ಹಾಕಿ: ಮನ್‌ಪ್ರೀತ್ ಸಾಹಸ ಭಾರತಕ್ಕೆ ರೋಚಕ ಜಯ
Team Udayavani, Aug 15, 2017, 2:26 PM IST
ಹೊಸದಿಲ್ಲಿ: ಮನ್‌ಪ್ರೀತ್ ಸಿಂಗ್ ದಾಖಲಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತೀಯ ಪುರುಷರ ಹಾಕಿ ತಂಡ ಹಾಲೆಂಡ್ ವಿರುದ್ಧ ನಡೆದ ರೊಬೊ ಸೂಪರ್ ಸೀರೀಸ್ ಹಾಕಿ ಪಂದ್ಯದಲ್ಲಿ 4-3 ಗೋಲು ಅಂತರದ ಗೆಲುವು ಸಾಧಿಸಿದೆ.
ವಿಶ್ವದ ನಾಲ್ಕನೇ ಶ್ರೇಯಾಂಕಿತ ಹಾಲೆಂಡ್ ತಂಡವನ್ನು ಭಾರತ ಮಣಿಸಿತು ಎನ್ನುವುದು ವಿಶೇಷ. ಕಳೆದ ವಾರವಷ್ಟೇ ಬಲಿಷ್ಠ ಜರ್ಮನಿ ತಂಡವನ್ನು 7-1 ಗೋಲುಗಳ ಅಂತರದಿಂದ ಹಾಲೆಂಡ್ ಮಣಿಸಿತ್ತು. ಭಾರತದ ವಿರುದ್ಧವೂ ಭಾರೀ ಹೋರಾಟ ಪ್ರದರ್ಶಿಸುವ ಸೂಚನೆಯನ್ನು ಹಾಲೆಂಡ್ ನೀಡಿತ್ತು. ಆದರೆ ಮನ್‌ಪ್ರೀತ್ (30 ಹಾಗೂ 44ನೇ ನಿಮಿಷ), ವರುಣ್ ಕುಮಾರ್ (17 ನೇ ನಿಮಿಷ) ಹಾಗೂ ಹರ್ಜೀತ್ ಸಿಂಗ್ (49ನೇ ನಿಮಿಷ) ಗೋಲು ಗಳಿಸಿದ್ದರಿಂದ ಭಾರತ ಗೆಲುವು ಗಳಿಸಿತು.
ಆರಂಭದಲ್ಲಿ ಹಾಲೆಂಡ್ 1-0 ಅಂತರದ ಮುನ್ನಡೆ ಪಡೆದಿತ್ತು. ಆದರೆ 17ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಭಾರತ 1-1 ಗೋಲುಗಳಿಂದ ಸಮಬಲ ಸಾಧಿಸಿತು. 30ನೇ ನಿಮಿಷದಲ್ಲಿ ಮನ್‌ಪ್ರೀತ್ ಗೋಲು ದಾಖಲಿಸಿದ್ದರಿಂದ ಭಾರತ ಗೋಲಿನ ಗಳಿಕೆಯನ್ನು 2-1ಗೆ ಹೆಚ್ಚಿಸಿ ಕೊಂಡಿತು. ಅಂತಿಮ ಅವಧಿಯ ಆಟದ ವೇಳೆ ಭಾರತ ಗೋಲಿನ ಸಂಖ್ಯೆಯನ್ನು 3-1ಕ್ಕೆ ಹೆಚ್ಚಿಸಿಕೊಂಡ ಬಳಿಕ ಹಾಲೆಂಡ್ ಕೂಡ ಗೋಲು ದಾಖಲಿಸಿತು. ಗೋಲಿನ ಅಂತರವನ್ನು 3-2ಕ್ಕೆ ಏರಿಸಿಕೊಂಡಿತು. ಕೊನೆಯಲ್ಲಿ ಭಾರತ ಮತ್ತೂಂದು ಗೋಲು ದಾಖಲಿಸಿ 4-2 ಮುನ್ನಡೆ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.