Indian Football Team: ಮನೊಲೊ ಮಾರ್ಕ್ವೆಜ್: ಭಾರತೀಯ ಫುಟ್‌ಬಾಲ್ ತಂಡದ ಮುಖ್ಯ ಕೋಚ್
Team Udayavani, Jul 20, 2024, 10:52 PM IST
ಹೊಸದಿಲ್ಲಿ: ಸ್ಪೇನ್‌ನ ಮನೊಲೊ ಮಾರ್ಕ್ವೆಜ್ ಅವರನ್ನು ಭಾರತೀಯ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾ ಗಿದೆ. ಪ್ರಸ್ತುತ ಅವರು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಫ್ಸಿ ಗೋವಾ ತಂಡವನ್ನು ನೊಡಿ ಕೊಳ್ಳುತ್ತಿದ್ದರು. ವಜಾಗೊಂಡ ಇಗರ್ ಸ್ಟಿಮ್ಯಾಕ್ ಅವರ ಜಾಗಕ್ಕೆ ಮಾರ್ಕ್ವೆಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಅಖಿಲ ಭಾರತೀಯ ಫುಟ್‌ಬಾಲ್ ಫೆಡರೇಶನ್‌ನ ಕಾರ್ಯಕಾರಿ ಸಮಿತಿ ಸದ ಸ್ಯರು ಶನಿವಾರ ಸಭೆ ಸೇರಿ ಚರ್ಚಿಸಿ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ವೆಜ್ ಅವ ರನ್ನು ಆಯ್ಕೆ ಮಾಡಲು ನಿರ್ಧ ರಿಸಿತು. 55ರ ಹರೆಯದ ಮಾರ್ಕ್ವೆಜ್ ಪೂರ್ಣ ಪ್ರಮಾಣದಲ್ಲಿ ಕೋಚ್ ಹುದ್ದೆ ಸ್ವೀಕರಿಸುವ ಮೊದಲು ಐಎಸ್‌ಎಲ್ ಮತ್ತು ರಾಷ್ಟ್ರೀಯ ತಂಡದ ಕೋಚ್ ಹುದ್ದೆಯ ಕರ್ತವ್ಯ ನಿಭಾಯಿಸಲಿದ್ದಾರೆ ಎಂದು ಎಐಎಫ್ಎಫ್ ತಿಳಿಸಿದೆ.
ಮಾರ್ಕ್ವೆಜ್ ಅವರು 2020ರಿಂದ ಭಾರತದಲ್ಲಿ ಕೋಚ್ ಆಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟರವರೆಗೆ ಅವರು 2 ಐಎಸ್‌ಎಲ್ ಕ್ಲಬ್ ತಂಡದ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದಾರೆ. ಇದ ಲ್ಲದೇ ಸ್ಪೇನ್ ತಂಡದ ಕೆಳಗಿನ ವಿಭಾಗದ ಕ್ಲಬ್‌ಗಳಾದ ಲಾಸ್ ಪಾಲ್ಮಾಸ್ ಬಿ, ಎಸ್ಪಾನಿಯೋಲ್ ಬಿ, ಬಡಾಲೋನ, ಪ್ರಾಟ್, ಯುರೋಪ ಕ್ಲಬ್ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.