Khel Ratna: ಮನು ಭಾಕರ್,ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ; ಇಲ್ಲಿದೆ ಸಂಪೂರ್ಣ ಪಟ್ಟಿ
Team Udayavani, Jan 2, 2025, 3:18 PM IST
ನವದೆಹಲಿ: ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಯನ್ನು ಕ್ರೀಡಾ ಸಚಿವಾಲಯ ಗುರುವಾರ (ಜ.2 ರಂದು) ಪ್ರಕಟಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ 2 ಕಂಚಿನ ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಮನು ಭಾಕರ್ ಮತ್ತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದ ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಣೆಯಾಗಿದೆ.
ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆಗೈದು ಕಂಚು ಗೆದ್ದ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್, ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ ಡಿ. ಗುಕೇಶ್ ಅವರು ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಆಥ್ಲೀಟ್ಸ್‌ಗಳು ಸ್ವೀಕರಿಸಲಿದ್ದಾರೆ.
ಖೇಲ್ ರತ್ನ ಪ್ರಶಸ್ತಿಯ ಮೊದಲ ಪಟ್ಟಿಯಲ್ಲಿ ಶೂಟರ್ ಮನು ಭಾಕರ್ ಅವರ ಹೆಸರು ಇರಲಿಲ್ಲ. ಇದರಿಂದ ಅವರ ತಂದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ಅಧಿಕೃತ ಪಟ್ಟಿಯಲ್ಲಿ ಮನು ಭಾಕರ್ ಅವರ ಹೆಸರನ್ನು ಸೇರಿಸಲಾಗಿದೆ.
ಕ್ರೀಡಾ ಸಚಿವಾಲಯವು ಜನವರಿ 17 ರಂದು ಖೇಲ್ ರತ್ನ, ಅರ್ಜುನ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ನೀಡಲಾಗುವ ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿದೆ.
ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, 32 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಮತ್ತು ಮೂವರು ಕೋಚ್‌ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ.
“ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸರಿಯಾದ ಪರಿಶೀಲನೆಯ ನಂತರ ಕ್ರೀಡಾಪಟುಗಳು ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಘಟಕಗಳಿಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ:
ಗುಕೇಶ್ ಡಿ – ಚೆಸ್
ಹರ್ಮನ್ಪ್ರೀತ್ ಸಿಂಗ್ – ಹಾಕಿ
ಪ್ರವೀಣ್ ಕುಮಾರ್ – ಪ್ಯಾರಾ-ಅಥ್ಲೆಟಿಕ್ಸ್
ಶ್ರೀಮತಿ ಮನು ಭಾಕರ್ – ಶೂಟಿಂಗ್
ಅರ್ಜುನ ಪ್ರಶಸ್ತಿ:
ಜ್ಯೋತಿ ಯರ್ರಾಜಿ – ಅಥ್ಲೆಟಿಕ್ಸ್
ಅಣ್ಣು ರಾಣಿ – ಅಥ್ಲೆಟಿಕ್ಸ್
ನೀತು – ಬಾಕ್ಸಿಂಗ್
ಸವೀಟಿ – ಬಾಕ್ಸಿಂಗ್
ವಾಂತಿಕಾ ಅಗರವಾಲ್ – ಚೆಸ್
ಸಲೀಮಾ ಟೆಟೆ – ಹಾಕಿ
ಅಭಿಷೇಕ್ – ಹಾಕಿ
ಸಂಜಯ್ – ಹಾಕಿ
ಜರ್ಮನ್ಪ್ರೀತ್ ಸಿಂಗ್ – ಹಾಕಿ
ಸುಖಜೀತ್ ಸಿಂಗ್ – ಹಾಕಿ
ರಾಕೇಶ್ ಕುಮಾರ್ – ಪ್ಯಾರಾ-ಆರ್ಚರಿ
ಪ್ರೀತಿ ಪಾಲ್ – ಪ್ಯಾರಾ-ಅಥ್ಲೆಟಿಕ್ಸ್
ಜೀವನಜಿ ದೀಪ್ತಿ – ಪ್ಯಾರಾ-ಅಥ್ಲೆಟಿಕ್ಸ್
ಅಜೀತ್ ಸಿಂಗ್ – ಪ್ಯಾರಾ-ಅಥ್ಲೆಟಿಕ್ಸ್
ಸಚಿನ್ ಸರ್ಜೆರಾವ್ ಖಿಲಾರಿ – ಪ್ಯಾರಾ-ಅಥ್ಲೆಟಿಕ್ಸ್
ಧರಂಬೀರ್ – ಪ್ಯಾರಾ-ಅಥ್ಲೆಟಿಕ್ಸ್
ಪ್ರಣವ್ ಸೂರ್ಮಾ – ಪ್ಯಾರಾ-ಅಥ್ಲೆಟಿಕ್ಸ್
ಹೆಚ್ ಹೊಕಾಟೊ ಸೆಮಾ – ಪ್ಯಾರಾ-ಅಥ್ಲೆಟಿಕ್ಸ್
ಸಿಮ್ರಾನ್ – ಪ್ಯಾರಾ-ಅಥ್ಲೆಟಿಕ್ಸ್
ನವದೀಪ್ – ಪ್ಯಾರಾ-ಅಥ್ಲೆಟಿಕ್ಸ್
ನಿತೇಶ್ ಕುಮಾರ್ – ಪ್ಯಾರಾ-ಬ್ಯಾಡ್ಮಿಂಟನ್
ತುಳಸಿಮತಿ ಮುರುಗೇಶನ್ – ಪ್ಯಾರಾ-ಬ್ಯಾಡ್ಮಿಂಟನ್
ನಿತ್ಯ ಶ್ರೀ ಸುಮತಿ ಶಿವನ್ – ಪ್ಯಾರಾ-ಬ್ಯಾಡ್ಮಿಂಟನ್
ಮನಿಶಾ ರಾಮದಾಸ್ – ಪ್ಯಾರಾ-ಬ್ಯಾಡ್ಮಿಂಟನ್
ಕಪಿಲ್ ಪರ್ಮಾರ್ – ಪ್ಯಾರಾ ಜೂಡೋ
ಮೋನಾ ಅಗರ್ವಾಲ್ – ಪ್ಯಾರಾ-ಶೂಟಿಂಗ್
ರುಬಿನಾ ಫ್ರಾನ್ಸಿಸ್ – ಪ್ಯಾರಾ-ಶೂಟಿಂಗ್
ಸ್ವಪ್ನಿಲ್ ಸುರೇಶ್ ಕುಸಲೆ – ಶೂಟಿಂಗ್
ಸರಬ್ಜೋತ್ ಸಿಂಗ್ – ಶೂಟಿಂಗ್
ಅಭಯ್ ಸಿಂಗ್ – ಸ್ಕ್ವಾಷ್
ಸಜನ್ ಪ್ರಕಾಶ್ – ಈಜು
ಅಮನ್ – ಕುಸ್ತಿ
ಅರ್ಜುನ ಪ್ರಶಸ್ತಿಗಳು (ಜೀವಮಾನ):
ಸುಚಾ ಸಿಂಗ್ – ಅಥ್ಲೆಟಿಕ್ಸ್
ಮುರಳಿಕಾಂತ್ ರಾಜಾರಾಮ್ ಪೇಟ್ಕರ್ – ಪ್ಯಾರಾ-ಈಜು
ಅತ್ಯುತ್ತಮ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ:
ಸುಭಾಷ್ ರಾಣಾ – ಪ್ಯಾರಾ-ಶೂಟಿಂಗ್
ದೀಪಾಲಿ ದೇಶಪಾಂಡೆ – ಚಿತ್ರೀಕರಣ
ಸಂದೀಪ್ ಸಾಂಗ್ವಾನ್ – ಹಾಕಿ
ಜೀವಮಾನದ ಕೆಟಗರಿ:
ಎಸ್ ಮುರಳೀಧರನ್ – ಬ್ಯಾಡ್ಮಿಂಟನ್
ಅರ್ಮಾಂಡೋ ಆಗ್ನೆಲೊ ಕೊಲಾಕೊ – ಫುಟ್ಬಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ
SA vs Pak, 2nd Test: ರಿಕಲ್ಟನ್ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ
Divorce Rumours: ಚಹಾಲ್ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?
Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.