ಮ್ಯಾಡ್ರಿಡ್ ಓಪನ್ ಟೆನಿಸ್: ಜೊಕೋ-ಸಿಸಿಪಸ್ ಪ್ರಶಸ್ತಿ ಕಾದಾಟ
ಹಾಲೆಪ್‌ಗೆ ಆಘಾತವಿಕ್ಕಿ ಪ್ರಶಸ್ತಿ ಗೆದ್ದ ಕಿಕಿ ಬರ್ಟೆನ್ಸ್
Team Udayavani, May 13, 2019, 9:29 AM IST
ಹಾಲೆಪ್‌ಗೆ ಆಘಾತವಿಕ್ಕಿ ಪ್ರಶಸ್ತಿ ಗೆದ್ದ ಕಿಕಿ ಬರ್ಟೆನ್ಸ್
ಮ್ಯಾಡ್ರಿಡ್: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ “ಮ್ಯಾಡ್ರಿಡ್ ಓಪನ್’ ಫೈನಲ್‌ನಲ್ಲಿ ಗ್ರೀಕ್‌ನ ಸ್ಟಿಫನಸ್ ಸಿಸಿಪಸ್ ಅವರನ್ನು ಎದುರಿಸಲಿದ್ದಾರೆ.
ಶನಿವಾರ ರಾತ್ರಿ ನಡೆದ ರೋಚಕ ಸೆಮಿಫೈನಲ್‌ನಲ್ಲಿ 20 ವರ್ಷದ ಸಿಸಿಪಸ್, ಟೆನಿಸ್ ಲೋಕದ ದಿಗ್ಗಜ ನಡಾಲ್‌ಗೆ 6-4, 2-6, 6-3 ಅಂತರದಿಂದ ಆಘಾತವಿಕ್ಕಿ ಪ್ರಶಸ್ತಿ ಸುತ್ತಿಗೆ ನೆಗೆದರು.
ಫೈನಲ್‌ನಲ್ಲಿ ಜೊಕೋವಿಕ್ ಅವರನ್ನು ಎದುರಿ ಸುವ ನೆಚ್ಚಿನ ಆಟಗಾರನಾಗಿದ್ದ ನಡಾಲ್ “ಫ್ರೆಂಚ್ ಓಪನ್’ಗೂ ಮುನ್ನ ಮತ್ತೂಂದು ಆಘಾತ ಅನುಭವಿಸಿದರು. ಈ ಹಿಂದೆ “ಇಂಡಿ ಯನ್ ವೆಲ್ಸ್’, “ಮಾಂಟೆಕಾರ್ಲೊ ಮಾಸ್ಟರ್’, “ಬಾರ್ಸಿ ಲೋನಾ ಓಪನ್’ ಕೂಟಗಳ ಸೆಮಿಫೈನಲ್‌ನಲ್ಲೂ ನಡಾಲ್ ಸೋತಿದ್ದರು.
ಸಿಸಿಪಸ್‌ಗೆ 4ನೇ ಎಟಿಪಿ ಫೈನಲ್
ಈ ಗೆಲುವಿನ ಮೂಲಕ ಸಿಸಿಪಸ್ 4ನೇ ಬಾರಿಗೆ ಎಟಿಪಿ ಫೈನಲ್ ಪ್ರವೇಶಿಸಿದಂತಾಯಿತು. ಜನವರಿ ಯಲ್ಲಿ “ಆಸ್ಟ್ರೇಲಿಯನ್ ಓಪನ್’ ಕೂಟದಲ್ಲಿ ರೋಜರ್ ಫೆಡರರ್ ಅವರನ್ನು ಸೋಲಿಸಿ ವೃತ್ತಿಜೀವನದ ಅತ್ಯುತ್ತಮ ಗೆಲುವು ದಾಖಲಿಸಿದ್ದ ಸಿಸಿಪಸ್ ಈಗ ನಡಾಲ್ ಅವರನ್ನು ಸೋಲಿಸಿ ಮತ್ತೂಂದು ದೊಡ್ಡ ಗೆಲುವು ಸಂಪಾದಿಸಿದರು. ಅಲೆಕ್ಸಾಂಡರ್ ಜ್ವೆರೇವ್, ಡೊಮಿನಿಕ್ ಥೀಮ್ ಅವರನ್ನೂ ಸಿಸಿಪಸ್ 2 ಸಲ ಸೋಲಿಸಿದ್ದಾರೆ. ಜೊಕೋವಿಕ್ ವಿರುದ್ಧ ಆಡಿದ ಕಳೆದ ವರ್ಷದ “ಕೆನಡಿಯನ್ ಓಪನ್’ ಕೂಟದ ಪ್ರಿ-ಕ್ವಾ. ಫೈನಲ್‌ನಲ್ಲಿ ಸಿಸಿಪಸ್ 3 ಸೆಟ್‌ಗಳ ಜಯ ಸಾಧಿಸಿದ್ದರು.
ಥೀಮ್ ಪರಾಭವ
ಮೊದಲ ಸೆಮಿಫೈನಲ್ ಕಾದಾಟದಲ್ಲಿ ನೊವಾಕ್ ಜೊಕೋವಿಕ್ ಆಸ್ಟ್ರಿಯಾದ ಡೊಮಿ ನಿಕ್ ಥೀಮ್ ವಿರುದ್ಧ ಭಾರೀ ಹೋರಾಟದ ಬಳಿಕ 7-6 (7-2), 7-6 (7-4) ಸೆಟ್‌ಗಳ ಜಯ ಸಾಧಿಸಿದರು. “ಆಸ್ಟ್ರೇಲಿಯನ್ ಓಪನ್’ ಪ್ರಶಸ್ತಿ ಗೆದ್ದ ಬಳಿಕ ಒಂದು ತಿಂಗಳು ವಿರಾಮ ತೆಗೆದುಕೊಂಡ ಜೊಕೋ “ಇಂಡಿಯನ್ ವೆಲ್ಸ್’, “ಮಯಾಮಿ ಓಪನ್’ ಮತ್ತು “ಮಾಂಟೆಕಾರ್ಲೊ ಮಾಸ್ಟರ್’ ಕೂಟಗಳಿಂದ ಬಹಳ ಬೇಗ ನಿರ್ಗಮಿಸಿದ್ದರು.
ಕಿಕಿ ಬರ್ಟೆನ್ಸ್ ಚಾಂಪಿಯನ್
ವನಿತಾ ಸಿಂಗಲ್ಸ್ ಫೈನಲ್‌ನಲ್ಲಿ ನೆದರ್‌ಲ್ಯಾಂಡ್‌ನ ಕಿಕಿ ಬರ್ಟೆನ್ಸ್ 3ನೇ ರ್‍ಯಾಂಕಿನ ರೊಮೇನಿಯಾ ಆಟಗಾರ್ತಿ ಸಿಮೋನಾ ಹಾಲೆಪ್ ಅವರನ್ನು 6-4, 6-4ರಿಂದ ಮಣಿಸಿ ಚಾಂಪಿಯನ್ ಆಗಿ ಮೂಡಿಬಂದರು.ಇದು ಕಿಕಿ ಬರ್ಟೆನ್ಸ್ ಗೆದ್ದ 9ನೇ ಸಿಂಗಲ್ಸ್ ಪ್ರಶಸ್ತಿ. ಕಳೆದ ವರ್ಷ ಇಲ್ಲಿ ಪೆಟ್ರಾ ಕ್ವಿಟೋವಾ ವಿರುದ್ಧ ಫೈನಲ್‌ನಲ್ಲಿ ಸೋತಿದ್ದ ಬರ್ಟೆನ್ಸ್ ಈ ಬಾರಿ ಕಿರೀಟ ಏರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಜಯಿಸಿ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದ್ದ ಹಾಲೆಪ್‌ಗೆ ಈ ಸೋಲು ದೊಡ್ಡ ಹಿನ್ನಡೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.