ಮಣಿಕಾ ಗುರಿ ಟಾಪ್-30
Team Udayavani, Dec 25, 2018, 6:00 AM IST
ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಎರಡು ಚಿನ್ನದ ಪದಕ ಜಯಿಸಿದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಈಗ ಒಲಿಂಪಿಕ್ಸ್ಗೆ ತಯಾರಾಗುತ್ತಿದ್ದಾರೆ. ಒಲಿಂಪಿಕ್ಸ್ಗೆ ನೇರ ಅರ್ಹತೆ ಪಡೆಯಲು ರ್ಯಾಂಕಿಂಗ್ನಲ್ಲಿ ಅಗ್ರ 30ರಲ್ಲಿ ಸ್ಥಾನ ಸಂಪಾದಿಸುವ ಗುರಿ ಹೊಂದಿದ್ದಾರೆ.
“ಎಲ್ಲರಿಗೂ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲುವ ಕನಸಿರುತ್ತದೆ. ಇದಕ್ಕೆ ನಾನೂ ಹೊರತಲ್ಲ. ಆದರೆ ಹಂತ ಹಂತವಾಗಿ ನಾನು ಮುಂದುವರಿಯಲು ಇಷ್ಟಪಡುತ್ತೇನೆ. ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಲು ಮುಂದಿನ ವರ್ಷ ನಡೆಯಲಿರುವ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ಗಮನ ಹರಿಸುತ್ತಿದ್ದೇನೆ. ಒಲಿಂಪಿಕ್ಸ್ ಗೇಮ್ಸ್ಗೆ ನೇರ ಅರ್ಹತೆ ಸಂಪಾದಿಸಲು ನಾನು ರ್ಯಾಂಕಿಂಗ್ನಲ್ಲಿ ಅಗ್ರ 30ರಲ್ಲಿ ಸ್ಥಾನ ಗಳಿಸಬೇಕಾಗಿದೆ’ ಎಂದು ಮಣಿಕಾ ಬಾತ್ರಾ ಹೇಳಿದರು.
“ಏಶ್ಯನ್ ಗೇಮ್ಸ್ ಮುಗಿದ ಬೆನ್ನಲ್ಲೇ ಒಲಿಂಪಿಕ್ಸ್ಗೆ ನಾನು ತಯಾರಿ ನಡೆಸಲಾರಂಭಿಸಿದ್ದು, ಈ ತರಬೇತಿ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಈಗ ವಿದೇಶಿ ಆಟಗಾರರಿಗೆ ನನ್ನ ಆಟದ ವೈಖರಿಯ ಬಗ್ಗೆ ತಿಳಿದಿದೆ. ಹೀಗಾಗಿ ನನ್ನ ಆಟದ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ನನ್ನ ಶೈಲಿ ವಿಭಿನ್ನವಾಗಿರಬೇಕೆಂಬ ಕಾರಣಕ್ಕೆ ನಾನು ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಏಶ್ಯದ ಪ್ರತಿಸ್ಪರ್ಧಿಗಳನ್ನು ಸೋಲಿಸಲು ನಾನು ಫಿಟ್ ಆಗಿರಬೇಕು. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.