ಆ್ಯಶಸ್: ಇಂಗ್ಲೆಂಡ್ ನೆರವಿಗೆ ರೋರಿ ಬರ್ನ್ಸ್, ಜೋ ರೂಟ್
Team Udayavani, Sep 7, 2019, 5:18 AM IST
ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತಕ್ಕೊಳಗಾದ ಇಂಗ್ಲೆಂಡಿಗೆ ಆರಂಭಕಾರ ರೋರಿ ಬರ್ನ್ಸ್ ಮತ್ತು ನಾಯಕ ಜೋ ರೂಟ್ ಆಸರೆಯಾಗಿ ನಿಂತಿದ್ದಾರೆ. ಶುಕ್ರವಾರದ ಚಹಾ ವಿರಾಮದ ವೇಳೆ 2 ವಿಕೆಟಿಗೆ 125 ರನ್ ಗಳಿಸಿದೆ. ಆಸ್ಟ್ರೇಲಿಯ 8 ವಿಕೆಟಿಗೆ 497 ರನ್ ಪೇರಿಸಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು.
ಜೋ ಡೆನ್ಲಿ (4) ಮತ್ತು ಕ್ರೆಗ್ ಓವರ್ಟನ್ (6) ಅವರನ್ನು ಇಂಗ್ಲೆಂಡ್ 25 ರನ್ ಆಗುವಷ್ಟರಲ್ಲಿ ಕಳೆದುಕೊಂಡು ಆತಂಕಕ್ಕೆ ಸಿಲುಕಿತು. ಆದರೆ 3ನೇ ವಿಕೆಟಿಗೆ ಜತೆಗೂಡಿದ ಬರ್ನ್ಸ್-ರೂಟ್ ಸರಿಯಾಗಿ 100 ರನ್ ಪೇರಿಸಿ ಕುಸಿತಕ್ಕೆ ತಡೆಯೊಡ್ಡಿದರು. ಬರ್ನ್ಸ್ 62, ರೂಟ್ 47 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸ್ಟೀವನ್ ಸ್ಮಿತ್ ಅಮೋಘ 211 ರನ್ ಬಾರಿಸಿದ್ದು ಆಸ್ಟ್ರೇಲಿಯ ಸರದಿಯ ಆಕರ್ಷಣೆಯಾಗಿತ್ತು. ಕೊನೆಯಲ್ಲಿ ಮಿಚೆಲ್ ಸ್ಟಾರ್ಕ್ (ಅಜೇಯ 54) ಮತ್ತು ನಥನ್ ಲಿಯೋನ್ (ಅಜೇಯ 26) ಕೂಡ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.