ಬದಲಾಯ್ತು ‘ಧೋನಿ’ ಹೇರ್ ಸ್ಟೈಲ್!
Team Udayavani, Feb 18, 2019, 9:24 AM IST
ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಯಶಸ್ವೀ ನಾಯಕರಲ್ಲೊಬ್ಬರಾಗಿರುವ ಮತ್ತು ವಿಶ್ವದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ‘ಯೂತ್ ಐಕಾನ್’ ಸಹ ಆಗಿದ್ದಾರೆ. ಅವರ ಕೇಶವಿನ್ಯಾಸ, ಬೈಕ್ ಕ್ರೇಝ್, ಕೂಲ್ ನೇಚರ್ ಎಲ್ಲವೂ ಸಹ ಯುವ ಜನಾಂಗದ ಆಕರ್ಷಣೆಯ ವಸ್ತುವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಾಗಿನಿಂದ ಎಂ.ಎಸ್.ಧೋನಿ ಅವರು ವಿವಿಧ ಕೆಶವಿನ್ಯಾಸಗಳಿಂದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದೀಗ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಹತ್ತು ವರ್ಷಗಳಾಗುತ್ತಾ ಬಂದಿದ್ದರೂ ಇಂದಿಗೂ 37 ವರ್ಷ ಪ್ರಾಯದ ಧೋನಿ ಅವರ ಕೇಶ ವಿನ್ಯಾಸ ಅವರ ಅಭಿಮಾನಿಗಳಿಗೆ ಕುತೂಹಲದ ವಿಷಯವಾಗಿರುತ್ತದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಲು ಸಿದ್ಧವಾಗಿರುವಂತೆ ಇತ್ತ ಧೋನಿ ಅವರ ಕೇಶ ವಿನ್ಯಾಸವೂ ಸಹ ಬದಲಾಗಿದೆ. ಎರಡೂ ಬದಿಗಳಲ್ಲಿ ಫುಲ್ ಟ್ರಿಮ್ ಆಗಿರುವಂತೆ ಮೇಲ್ಭಾಗದಲ್ಲಿ ಸಣ್ಣ ಸ್ಪೈಕ್ ಇರುವಂತಹ ಫ್ರೆಶ್ ಕೇಶವಿನ್ಯಾಸದಲ್ಲಿ ಇದೀಗ ಧೋನಿ ಅವರು ತುಂಬಾ ಮೆಚ್ಯೂರ್ಡ್ ಆಗಿ ಕಾಣಿಸುತ್ತಿದ್ದಾರೆ. ಕೂಲ್ ಕಪ್ತಾನನ ಈ ಹೊಸ ಕೇಶವಿನ್ಯಾಸ ಮಾದರಿಯನ್ನು ಅವರ ಗೆಳತಿ ಮತ್ತು ಕೇಶವಿನ್ಯಾಸಕಿ ಸಪ್ನಾ ಭವಾನಿ ಅವರು ತನ್ನ ಟ್ವಿಟರ್ ಹಾಗೂ ಇನ್ ಸ್ಟ್ರಾಗ್ರಾಂ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಹೊಸ ಕೇಶ ವಿನ್ಯಾಸದೊಂದಿಗೆ ಮುಂಬರುವ ಆಸೀಸ್ ಎದುರಿನ ತವರಿನ ಪಂದ್ಯಗಳಲ್ಲಿ ಧೋನಿ ಅವರ ಆಟ ಮೇಲಾಟ ಹೇಗಿರಬಹುದೆಂಬ ಕುತೂಹಲ ಇದೀಗ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.
Hi handsome. ❤️
#dhoni #madowothair #sapnabhavnani pic.twitter.com/EfvyOrbaFB
— Sapna Moti Bhavnani (@sapnabhavnani) February 15, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.