ಕರುಣಾನಿಧಿಗೆ ಕ್ರಿಕೆಟ್ ಎಂದರೆ ಪ್ರಾಣ!
Team Udayavani, Aug 9, 2018, 7:00 AM IST
ಚೆನ್ನೈ: ಮಂಗಳವಾರ ನಿಧನ ಹೊಂದಿದ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಹಲವು ಆಸಕ್ತಿ- ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದರಿಂದ ಅವರ 94 ವರ್ಷಗಳ ಸುದೀರ್ಘ ಜೀವನ ವರ್ಣರಂಜಿತವೂ ಆಗಿತ್ತು.
ಕವಿ, ನಾಟಕಕಾರ, ಸಂಭಾಷಣೆ ಬರೆಯುವ ಕಲೆ ಅವರಿಗೆ ಸಿದ್ಧಿಸಿತ್ತು. ಸ್ವತಂತ್ರ ಭಾರತದ ಗಮನಾರ್ಹ ರಾಜಕಾರಣಿ ಆಗಿದ್ದ ಅವರು, ಇದೆಲ್ಲಕ್ಕಿಂತಲೂ ಹೆಚ್ಚಾಗಿ ಕ್ರಿಕೆಟ್‌ನ ಕಟ್ಟಾ ಅಭಿಮಾನಿಯಾಗಿದ್ದರು. ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವುದಕ್ಕಾಗಿಯೇ ಕರುಣಾನಿಧಿ ಹಲವು ಸಭೆಗಳು, ಕಾರ್ಯಕ್ರಮಗಳು ಹಾಗೂ ಗಣ್ಯರು, ಅಧಿಕಾರಿಗಳ ಭೇಟಿಯನ್ನೂ ತಪ್ಪಿಸಿದ್ದರು.
ಸಚಿನ್ ತೆಂಡುಲ್ಕರ್ ನಿವೃತ್ತಿಯ ಭಾಷಣ ಕೇಳಲು ಅವರು ತಮ್ಮೆಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಿದ್ದರು. ಕ್ರಿಕೆಟ್ ಪಂದ್ಯಗಳಿಗಾಗಿ ಕರುಣಾನಿಧಿ ಅವರು ಒಂದೋ ಸಭೆಗಳ ಸಮಯ ಬದಲಿಸುತ್ತಿದ್ದರು, ಇಲ್ಲವೇ ಅವುಗಳನ್ನು ರದ್ದು ಮಾಡುತ್ತಿದ್ದರೆಂದು ಅವರ ಆಪ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧೋನಿ ನೆಚ್ಚಿನ ಆಟಗಾರ
ಕರುಣಾನಿಧಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ಕಪ್ತಾನ ಕಪಿಲ್‌ದೇವ್ ಅವರ ಅಭಿಮಾನಿಯೂ ಆಗಿದ್ದರು. ಆದರೆ, ಅವರ ನೆಚ್ಚಿನ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಅವರನ್ನು ಚೆನ್ನೈಯ ದತ್ತುಪುತ್ರ ಎಂದೇ ಕರುಣಾ ಕರೆಯುತ್ತಿದ್ದರು. ಧೋನಿ ಕ್ರೀಡಾಂಗಣದಲ್ಲಿ ಹರಿಸುತ್ತಿದ್ದ ಮಿಂಚನ್ನು ಕಣ್ತುಂಬಿಕೊಳ್ಳಲೆಂದೇ ಕರುಣಾನಿಧಿ ಸಿಎಸ್‌ಕೆ ತಂಡದ ಪಂದ್ಯಗಳನ್ನು ಬಿಡದೆ ವೀಕ್ಷಿಸುತ್ತಿದ್ದರು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಕ್ರೀಡಾಂಗಣಕ್ಕೆ ಹೋಗುವ ಬದಲು ಮನೆಯಲ್ಲೇ ಟೀವಿಯಲ್ಲಿ ಪಂದ್ಯ ಗಳನ್ನು ನೋಡುವುದು ಅವರಿಗೆ ಅನಿವಾರ್ಯವಾಯಿತು.
2001ರಲ್ಲಿ ಭಾರತ ತಂಡ ಐಸಿಸಿ ವಿಶ್ವಕಪ್ ಗೆದ್ದಾಗ ಧೋನಿ ಹಾಗೂ ತಂಡಕ್ಕೆ ಕರುಣಾನಿಧಿ 3 ಕೋಟಿ ರೂ. ಬಹುಮಾನ ಘೋಷಿಸಿದರು. ಚೆನ್ನೈ ಹುಡುಗ ರವಿಚಂದ್ರನ್ ಅಶ್ವಿನ್‌ಗೆಂದು ಕೋಟಿ ರೂ. ಬಹುಮಾನ ನೀಡಿದ್ದರು.
ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರನ್ನೂ ಕರುಣಾನಿಧಿ ಬಹುವಾಗಿ ಮೆಚ್ಚಿಕೊಂಡಿದ್ದರು. ತಮಿಳುನಾಡಿನ ಅಳಿಯ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಕರುಣಾನಿಧಿ ನಿವಾಸಕ್ಕೆ ಆಗಾಗ ಭೇಟಿ ನೀಡುತ್ತಿದ್ದರು.
“ನಿಮ್ಮ ಉಪಸ್ಥಿತಿಯೇ ಭೂಷಣ’
ಕೇಂದ್ರ ಸರಕಾರ ಸಚಿನ್ ತೆಂಡುಲ್ಕರ್ ಅವರಿಗೆ ಭಾರತರತ್ನ ಪ್ರದಾನ ಮಾಡಲು ನಿರ್ಧರಿಸಿದಾಗ, “ನೀವು (ತೆಂಡುಲ್ಕರ್) ಇತಿಹಾಸದ ಕಡೆಗೆ ಸಾಗಿದ್ದೀರಿ. ಅಲ್ಲಿ ನಿಮ್ಮ ಉಪಸ್ಥಿತಿಯೇ ಭೂಷಣ. ನಿಮ್ಮ ಅಮೋಘ ಸಾಧನೆಗಳು, ದಾಖಲೆಗಳನ್ನು ಪರಿಗಣಿಸಿದರೆ ಸರಕಾರ ಸಹಜವಾಗಿಯೇ ನಿಮಗೆ ಭಾರತರತ್ನ ಘೋಷಿಸಿದೆ. ಕ್ರೀಡೆಗೆ ನಿಮ್ಮಿಂದಲೇ ಔನ್ನತ್ಯ ಒದಗಿದೆ’ ಎಂದು ಕರುಣಾನಿಧಿ ಶ್ಲಾ ಸಿದ್ದರು.
ಸಮಾರಂಭವೊಂದರಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಕರುಣಾನಿಧಿ ಸಮ್ಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.