ಮಣಿಕಾ-ಅರ್ಚನಾ ಜೋಡಿಗೆ ಟಿಟಿ ಪ್ರಶಸ್ತಿ
Team Udayavani, Nov 9, 2021, 6:09 AM IST
ಹೊಸದಿಲ್ಲಿ: ಭಾರತದ ಮಣಿಕಾ ಬಾತ್ರಾ-ಅರ್ಚನಾ ಗಿರೀಶ್ ಕಾಮತ್ ಸ್ಲೊವೇನಿಯಾದ ಲಾಸ್ಕೋದಲ್ಲಿ ನಡೆದ “ವರ್ಲ್ಡ್ ಟೇಬಲ್ ಟೆನಿಸ್ ಕಂಟೆಂಡರ್’ ಕೂಟದ ವನಿತಾ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಫೈನಲ್ನಲ್ಲಿ 36ನೇ ರ್ಯಾಂಕಿಂಗ್ನ ಭಾರತೀಯ ಜೋಡಿ ಪೋರ್ಟೊ ರಿಕೋದ “ಡಯಾಜ್ ಸಿಸ್ಟರ್’ ಖ್ಯಾತಿಯ ಅಡ್ರಿಯಾನಾ ಡಯಾಜ್-ಮೆಲಾನಿ ಡಯಾಜ್ ವಿರುದ್ಧ 11-3, 11-8, 12-10 ಅಂತರದ ಜಯ ಸಾಧಿಸಿದರು. ರ್ಯಾಂಕಿಂಗ್ನಲ್ಲಿ ಡಯಾಜ್ ಸೋದರಿಯರು ಭಾರತದ ಜೋಡಿಗಿಂತ 13 ಸ್ಥಾನ ಮೇಲಿದ್ದರು.
ಇದನ್ನೂ ಓದಿ:ಐಸಿಸಿ ಟಿ-20 ವಿಶ್ವಕಪ್: ಕ್ಯಾಪ್ಟನ್ ಕೊಹ್ಲಿಗೆ ಗೆಲುವಿನ ವಿದಾಯ
ಮಣಿಕಾ-ಅರ್ಚನಾ ಸೆಮಿಫೈನಲ್ನಲ್ಲಿ ಚೀನದ ಲ್ಯೂ ವೀಶಾನ್-ವಾಂಗ್ ಯಿದಿ ವಿರುದ್ಧ ಜಯ ಸಾಧಿಸಿದ್ದರು.”ಈ ಪ್ರಶಸ್ತಿಯ ಸಂಭ್ರಮ ವಿಶೇಷವಾದುದು. ನಾನು ಮಣಿಕಾ ದಿ ಜತೆ ಆಡುವುದನ್ನು ಯಾವತ್ತೂ ಆನಂದಿಸುತ್ತೇನೆ. ಅವರ ಪ್ರಾಬಲ್ಯ, ಹಿಡಿತ ಅಮೋಘ. ಹೀಗಾಗಿ ನನಗೆ ನಿರಾಳವಾಗಿ ಆಡಲು ಸಾಧ್ಯವಾಗುತ್ತದೆ’ ಎಂದು ಅರ್ಚನಾ ಗಿರೀಶ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.