ಜನವಸತಿಯೇ ಇಲ್ಲದ ಲುಸೈಲ್‌ನಲ್ಲಿ ಫೈನಲ್! ಈ ಲುಸೈಲ್ ನ ವಿಶೇಷವೇನು ಗೊತ್ತೇ?
Team Udayavani, Dec 19, 2022, 7:45 AM IST
ಈ ಸಲದ ವಿಶ್ವಕಪ್ ಫುಟ್ ಬಾಲ್ ಫೈನಲ್ ನಡೆದದ್ದು ಕತಾರ್ ರಾಜಧಾನಿ, ಆ ದೇಶದ ದೊಡ್ಡ ನಗರವಾದ ದೋಹಾದಲ್ಲಲ್ಲ, ಲುಸೈಲ್‌ನಲ್ಲಿ.
ಈ ಲುಸೈಲ್ ಬಗ್ಗೆ ನಿಮಗೆ ಗೊತ್ತೇ?
ಇದು ಕತಾರ್‌ನಲ್ಲಿ ಎರಡನೇ ದೊಡ್ಡ ನಗರ. ಇನ್ನೂ ವಿಶೇಷವೇನು ಗೊತ್ತೇ? ಇಲ್ಲಿನ್ನೂ ಜನವಸತಿಯೇ ಇಲ್ಲ. ಹಾಗಿದ್ದರೂ ಇದು ಭವಿಷ್ಯದ ನಗರಿ ಎಂದೇ ಕರೆಸಿಕೊಂಡಿದೆ. ಇಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಹೆದ್ದಾರಿಗಳು, ಮನುಷ್ಯ ನಿರ್ಮಿತ ದ್ವೀಪಗಳಿವೆ. ಚಿಮ್ಮುವ ಕಾರಂಜಿಗಳಿವೆ, ಪಾದಚಾರಿ ಮಾರ್ಗದಡಿಯಿಂದ ಮೇಲೆ ಚಿಮ್ಮುವ ಗಾಳಿಯಿದೆ. ಅಂತಹ ಬಿರುಬಿಸಿಲಿನಲ್ಲೂ ನಿಮ್ಮನ್ನು ತಂಪು ಮಾಡುವ ತಂಗಾಳಿಯಿದೆ. ಇವೆಲ್ಲ ಕತಾರ್ ಸರಕಾರ, ಈ ಪ್ರದೇಶ ಜನವಸತಿ ಯೋಗ್ಯವಾಗುವಂತೆ ಮಾಡಲು ನಡೆಸಿರುವ ಶ್ರಮದ ಪರಿಣಾಮ.
ಮುಂದೆ ಈ ಜಾಗದಲ್ಲಿ 4.50 ಲಕ್ಷ ಮಂದಿ ವಾಸಿಸುವ ನಿರೀಕ್ಷೆಯಿದೆ. ಭಾರತದ ನಗರಗಳಿಗೆ ಹೋಲಿಸಿದರೆ ಜಿಲ್ಲಾ ಕೇಂದ್ರದಲ್ಲೇ ಇದಕ್ಕಿಂತ ಹೆಚ್ಚು ಜನರು ವಾಸಿಸುತ್ತಾರೆ.
ಇಂಥದ್ದೊಂದು ಜನರೇ ಇಲ್ಲದ ಜಾಗದಲ್ಲಿ ಹಿಂದೆಂದೂ ಫುಟ್ ಬಾಲ್ ವಿಶ್ವಕಪ್ ಫೈನಲ್ ನಡೆದಿಲ್ಲ.
ಅಂದಹಾಗೆ ವಿಷಯ ಗೊತ್ತಾ? ಕತಾರ್ 2036 ಒಲಿಂಪಿಕ್ಸ್ ಆಯೋಜನೆಗೆ ತಯಾರಿ ನಡೆಸಿದೆಯಂತೆ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.