MS Dhoni; ಹೊಸ ಹೇರ್ ಸ್ಟೈಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ: ಫೋಟೊ ವೈರಲ್
Team Udayavani, Oct 3, 2023, 4:54 PM IST
ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವೃತ್ತಿ ಜೀವನದ ಆರಂಭದಿಂದಲೂ ತನ್ನ ಹೇರ್ ಸ್ಟೈಲ್ ನಿಂದಲೇ ಗುರುತಿಸಿಕೊಂಡವರು. ಉದ್ದನೆಯ ಕೇಶ ರಾಶಿಯಿಂದ ದೇಶದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದವರು ಎಂಎಸ್ ಧೋನಿ. ಇದೀಗ ಮತ್ತೆ ಹೊಸ ಸ್ಟೈಲ್ ಮಾಡಿ ಗಮನ ಸೆಳೆದಿದ್ದಾರೆ.
ಟಾಪ್ ಸೆಲೆಬ್ರಿಟಿಗಳನ್ನು ಅಂದಗೊಳಿಸುವ ಪರಿಣತಿಗೆ ಹೆಸರುವಾಸಿಯಾದ ಪ್ರಸಿದ್ಧ ಕೇಶ ವಿನ್ಯಾಸಕ ಆಲಿಮ್ ಹಕೀಮ್, ಧೋನಿಯ ರೂಪಾಂತರದ ಹಿಂದೆ ಕೆಲಸ ಮಾಡಿದ್ದಾರೆ.
ಆಲಿಮ್ ಹಕೀಮ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಧೋನಿಯ ಹೊಸ ಲುಕ್ ನ್ನು ಪ್ರದರ್ಶಿಸುವ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಧೋನಿಯ ಫ್ಯಾನ್ ಒಬ್ಬರು ರಚಿಸಿದ್ದ ಚಿತ್ರದಿಂದ ಪ್ರೇರೇಪಣೆ ಪಡೆದು ಈ ಹೊಸ ಹೇರ್ ಸ್ಟೈಲ್ ಮಾಡಲಾಗಿದೆ.
ಎಂಎಸ್ ಧೋನಿ ಅವರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ಹಕೀಮ್ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಕೂದಲ ಮೇಲೆ ಪ್ರಯೋಗ ನಡೆಸುವ ಧೋನಿ ಅವರನ್ನು ಶ್ಲಾಘಿಸಿದರು. ಅವರಿಬ್ಬರೂ ಧೋನಿಯ ಕೂದಲನ್ನು ಉದ್ದವಾಗಿ ಬೆಳೆಯಲು ಅವಕಾಶ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಹಕೀಮ್ ಬಹಿರಂಗಪಡಿಸಿದರು.
View this post on Instagram
ಇನ್ಸ್ಟಾಗ್ರಾಮ್ ನಲ್ಲಿ ಆಲಿಮ್ ಹಕೀಮ್ ಹೊಸ ಹೇರ್ ಸ್ಟೈಲ್ ಫೋಟೊ ಹಾಕಿದ ತಕ್ಷಣ ಅದ್ಭುತ ಪ್ರತಿಕ್ರಿಯೆ ಪಡೆಯಿತು. ಕೇವಲ ಒಂದು ಗಂಟೆಯೊಳಗೆ, ಪೋಸ್ಟ್ 70,000 ಲೈಕ್ ಗಳನ್ನು ಪಡೆದಿದೆ. ಇದು ಧೋನಿ ಮತ್ತು ಅವರ ಹೊಸ ಕೇಶ ವಿನ್ಯಾಸದ ಅಪಾರ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Coastalwood: ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ
Kundapura: ರಾಷ್ಟ್ರೀಯ ಹೆದ್ದಾರಿ; ಮುಗಿಯದ ಕಿರಿಕಿರಿ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.