![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 21, 2021, 3:25 PM IST
ಮುಂಬೈ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೂಟವನ್ನು ಯಶಸ್ವಿಯಾಗಿ ಮುಗಿಸಿದ ಖುಷಿಯಲ್ಲಿರುವ ಬಿಸಿಸಿಐ ಮುಂದಿನ ಆವೃತ್ತಿಗೆ ಸಿದ್ದತೆ ನಡೆಸುತ್ತಿದೆ. ಮುಂದಿನ ಆವೃತ್ತಿಗೆ ಮತ್ತೆರಡು ತಂಡಗಳನ್ನು ಸೇರ್ಪಡೆ ಮಾಡಲು ಬಿಸಿಸಿಐ ಮುಂದಾಗಿದೆ.
ಫುಟ್ ಬಾಲ್ ಕ್ರೀಡೆಯ ಪ್ರಸಿದ್ದ ಫ್ರಾಂಚೈಸಿ ಮ್ಯಾಂಚೆಸ್ಟರ್ ಯುನೈಟೆಡ್ ನ ಮಾಲಕರು ಇದೀಗ ಐಪಿಎಲ್ ತಂಡವನ್ನು ಖರೀದಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.
ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಪ್ರಸಿದ್ದ ತಂಡವಾದ ಮ್ಯಾಂಚೆಸ್ಟರ್ ಯುನೈಟೆಡ್ ನ ಮಾಲಕತ್ವವನ್ನು ಗ್ಲಾಜರ್ ಕುಟುಂಬ ಹೊಂದಿದೆ. ಸದ್ಯ ಎರಡು ಹೊಸ ತಂಡಗಳಿಗಾಗಿ ಬಿಸಿಸಿಐ ಟೆಂಡರ್ ಆಹ್ವಾನಿಸಿದ್ದು, ಗ್ಲಾಜರ್ ಕುಟುಂಬ ಈ ಬಗ್ಗೆ ಆಸಕ್ತಿ ಹೊಂದಿದೆ ಎನ್ನಲಾಗಿದೆ.
ಅಕ್ಟೋಬರ್ ಕೊನೆಯ ವಾರದೊಳಗೆ ಬಿಡ್ ಅರ್ಜಿ ಸಲ್ಲಿಸಲು ಬಿಸಿಸಿಐ ಆಹ್ವಾನ ನೀಡಿದೆ. ಐಪಿಎಲ್‌ನಲ್ಲಿ ಹೊಸ ಫ್ರಾಂಚೈಸಿಯ ಖರೀದಿಗೆ ಸಾಕಷ್ಟು ಕಠಿಣ ನಿಯಮಗಳಿದೆ. ಹೊಸ ತಂಡಗಳಿಗಾಗಿ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳುವ ಬಿಡ್ಡರ್‌ಗಳು 3000 ಕೋಟಿಯಷ್ಟು ವ್ಯವಹಾರವನ್ನು ಹೊಂದಿರಬೇಕು. ಅಥವಾ 2500 ಕೋಟಿಗೂ ಅಧಿಕ ಅಥವಾ ವೈಯಕ್ತಕ ಮೌಲ್ಯ 2500 ಕೋಟಿಯಷ್ಟಿರಬೇಕು.
ಇದನ್ನೂ ಓದಿ:ಟಿಬೇಟಿಯನ್ನ ರ ಕ್ಯಾಂಪ್‌ಗೆ ನುಗ್ಗಿ ದಾಂಧಲೆ ನಡೆಸಿದ ಸಲಗ!
ಈ ಬಿಡ್ಡಿಂಗ್‌ಗಾಗಿ ಐಟಿಟಿ ಪಡೆದುಕೊಂಡು ವಿದೇಶಿ ಸಂಸ್ಥೆಗಳು ಕೂಡ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ವಿದೇಶಿ ಸಂಸ್ಥೆಗಳು ಈ ಬಿಡ್ಡಿಂಗ್‌ನಲ್ಲಿ ಗೆದ್ದರೆ ಆಗ ಭಾರತದಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.
“ವಿದೇಶಿ ಹೂಡಿಕೆದಾರರು ಈ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ತಾಂತ್ರಿಕವಾಗಿ ಅವಕಾಶವಿದೆ. ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಲೀಕರು ಈ ಬಿಡ್ಡಿಂಗ್‌ನಲ್ಲಿ ಬಂದು ಪಾಳ್ಗೊಳ್ಳುತ್ತಾರೆಯೇ ಎಂಬು ನಮಗೆ ನಿಜಕ್ಕೂ ತಿಳಿದಿಲ್ಲ. ಆದರೆ ಈವರೆಗೆ ತಿಳಿದುಬಂದ ಮಾಹಿತಿಯಂತೆ ಈ ಬಗ್ಗೆ ಅವರು ಆಸಕ್ತಿಯನ್ನು ಹೊಂದಿದ್ದಾರೆ” ಎಂದು ಈ ಬೆಳವಣಿಯ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.