ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು


Team Udayavani, Apr 16, 2024, 10:59 AM IST

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿಬಿ) ಯ ಅಧಿಕೃತ ಆರೋಗ್ಯ ಪಾರ್ಟ್ನರ್ ಆದ ಮಣಿಪಾಲ್ ಆಸ್ಪತ್ರೆಗಳು, ಕ್ಯಾನ್ಸರ್ ನೊಂದಿಗೆ ಹೋರಾಡಿ ಜಯಿಸಿದ 20 ಜನರು ಮತ್ತು ಅವರ ಕುಟುಂಬಗಳಿಗೆ ವಿಶ್ರಾಂತಿ ಮತ್ತು ವಿನೋದದಿಂದ ತುಂಬಿದ ಸಂಜೆಯನ್ನು ನೀಡಿತು.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವಿಶೇಷ ಅನುಭವವನ್ನು ಯುವ ಕ್ಯಾನ್ಸರ್ ಪೀಡಿತರು ಮತ್ತು ಅವರ ಪೋಷಕರಿಗೆ ಒದಗಿಸಲು ಮಣಿಪಾಲ್ ಆಸ್ಪತ್ರೆಗಳು ಈ ವಿಶೇಷ ಆಯೋಜನೆ ಕೈಗೊಂಡಿದ್ದರು.

ಕ್ಯಾನ್ಸರ್ ನ ರೋಗ ನಿರ್ಣಯವಾದ ಕ್ಷಣದಿಂದ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುವ ನಡುವಿನ ಅವಧಿಯಲ್ಲಿ ರೋಗಿಗಳು ಭಯ, ದುಃಖ, ಆತಂಕ ಮತ್ತು ಖಿನ್ನತೆಯನ್ನು ಅನುಭವಿಸುತ್ತಾರೆ. ಚೇತರಿಕೆಯ ನಂತರವೂ, ಈ ಭಾವನೆಗಳು ಉಳಿಯುತ್ತವೆ. ಹೊಸ ಅವಕಾಶಗಳನ್ನು ಅಳವಡಿಸಿಕೊಳ್ಳಲು ಮತ್ತು ಮಾನಸಿಕವಾಗಿ ಗುಣವಾಗಲು ರೋಗಿಗಳು ತಮ್ಮ ಭಯವನ್ನು ಹೋಗಲಾಡಿಸಬೇಕು. ವಿಶೇಷವಾಗಿ ಮಕ್ಕಳಲ್ಲಿ, ಕ್ಯಾನ್ಸರ್ ಚಿಕಿತ್ಸೆಗಾಗಿ ಆಗಾಗ್ಗೆ ಆಸ್ಪತ್ರೆಗೆ ಭೇಟಿ ನೀಡುವುದು ಅವರನ್ನು ಮಾನಸಿಕವಾಗಿ ಜರ್ಜರಿತವಾಗಿಸಬಹುದು, ಇದರಿಂದಾಗಿ ಅವರು ತಮ್ಮ ಬಾಲ್ಯವನ್ನು ಆಹ್ಲಾದಿಸುವ, ಮೋಜು ಮಾಡುವ, ಭರವಸೆ ಮತ್ತು ಉತ್ಸಾಹವನ್ನು ಕಳೆದುಕೊಳ್ಳುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆಗಳು ಕ್ಯಾನ್ಸರ್ ನೊಂದಿಗೆ ಹೋರಾಡಿ ಜಯಿಸಿದ 20 ಮತ್ತು ಅವರ ಪೋಷಕರನ್ನು ಸಂದರ್ಶಿಸಿ, ಅವರಿಗೆ ಸರಿಯಾದ ಸುರಕ್ಷತೆ, ಆರೈಕೆ ಮತ್ತು  ಮೋಜಿನ ದಿನವನ್ನು ನೀಡುವ ಭರವಸೆಯೊಂದಿಗೆ ಅವರನ್ನು ಸಭಾಂಗಣಕ್ಕೆ ಆಹ್ವಾನಿಸಿದ್ದರು. ಸುಲಭವಾಗಿ ಗುರುತಿಸಲು ಪ್ರತಿ ಸ್ಪರ್ಧಿಗೆ ರಿಸ್ಟ್ಬ್ಯಾಂಡ್ ನೀಡಲಾಗಿತ್ತು ಮತ್ತು ಆರ್‌ ಸಿಬಿ ತಂಡದ ಸಹಾಯದಿಂದ ಕಡಿಮೆ ಜನಸಂದಣಿ ಇರುವ ಕ್ರೀಡಾಂಗಣಕ್ಕೆ ವಿಶೇಷ ಪ್ರವೇಶ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ಮಾತನಾಡಿ, “ರೋಗಿಗಳಿಗೆ ಹೊಸ ಪ್ರಯಾಣಕ್ಕೆ ಪ್ರೇರೇಪಿಸುವ ವಾತಾವರಣವನ್ನು ಬೆಳೆಸುವಲ್ಲಿ ಮಣಿಪಾಲ್ ಆಸ್ಪತ್ರೆಗಳು ಯಾವಾಗಲೂ ಮುಂಚೂಣಿಯಲ್ಲಿವೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಮಕ್ಕಳು ಎದುರಿಸುತ್ತಿರುವ ಸವಾಲುಗಳು ಮತ್ತು ಕಷ್ಟಗಳನ್ನು ನಾವು ಗುರುತಿಸುತ್ತೇವೆ ಮತ್ತು ಅವರಿಗೆ ಸಂತೋಷ ಮತ್ತು ಸ್ಫೂರ್ತಿಯ ಕ್ಷಣಗಳನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ಅವರನ್ನು ಐಪಿಎಲ್ ಪಂದ್ಯಕ್ಕೆ ಕರೆತರುವುದು ನಮ್ಮ ಬೆಂಬಲವನ್ನು ತೋರಿಸುವ, ನಗುವನ್ನು ಹರಡುವ ಮತ್ತು ಶಾಶ್ವತವಾದ ನೆನಪುಗಳನ್ನು ಸೃಷ್ಟಿಸುವ ಮಾರ್ಗವಾಗಿತ್ತು. ಬಿಸಿಸಿಐ ತಂಡದ ನಿಯಮಗಳಿಗೆ ಅನುಸಾರವಾಗಿ, ನಾವು ಈವೆಂಟ್ನಾದ್ಯಂತ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಕೇಂದ್ರಗಳು ಮತ್ತು ಬದ್ಧ ಸ್ವಯಂಸೇವಕರೊಂದಿಗೆ ಮುಂಗಡವಾಗಿ ಆರೋಗ್ಯ ಮೌಲ್ಯಮಾಪನಗಳನ್ನು ಮತ್ತು ಔಷಧಿಗಳನ್ನು ವಿತರಿಸಿದ್ದೇವೆ.” ಎಂದು ಹೇಳಿದರು.

20 ಕ್ಯಾನ್ಸರ್ ವಿಜೇತರಲ್ಲಿ, ವಿಶೇಷವಾದ ಸವಾಲುಗಳೊಂದಿಗೆ ಜಯಶಾಲಿಯಾದ ಇಬ್ಬರು ಪುಟಾಣಿ ವೀರರೂ ಇದ್ದರು. ಇವರು, ಮಾನ್ಯ (8 ವರ್ಷ) ಮತ್ತು ಕಿರಣ್ ರಾಥೋಡ್ (10 ವರ್ಷ), ಇಷ್ಟು ಚಿಕ್ಕ ವಯಸ್ಸಿನಲ್ಲಿ ರಕ್ತ ಮತ್ತು ಮೂಳೆ ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ ಪುಟಾಣಿ ವೀರರು. ರಕ್ತದ ಕ್ಯಾನ್ಸರ್ನ ಸವಾಲುಗಳೊಂದಿಗೆ ವೈದ್ಯಕೀಯ ಪ್ರಯಾಣವನ್ನು ಆರಂಭಿಸಿದಾಗ ಮಾನ್ಯ ಅವರಿಗೆ ಕೇವಲ 8 ವರ್ಷ. ಜ್ವರದ ಕಾಯಿಲೆ, ಕಿಬ್ಬೊಟ್ಟೆಯ ಹಿಗ್ಗುವಿಕೆ ಮತ್ತು ಸಾಮಾನ್ಯವಾದ ದೌರ್ಬಲ್ಯ ಸೇರಿದಂತೆ ರೋಗಲಕ್ಷಣಗಳು ಆಕೆಯ ಸರ್ವಾಂಗೀಣ ಬೆಳವಣಿಗೆಗೆ ಅಡ್ಡಿ ಉಂಟುಮಾಡಿತ್ತು, ಮಾನ್ಯಳ ಪೋಷಕರು ಅವಳನ್ನು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಗೆ ಕರೆತಂದರು, ಅಲ್ಲಿ ಆಕೆಗೆ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ – ಪ್ರಿ-ಬಿ-ಸೆಲ್ ಟೈಪ್ ರಕ್ತದ ಕ್ಯಾನ್ಸರ್ಎಂ ಇರುವುದು ಗುರುತಿಸಲಾಯಿತು.

ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆಯ ಹೆಮಟೊಲಜಿ, ಹೆಮಟೊ ಆಂಕೊಲಾಜಿ ಮತ್ತು ಮೂಳೆ ಮಜ್ಜೆಯ ಕಸಿ ಸಲಹೆಗಾರ ಡಾ. ಮಲ್ಲಿಕಾರ್ಜುನ್ ಕಲಶೆಟ್ಟಿ, ಮಾನ್ಯ ಅವರ ಪ್ರಯಾಣದ ಕುರಿತು ಪ್ರತಿಕ್ರಿಯಿಸಿ, “ರೋಗನಿರ್ಣಯದ ಆರಂಭಿಕ ಆಘಾತದಿಂದ ಕೀಮೋಥೆರಪಿ ಮತ್ತು ಇತರ ಸಹಾಯಕ ಆರೈಕೆಯ ಅನಿರೀಕ್ಷಿತತೆಯವರೆಗೆ ಮಾನ್ಯ ಮತ್ತು ಅವರ ಕುಟುಂಬ ಭಾವನೆಗಳ ರೋಲರ್ ಕೋಸ್ಟರ್ ಅನ್ನು ಎದುರಿಸಿದರು. ಆಕೆಯ ಚಿಕಿತ್ಸಾ ಪಯಣ ನೋವು ಮತ್ತು ವಿಜಯೋತ್ಸವದ ಸಿಹಿ-ಕಹಿ ಕ್ಷಣಗಳನ್ನು ಒಳಗೊಂಡಿತ್ತು. ಸೆಪ್ಸಿಸ್ ಮತ್ತು ಮರುಕಳಿಸುವ ಜ್ವರದಂತಹ ಕಾರಣಗಳಿಂದ  ಆಕೆಯ ಕೀಮೋ ಪೋರ್ಟ್ ಅನ್ನು ತೆಗೆದು ತಗೆಯಬೇಕಾಯಿತು. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಮಾನ್ಯಾ ಚೇತರಿಕೆಯ ಹಾದಿಯಲ್ಲಿ ದಿಟ್ಟವಾಗಿ ನಡೆದು, ಇಂಡಕ್ಷನ್ ಮತ್ತು ಕನ್ಸಾಲಿಡೇಶನ್ ಥೆರಪಿಯನ್ನು ಪೂರ್ಣಗೊಳಿಸಿದರು, ಮತ್ತು ಈಗ, ಅವರು ಸ್ಥಿರವಾದ ಜೀವನವನ್ನು ಅನುಭವಿಸುತ್ತಿದಾರೆ, ಸವಾಲುಗಳನ್ನು ಜಯಿಸಿ ಮಾನ್ಯ ಉತ್ಸಾಹದ ಚಿಲುಮೆಯಾಗಿದ್ದಾರೆ” ಎಂದು ಹೇಳಿದರು.

ಅದೇ ರೀತಿ, 10 ವರ್ಷದ ಬಾಲಕ ಕಿರಣ್ ರಾಥೋಡ್, ನಾನ್-ಮೆಟಾಸ್ಟಾಟಿಕ್ ಲೆಫ್ಟ್ ಟಿಬಿಯಾ ಆಸ್ಟಿಯೊಸಾರ್ಕೊಮಾ ಎಂಬ ಮೂಳೆ ಕ್ಯಾನ್ಸರ್ನೊಂದಿಗೆ ಹೋರಾಡಿ ಜಯಸಿದ್ದಾನೆ. ಎಡಗಾಲಿನಲ್ಲಿ ನಿರಂತರವಾದ ನೋವು ಮತ್ತು ಊತ, ನಡೆಯಲು ಕಷ್ಟ ದಿಂದ ಅವನ ಅಗ್ನಿಪರೀಕ್ಷೆಯು ಪ್ರಾರಂಭವಾಯಿತು. ಜೂನ್ 2023 ರಲ್ಲಿ ಸಮಗ್ರ ರೋಗನಿರ್ಣಯದ ನಂತರ, ಕಿರಣ್ ಅವರು ಡಾ.ಶ್ರೀಮಂತ್ ಬಿ ಎಸ್, ಲೀಡ್ ಕನ್ಸಲ್ಟೆಂಟ್ – ಆರ್ಥೋಪೆಡಿಕ್ ಆಂಕೊಲಾಜಿ, ಮಣಿಪಾಲ್ ಹಾಸ್ಪಿಟಲ್ ಓಲ್ಡ್ ಏರ್ಪೋರ್ಟ್ ರಸ್ತೆ ಇವರ ನೇತೃತ್ವದಲ್ಲಿ ನಿಯೋಡ್ಜುವಂಟ್ ಕಿಮೊಥೆರಪಿ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಚಿಕಿತ್ಸೆಗಳಿಗೆ ಒಳಗಾದರು. ಕಷ್ಟಕರವಾದ ಚೇತರಿಕೆಯ ಪ್ರಕ್ರಿಯೆಯ ಹೊರತಾಗಿಯೂ, ಕಿರಣ್ ಅವರ ಸ್ಥೈರ್ಯ, ಪೋಷಕರ ಬೆಂಬಲ, ಮತ್ತು ಕಾಳಜಿ ಇಂದು ಅವರನ್ನು ಆರೋಗ್ಯಕರ ಜೀವನಕ್ಕೆ ಕೊಂಡೊಯ್ದಿದೆ.

ಈ ಕಥೆಗಳು ಸಕಾಲಿಕ ಚಿಕಿತ್ಸೆಗಳು ಮತ್ತು ಬೆಂಬಲದ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತವೆ, ಮಣಿಪಾಲ್ ಆಸ್ಪತ್ರೆಗಳು, ಕ್ಯಾನ್ಸರ್ ಅನ್ನು ಜಯಿಸಿದ ಯುವ ಜೀವಗಳ ಬದುಕಿನ ಮೇಲೆ ಹೇಗೆ ಧನಾತ್ಮಕವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸುತ್ತದೆ.

ಮಣಿಪಾಲ್ ಹಾಸ್ಪಿಟಲ್ಸ್ ಕಮ್ಯುನಿಟಿ ಕನೆಕ್ಟ್ ಉಪಕ್ರಮದ ಭಾಗವಾಗಿ, ಮಾನ್ಯ ಮತ್ತು ಕಿರಣ್ ರಾಥೋಡ್ ಇಬ್ಬರೂ ಕ್ಯಾನ್ಸರ್ ವಿಜೇತರಲ್ಲಿ ಸೇರಿದ್ದಾರೆ, ಅವರು RCB ಮತ್ತು SRH ನಡುವಿನ IPL ಪಂದ್ಯವನ್ನು ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿ ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ಅವಕಾಶವನ್ನು ಪಡೆದರು. ಈ ಅವಕಾಶವು ಕೇವಲ ಒಂದು ಮೋಜಿನ ಘಟನೆಗಿಂತ ಹೆಚ್ಚಾಗಿತ್ತು-ಅವರು ತಮ್ಮ ಕ್ರಿಕೆಟ್ ಆರಾಧ್ಯ ದೈವಗಳನ್ನು ಭೇಟಿಯಾಗುವ ಮತ್ತು ಲೈವ್ ಪಂದ್ಯದ ರೋಮಾಂಚಕ ವಾತಾವರಣವನ್ನು ಅನುಭವಿಸುವ ಸುವರ್ಣಾವಕಾಶವಾಗಿತ್ತು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

1-tt

Pro Kabaddi; ವಿಜಯ್‌ ಮಲಿಕ್‌ ಅಮೋಘ ಆಟ: ತೆಲುಗು ಟೈಟಾನ್ಸ್‌ ಗೆ ಗೆಲುವು

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.