ವಿದೇಶಿಯರನ್ನೂ ಸೆಳೆದ “ಮಣಿಪಾಲ ಮ್ಯಾರಥಾನ್ 2020′
Team Udayavani, Feb 9, 2020, 6:40 PM IST
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ಸ್ ಆಸೋಸಿಯೇಷನ್ ಸಹಯೋಗದಲ್ಲಿ ರವಿವಾರ ನಡೆದ 4ನೇ ಆವೃತ್ತಿಯ “ಮಣಿಪಾಲ ಮ್ಯಾರಥಾನ್ 2020′ ವಿದೇಶಿಯರನ್ನೂ ಸೆಳೆದು ಭರಪೂರ ಯಶಸ್ಸು ಕಂಡಿತು. ಕೀನ್ಯಾ, ಬ್ರಿಟನ್, ಶ್ರೀಲಂಕಾ ಸಹಿತ ಸುಮಾರು 10 ಸಾವಿರದಷ್ಟು ಸ್ಪರ್ಧಾಳುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಈ ಬಾರಿಯ ವಿಶೇಷ.
ಬೆಳಗ್ಗೆ ಮಾಹೆಯ ಸಹಕುಲಾಧಿಪತಿ ಡಾ|ಎಚ್.ಎಸ್. ಬಲ್ಲಾಳ್, ಐಸಿಐಸಿಐ ಬ್ಯಾಂಕ್‌ನ ವೆಲ್ತ್ ಮ್ಯಾನೇಜ್‌ಮೆಂಟ್ ಹೆಡ್ ಗಿರೀಶ್ ಸೆಹಗಲ್, ವಲಯ ಪ್ರಬಂಧಕ ಭಾಸ್ಕರ್ ಹಂದೆ, ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಸಿಂಗ್, ಮಾಹೆಯ ಕುಲಪತಿ ಡಾ| ಎಚ್.ವಿನೋದ್ ಭಟ್ ಚಾಲನೆ ನೀಡಿದರು. “ಅಂಗಾಂಗಗಳ ದಾನ’ ಧ್ಯೇಯ ವಾಕ್ಯದಡಿ ಈ ಬಾರಿಯ ಮ್ಯಾರಥಾನ್ ನಡೆಯಿತು.
ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ಪ್ರಬಂಧಕ ರವಿಂದ್ರ ರೈ, ಅದಾನಿ ಕಂಪನೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬೆಂಗಳೂರು ಕರ್ನಾಟಕ ವ್ಯಾಪ್ತಿಯ ಮುಖ್ಯ ಪೊಸ್ಟ್ ಮಾಸ್ಟರ್ ಚಾಲ್ಸ…ì ಲೋಬೋ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಕರ್ನಾಟಕ ಆ್ಯತ್ಲೆಟಿಕ್ ಆಸೋಸಿಯೇಷನ್‌ನ ಹಿರಿಯ ಉಪಾಧ್ಯಕ್ಷ ಎಚ್.ಟಿ. ಮಹದೇವ್, ಉದ್ಯಮಿ ಸುಪ್ರಿಂ ಪೂಜಾರಿ, ಮಾಹೆಯ ರಿಜಿಸ್ಟಾರ್ ಡಾ| ನಾರಾಯಣ ಸಭಾಹಿತ್, ಸಂಘಟನ ಸಮಿತಿ ಉಪಾಧ್ಯಕ್ಷ ಮಹೇಶ್ ಠಾಕೂರ್, ಕಾರ್ಯದರ್ಶಿ ಡಾ| ವಿನೋದ್ ಸಿ. ನಾಯಕ್, ಸಹ ಕಾರ್ಯದರ್ಶಿ ಡಾ| ಶೋಭಾ ಎಂ.ಇ., ಜಿಲ್ಲಾ ಅಸೋಸಿಯೇಶನ್ ಅಧ್ಯಕ್ಷ ರಘುರಾಮ್ ನಾಯಕ್, ಗೌರವ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ ಉಪಸ್ಥಿತರಿದ್ದರು.
ಫಲಿತಾಂಶ: ಮೊದಲ 3 ಸ್ಥಾನಿಗಳು
– 42 ಕಿ.ಮೀ. ಮ್ಯಾರಥಾನ್
18ರಿಂದ 40 ವರ್ಷ (ಮಹಿಳೆಯರು): ಭೂಮಿಕಾ, ದೀಪಿಕಾ ಪ್ರಕಾಶ್, ಪ್ರಿಯಾಂಕಾ ಎಚ್.ಬಿ.
18ರಿಂದ 40 ವರ್ಷ (ಪುರುಷರು): ಸ್ಟೀಫನ್, ಜಾಫೆಟ್ ರೊನ್ನೊ, ಐಸಾಕ್.
– 21 ಕಿ.ಮೀ. ಮ್ಯಾರಥಾನ್
18ರಿಂದ 40 ವರ್ಷ (ಮಹಿಳೆಯರು): ಅರ್ಚನಾ, ಸೌಂದರ್ಯ ಕೆ.ಜೆ., ಶಾಲಿನಿ.
18ರಿಂದ 40 ವರ್ಷ (ಪುರುಷರು): ದಿನೇಶ್, ಪ್ರವೀಣ್, ನಿಕೊಡಮಸ್.
41ರಿಂದ 55 ವರ್ಷ (ಮಹಿಳೆಯರು): ರೋಲಿ ಅವಸ್ಥಿ, ತಪತಿ ಭಟ್ಟಾಚಾರ್ಯ.
41ರಿಂದ 55 ವರ್ಷ (ಪುರುಷರು): ಚಂದ್ರಶೇಖರ, ದೀಪಕ್, ಶ್ಯಾಮ್.
56 ವರ್ಷ ಮೇಲ್ಪಟು r(ಪುರುಷರು): ಥೋಮಸ್ ಪಿ.ಸಿ., ರಾಜೀವ್ ಶೆಟ್ಟಿ.
25ರಿಂದ 50 ವರ್ಷ (ಮಹಿಳೆಯರು): ಡಾ| ಸಹನಾ, ಡಾ| ಪ್ರಣೀಶ್.
25ರಿಂದ 50 ವರ್ಷ (ಪುರುಷರು): ಪರೇಶ್, ಬುಲನ್.
50 ವರ್ಷ ಮೇಲ್ಪಟ್ಟ ಮಹಿಳೆಯರು: ಸುಧಾ ಮೆನನ್.
50 ವರ್ಷ ಮೇಲ್ಪಟ್ಟ ಪುರುಷರು: ಅರುಣ್, ಪ್ರಶಾಂತ್.
18ರಿಂದ 40 ವರ್ಷ (ಪುರುಷರು): ದಿನೇಶ್, ಪ್ರವೀಣ್, ನಿಕೋಡಾಮಸ್.
– 3 ಕಿ.ಮೀ. ಮ್ಯಾರಥಾನ್
ಪ್ರಾಥಮಿಕ ಶಾಲೆ (ಬಾಲಕರು): ಶರತ್, ಮಲ್ಲಪ್ಪ, ವಿವೇಕಾನಂದ.
ಪ್ರಾಥಮಿಕ ಶಾಲೆ (ಬಾಲಕಿಯರು): ನಂದಿನಿ ಜಿ., ರುಚಿತಾ, ಚೈತನ್ಯಾ.
ಪ್ರೌಢಶಾಲೆ (ಬಾಲಕರು): ಹನುಮೇಶ್, ಯತೀಶ್, ಪ್ರಣಮ್.
ಪ್ರೌಢಶಾಲೆ (ಬಾಲಕಿಯರು): ಪ್ರತೀಕ್ಷಾ, ಪ್ರತಿಭಾ, ರೋಝ.
ಕಾಲೇಜು ವಿಭಾಗ (ಬಾಲಕರು) : ರಾಜೇಂದ್ರ, ಚಿಂತನ್, ಕಿರಣ್.
ಕಾಲೇಜು ವಿಭಾಗ (ಬಾಲಕಿಯರು): ಪ್ರಜ್ಞಾ, ನಿರೀಕ್ಷಾ, ವೈಷ್ಣವಿ ಶೆಟ್ಟಿ.
– 5 ಕಿ.ಮೀ. ಮ್ಯಾರಥಾನ್
18-40 (ಪುರುಷರು): ಬಸವರಾಜ್ ನೀಲಪ್ಪ, ಬೆಳನಾಯಕ, ಧರೆಪ್ಪ ಬರವಣ್ಣಿ
41-55 (ಪುರುಷರು): ಶಾಜಿ ಎನ್.ಪಿ., ವಿನಯಕುಮಾರ್, ಮೇದಪ್ಪ
56 ವರ್ಷ ಮೇಲ್ಪಟ್ಟು : ರಾಮಯ್ಯ, ರಾಮಕೃಷ್ಣ ಆರ್.
18-40 (ಮಹಿಳೆಯರು): ಹರ್ಷಿತಾ, ದೀಕ್ಷಾ, ಚಿಕ್ಕಮ್ಮ.
41-55 (ಮಹಿಳೆಯರು): ಹೇಮಲತಾ, ಲತಾ ಕುಮಾರಿ, ಡಾ| ಸಂಧ್ಯಾ.
– 10 ಕಿ.ಮೀ. ಮ್ಯಾರಥಾನ್
18-40 (ಪುರುಷರು): ಮನ್ ಚೌಧರಿ , ಸಂದೀಪ್, ಶ್ರೀಧರ್
18-40 (ಮಹಿಳೆಯರು): ಚೈತ್ರಾ ದೇವಾಡಿಗ, ಎಲ್ ಡಿ ಪ್ರಿಯಾ, ತಿಪ್ಪವ್ವ
56 ವರ್ಷ ಮೇಲ್ಪಟ್ಟ ಮಹಿಳೆಯರು: ಅರುಣಕಲಾ ರಾವ್, ಲಲಿತಾ ನಾಯ್ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.