ವಿಶ್ವ ಹಾಕಿ ಲೀಗ್: ಭಾರತಕ್ಕೆ ಸೋಲು, ಕೂಟದಿಂದ ಔಟ್
Team Udayavani, Jun 23, 2017, 10:14 AM IST
ಲಂಡನ್: ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಭಾರತ ತಂಡ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಸೋಲುಂಡಿದೆ. ಈ ಮೂಲಕ ಒಟ್ಟಾರೆ ವಿಶ್ವ ಹಾಕಿ ಲೀಗ್ ಕೂಟದಿಂದಲೇ ಔಟಾಗಿದೆ. ಮಲೇಷ್ಯಾ 3-2 ರಿಂದ ಭಾರತ ತಂಡಕ್ಕೆ ಆಘಾತ ನೀಡಿತು.
ಭಾರತದ ಪರ ರಣದೀಪ್ ಸಿಂಗ್ 2 ಗೋಲು ಬಾರಿಸಿದರು. ಪಂದ್ಯದ ಆರಂಭದಿಂದ 14ನೇ ಶ್ರೇಯಾಂಕಿತ ಮಲೇಷ್ಯಾ ತಂಡ ಭಾರತದ ಮೇಲೆ ದಾಳಿ ನಡೆಸಿತು. ಹೀಗಾಗಿ ಮಲೇಷ್ಯಾ ಒಂದು ಹಂತದಲ್ಲಿ 2-0 ದಿಂದ ಮುನ್ನಡೆಯಲ್ಲಿತ್ತು.
ನಂತರ ಆಕ್ರಮಣಕ್ಕೆ ಮುಂದಾದ ಭಾರತ ಒಂದರ ನಂತರ ಮತ್ತೂಂದು ಗೋಲು ಸಿಡಿಸಿತು. ಇದರ ಫಲವಾಗಿ ಭಾರತ 2-2 ರಿಂದ ಸಮಬಲ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಆ ನಂತರ ಮಲೇಷ್ಯಾ ಮತ್ತೂಂದು ಗೋಲು ಸಿಡಿಸಿತು.
ಇದರ ಫಲವಾಗಿ ಮಲೇಷ್ಯಾ 3-2 ಗೋಲುಗಳಿಂದ ಜಯ ಸಾಧಿಸಿ ಸೆಮಿಫೈನಲ್ಗೆ ಲಗ್ಗೆಹಾಕಿತು. ಗೋಲು ಬಾರಿಸಲು
ಸಿಕ್ಕ ಗೆಲವು ಅವಕಾಶಗಳನ್ನು ಕೈಚೆಲ್ಲಿದ್ದು ಭಾರತ ಸೋಲಿಗೆ ಕಾರಣವಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.