮುಂದಾಗಿದೆ. ಇದುವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆ ರಸ್ತೆಗೆ ಲವ್ಲಿನಾ ಕಾರಣಕ್ಕೆ ಮುಕ್ತಿಯ ಸಿಕ್ಕಿದೆ. ಲವ್ಲಿನಾ ಪದಕದೊಂದಿಗೆ ಹಳ್ಳಿಗೆ ವಾಪಸಾಗುವಾಗ ಈ ಕಳಪೆ ರಸ್ತೆಯೇ ಸುದ್ದಿಗೆ ಗ್ರಾಸವಾಗಬಾರದು ಎನ್ನುವುದು ಇಲ್ಲಿನ ಕಳಕಳಿ. ಒಟ್ಟು 3.5 ಕಿ.ಮೀ. ದೂರದ ಈ ರಸ್ತೆಯನ್ನು ನಿರ್ಮಿಸಲು ಸ್ಥಳೀಯ ಶಾಸಕ ಬಿಸ್ವಜಿತ್ ಫುಕನ್ ಖುದ್ದು ಆಸಕ್ತಿ ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.