ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸೈನಾ, ಸಿಂಧು, ಪ್ರಣಯ್
Team Udayavani, Jan 9, 2020, 12:07 AM IST
ಕೌಲಾಲಂಪುರ: ಭಾರತದ ಸ್ಟಾರ್ ಶಟ್ಲರ್ಗಳಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಎಚ್.ಎಸ್. ಪ್ರಣಯ್ “ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿ’ಯಲ್ಲಿ 2ನೇ ಸುತ್ತಿಗೇರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭರವಸೆಯ ಆಟಗಾರರಾದ ಸಾಯಿ ಪ್ರಣೀತ್ ಮತ್ತು ಕೆ. ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದ್ದಾರೆ.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಇದೇ ಮೊದಲ ಬಾರಿಗೆ ಎದುರಾದ ಬೆಲ್ಜಿಯಂನ ಲಿಯನ್ ಟಾನ್ ವಿರುದ್ಧ 21-15, 21-17 ಅಂತರದ ಗೆಲುವು ದಾಖಲಿಸಿದರು. ಇವರ ಹೊರಾಟ ಕೇವಲ 36 ನಿಮಿಷಗಳಲ್ಲಿ ಅಂತ್ಯಗೊಂಡಿತು.
ಕಳೆದ ಬಾರಿ ಇಂಡೋನೇಶ್ಯ ಮಾಸ್ಟರ್
ಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕ ರಿಸಿದ ಸೈನಾ, ಅನಂತರ ಆಡಿದ ಎಲ್ಲ ಪ್ರತಿಷ್ಠಿತ ಕೂಟಗಳಲ್ಲೂ ಬೇಗನೇ ನಿರ್ಗಮಿಸಿ ಬೇಸರ ಹುಟ್ಟಿಸಿದ್ದರು. ಹೊಸ ವರ್ಷಾರಂಭದಲ್ಲಿ ಮೊದಲ ಗೆಲುವನ್ನು ಪಡೆದಿದ್ದು, ಅವರ ಓಟ ಎಲ್ಲಿಯ ತನಕ ಮುಂದುವರಿದೀತು ಎಂಬುದು ಕ್ರೀಡಾ ಭಿಮಾನಿಗಳ ಕುತೂಹಲ.ಅನಂತರದ ಪಂದ್ಯದಲ್ಲಿ ಪಿ.ವಿ. ಸಿಂಧು ರಶ್ಯದ ಎವೆYàನಿಯಾ ಕೊಸೆಟ್ಸ್ಕಾಯಾ ಅವರನ್ನು 21-15, 21-13ರಿಂದ ಸುಲಭದಲ್ಲಿ ಸೋಲಿಸಿದರು.
ಪ್ರಣಯ್ ಪರಾಕ್ರಮ
ಪುರುಷರ ವಿಭಾಗದಲ್ಲಿ ನಡೆದ ಹೋರಾಟದಲ್ಲಿ ಎಚ್.ಎಸ್. ಪ್ರಣಯ್ ಗೆದ್ದರೆ, ಸಾಯಿ ಪ್ರಣೀತ್ ಮತ್ತು ಕೆ. ಶ್ರೀಕಾಂತ್ ಪರಾಭವಗೊಂಡರು. ಪ್ರಣಯ್ (26) ತನಗಿಂತ ಮೇಲಿನ ರ್ಯಾಂಕಿಂಗ್ ಆಟಗಾರ ಜಪಾನಿನ ಕಂಟ ಸುನೆಯಾಮ (10) ಅವರನ್ನು 21-9, 21-17ರಿಂದ ಮಣಿಸಿದರು.
ಸಾಯಿ ಪ್ರಣೀತ್ ಡೆನ್ಮಾರ್ಕ್ನ ರಾಸ್ಮಸ್ ಜಿಮೆR ವಿರುದ್ಧ 11-21, 15-21 ಅಂತರ ದಿಂದ ಸೋಲೊಪ್ಪಿಕೊಂಡರೆ, ಕೆ. ಶ್ರೀಕಾಂತ್ ದ್ವಿತೀಯ ಶ್ರೇಯಾಂಕಿತ ಚೈನೀಸ್ ತೈಪೆಯ ಚೌ ಟೀನ್ ಚೆನ್ ವಿರುದ್ಧ 17-21, 5-21 ಅಂತರದಿಂದ ಪರಾಭವಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.