ಮಹಾರಾಜ ಟಿ20 ಕಪ್‌ಗೆ ಆಟಗಾರರ ಆಯ್ಕೆ: ಮಂಗಳೂರು ತಂಡಕ್ಕೆ ಅಭಿನವ್ ಮನೋಹರ್
Team Udayavani, Jul 31, 2022, 9:48 AM IST
ಬೆಂಗಳೂರು: ಕೆಎಸ್‌ಸಿಎ ಹಮ್ಮಿಕೊಂಡಿರುವ ಮಹಾರಾಜ ಟಿ20 ಕಪ್ ಆ.7ರಿಂದ ಆರಂಭವಾಗಲಿದೆ. ಅದಕ್ಕೆ ಶನಿವಾರ ಆಟಗಾರರ ಆಯ್ಕೆ ಮಾಡಲಾಯಿತು.
ಐಪಿಎಲ್ ನಲ್ಲಿ ಮಾಡುವಂತೆ ಹರಾಜಿನ ಮೂಲಕ ಇಲ್ಲಿ ಆಟಗಾರರ ಆಯ್ಕೆಯಾಗಲಿಲ್ಲ ಎನ್ನುವುದು ಗಮನಾರ್ಹ. ಬದಲಿಗೆ ಆಟಗಾರರ ಪಟ್ಟಿಯನ್ನು ಮಾಡಿ, ಅದರ ಮೂಲಕ, ವಿವಿಧ ತಂಡಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಂಡವು.
ಆಯ್ಕೆ ಪದ್ಧತಿ: ಮೊದಲು ವಿವಿಧ ತಂಡಗಳ ಪ್ರಾಯೋಜಕರು ತಮ್ಮ ತಂಡದ ತರಬೇತಿ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡವು. ಈ ಸಿಬ್ಬಂದಿ ತಂತಮ್ಮ ತಂಡಗಳ ಪರವಾಗಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಹೊಣೆ ಹೊತ್ತುಕೊಂಡರು.
ಒಟ್ಟು 740 ಆಟಗಾರರು ಆಯ್ಕೆಪಟ್ಟಿಯಲ್ಲಿದ್ದರು. ಇವರನ್ನು ಎ, ಬಿ, ಸಿ, ಡಿ ಎಂಬ ವರ್ಗಗಳಾಗಿ ವಿಭಾಗಿಸಲಾಗಿತ್ತು. ರಾಷ್ಟ್ರೀಯ ತಂಡದ ಮತ್ತು ಐಪಿಎಲ್‌ನಲ್ಲಿ ಆಡಿದವರನ್ನು ಎ ವಿಭಾಗಕ್ಕೆ ಸೇರಿಸಲಾಗಿತ್ತು (ಲಭ್ಯವಿದ್ದವರು 14 ಆಟಗಾರರು). ಇವರಿಗೆ 5 ಲಕ್ಷ ರೂ. ವೇತನ. ರಣಜಿ, ವಿಜಯ್ ಹಜಾರೆ, ಸೈಯದ್ ಮುಷ್ತಾಖ್ ಅಲಿ ಟಿ20 ಕೂಟಗಳ ಪೈಕಿ ಒಂದರಲ್ಲಿ ಆಡಿದವರನ್ನು ಬಿ ವಿಭಾಗದಲ್ಲಿ ಸೇರಿಸಲಾಗಿತ್ತು (ಲಭ್ಯವಿದ್ದವರು 32 ಮಂದಿ). ಇವರಿಗೆ 2 ಲಕ್ಷ ರೂ. ವೇತನ. ಇನ್ನು 19, 23 ವಯೋಮಿತಿ ಕೂಟಗಳಲ್ಲಿ ಆಡಿದವರನ್ನು ಸಿ ವಿಭಾಗಕ್ಕೆ ಸೇರಿಸಲಾಗಿತ್ತು(ಲಭ್ಯವಿದ್ದವರು 111 ಮಂದಿ). ಇವರಿಗೆ 1 ಲಕ್ಷ ರೂ. ವೇತನ. ಇನ್ನು ಉದಯೋನ್ಮುಖ ಪ್ರತಿಭೆಗಳಿಗೆ 50,000 ರೂ. ವೇತನ ನಿಗದಿ ಪಡಿಸಲಾಗಿದೆ (ಲಭ್ಯವಿದ್ದವರು 583 ಮಂದಿ).
ತಂಡಗಳು, ಪ್ರಮುಖ ಆಟಗಾರರು
ದಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್: ಮಾಯಾಂಕ್ ಅಗರ್ವಾಲ್, ಜೆ.ಸುಚಿತ್, ಅನಿರುದ್ಧ ಜೋಶಿ, ಟಿ.ಪ್ರದೀಪ್.
ಕೋಚ್: ಟಿ.ನಾಸಿರುದ್ದೀನ್.
ದ ಹುಬ್ಬಳ್ಳಿ ಟೈಗರ್ಸ್: ಅಭಿಮನ್ಯು ಮಿಥುನ್, ಲವನೀತ್ ಸಿಸೋಡಿಯ, ವಿ.ಕೌಶಿಕ್.
ಕೋಚ್: ದೀಪಕ್ ಚೌಗುಲೆ
ಗುಲ್ಬರ್ಗ ಮಿಸ್ಟಿಕ್ಸ್: ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಸಿ.ಎ.ಕಾರ್ತಿಕ್, ಮನೋಜ್ ಭಾಂಡಗೆ.
ಕೋಚ್: ಮನ್ಸೂರ್ ಅಲಿ
ಮಂಗಳೂರು ಯುನೈಟೆಡ್: ಅಭಿನವ್ ಮನೋಹರ್, ಆರ್.ಸಮರ್ಥ್, ವಿ. ವೈಶಾಖ್, ಅಮಿತ್ ವರ್ಮ.
ಕೋಚ್: ಸ್ಟುವರ್ಟ್ ಬಿನ್ನಿ
ಶಿವಮೊಗ್ಗ ಸ್ಟ್ರೈಕರ್ಸ್: ಕೆ.ಗೌತಮ್, ಕೆ.ಸಿ.ಕಾರಿಯಪ್ಪ, ರೋಹನ್ ಕದಮ್, ಕೆ.ವಿ.ಸಿದ್ಧಾರ್ಥ.
ಕೋಚ್: ನಿಖೀಲ್ ಹಲ್ದಿಪುರ
ಮೈಸೂರು ವಾರಿಯರ್ಸ್: ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗ್ಡೆ, ಪವನ್ ದೇಶಪಾಂಡೆ.
ಕೋಚ್: ಪಿ.ವಿ.ಶಶಿಕಾಂತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.