MAHE: ಅಖಿಲ ಭಾರತ ಅಂತರ್ ವಿ.ವಿ. ವನಿತಾ ಟೆನಿಸ್ ಆರಂಭ
Team Udayavani, Dec 13, 2024, 10:53 PM IST
ಮಣಿಪಾಲ: ಶಿಕ್ಷಣ ಮತ್ತು ಕ್ರೀಡೆಗೆ ಸಮಾನ ಆದ್ಯತೆ ಸಿಗಬೇಕು. ಕ್ರೀಡೆಯು ಸಮಯದ ಸರಿಯಾದ ನಿರ್ವಹಣೆ ಹಾಗೂ ಕಠಿನ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವುದನ್ನು ಕಲಿಸುತ್ತದೆ ಎಂದು ಅಂತಾರಾಷ್ಟ್ರೀಯ ಮಾಜಿ ಟೆನಿಸ್ ಆಟಗಾರ್ತಿ ಡಾ| ನಯನಿಕಾ ರೆಡ್ಡಿ ಹೇಳಿದರು.
ಮಾಹೆ ವಿ.ವಿ.ಯ ಮರೇನಾದಲ್ಲಿ ಶುಕ್ರವಾರ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ವನಿತೆಯರ ಟೆನಿಸ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿ ಡಾ| ಶರತ್ ಕುಮರ್ ರಾವ್, ಅಸೋಸಿಯೇಶನ್ ಆಫ್ ಇಂಡಿಯನ್ ವಿ.ವಿ.ಯ ಪರಿ ವೀಕ್ಷಕ ಡಾ| ಭಾಸ್ಕರ್, ಪಂದ್ಯಾಟದ ಸಂಯೋಜಕ ಡಾ| ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.
ಮಾಹೆ ಕ್ರೀಡಾ ಕೌನ್ಸಿಲ್ ಕಾರ್ಯ ದರ್ಶಿ ಡಾ| ವಿನೋದ್ ಸಿ. ನಾಯಕ್ ಸ್ವಾಗತಿಸಿದರು. ಮುಖ್ಯ ತೀರ್ಪುಗಾರ ಗೌರಂಗ್ ನಲ್ವಾಯ ಅವರು ಪಂದ್ಯಾಟದ ಬಗ್ಗೆ ವಿವರ ನೀಡಿದರು. ಡಾ| ಮೋನಿಕಾ ವಂದಿಸಿ, ಡಾ| ರೀನಾ ನಿರೂಪಿಸಿದರು. ದೇಶದ 4ವಲಯಗಳ ತಲಾ 4 ತಂಡದಂತೆ 16 ತಂಡಗಳು ಡಿ. 16ರ ವರೆಗೆ ಮಾಹೆಯ ಟೆನಿಸ್ ಮೈದಾನದಲ್ಲಿ ಸೆಣಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
MUST WATCH
ಹೊಸ ಸೇರ್ಪಡೆ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ
ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ
Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.