Low level of anxiety; ಲಂಕಾ ಕ್ರಿಕೆಟಿಗರಿಗೆ ಕೊರೊನಾ ಕಾಟ?
Team Udayavani, Aug 26, 2023, 7:08 AM IST
ಕೊಲಂಬೊ: ಶ್ರೀಲಂಕಾದ ಇಬ್ಬರು ಕ್ರಿಕೆಟಿಗರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಶ್ರೀಲಂಕಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥೇಯ ರಾಷ್ಟ್ರಗಳಲ್ಲೊಂದಾದ ಕಾರಣ ಸಣ್ಣ ಮಟ್ಟದ ಆತಂಕವೊಂದು ಎದುರಾಗಿದೆ.
ಕೊರೊನಾ ಸೋಂಕಿಗೆ ಸಿಲುಕಿದವರೆಂದರೆ ಆರಂಭಕಾರ ಆವಿಷ್ಕ ಫೆರ್ನಾಂಡೊ ಮತ್ತು ವಿಕೆಟ್ ಕೀಪರ್ ಕುಸಲ್ ಪೆರೆರ.ಇದೇ ವೇಳೆ ಲೆಗ್‌ಸ್ಪಿನ್ನರ್ ವನಿಂದು ಹಸರಂಗ ಮತ್ತು ಪೇಸರ್ ದುಷ್ಮಂತ ಚಮೀರ ಗಾಯಾಳಾಗಿದ್ದು, ಏಷ್ಯ ಕಪ್‌ನಲ್ಲಿ ಆಡುವ ಸಾಧ್ಯತೆ ದೂರವಾಗಿದೆ.
ಶ್ರೀಲಂಕಾ ತನ್ನ ಏಷ್ಯಾಕಪ್ ಅಭಿಯಾನವನ್ನು ಆ 31 ರಂದು ಪಲ್ಲೆಕೆಲೆಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಅವರು ತಮ್ಮ ಎರಡನೇ ಗುಂಪಿನ ಪಂದ್ಯವನ್ನು ಸೆಪ್ಟೆಂಬರ್ 5 ರಂದು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಆಡಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.