ಫ್ರೆಂಚ್ ಓಪನ್-2022 : ಸಿಲಿಕ್-ರೂಡ್ ಸೆಮಿಫೈನಲ್ ಪ್ರವೇಶ
Team Udayavani, Jun 3, 2022, 6:05 AM IST
ಪ್ಯಾರಿಸ್: ಕ್ರೊವೇಶಿ ಯಾದ ಮರಿನ್ ಸಿಲಿಕ್ ಮತ್ತು ನಾರ್ವೆಯ ಕ್ಯಾಸ್ಪರ್ ರೂಡ್ ಫ್ರೆಂಚ್ ಓಪನ್ ಸೆಮಿಫೈನಲ್ ಸಮರಕ್ಕೆ ಅಣಿಯಾಗಿದ್ದಾರೆ. ಮೊದಲ ಉಪಾಂತ್ಯ ದಲ್ಲಿ ರಫೆಲ್ ನಡಾಲ್- ಅಲೆಕ್ಸಾಂಡರ್ ಜ್ವೆರೇವ್ ಎದುರಾಗಲಿದ್ದಾರೆ. ಎರಡೂ ಪಂದ್ಯಗಳು ಶುಕ್ರವಾರ ನಡೆಯಲಿವೆ. ಭಾರತೀಯ ಕಾಲಮಾನದಂತೆ ಸಂಜೆ 6.15 ಮತ್ತು ರಾತ್ರಿ 9 ಗಂಟೆಗೆ ಪಂದ್ಯ ಆರಂಭವಾಗಲಿದೆ.
8ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಡೆನ್ಮಾರ್ಕ್‌ನ ಹೋಲ್ಗರ್ ರುನ್ ವಿರುದ್ಧ 6-1, 4-6, 7-6 (7-2), 6-3 ಅಂತರದ ಜಯ ಸಾಧಿಸಿ ದರು. ಇದರೊಂದಿಗೆ ನಾರ್ವೆಯ ಟೆನಿಸಿಗನೋರ್ವ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿ ದಂತಾಯಿತು. ಹೋಲ್ಗರ್ ರುನ್ ಕಳೆದ ವರ್ಷದ ಫೈನಲಿಸ್ಟ್ ಸ್ಟೆಫನಸ್ ಸಿಸಿಪಸ್ ಅವರನ್ನು ಮಣಿಸುವ ಮೂಲಕ ಸುದ್ದಿಯಾಗಿದ್ದರು. ಆದರೆ ರೂಡ್ ವಿರುದ್ಧ ರುನ್ ಆಟ ಸಾಗಲಿಲ್ಲ.
“ನಾರ್ವೆ ಟೆನಿಸ್ ಪಾಲಿಗೆ ಇದೊಂದು ಬಿಗ್ ಡೇ. ಒಂದು ದಿನದ ಅಭ್ಯಾಸದ ಬಳಿಕ ಸೆಮಿಫೈನಲ್ ಕದನಕ್ಕೆ ಅಣಿಯಾಗುವೆ. ಈ ಹಂತದ ಪಂದ್ಯವನ್ನು ಆಡಬೇಕೆಂಬುದು ನನ್ನ ಎಷ್ಟೋ ವರ್ಷದ ಕನಸಾಗಿತ್ತು’ ಎಂದು ಕ್ಯಾಸ್ಪರ್ ರೂಡ್ ಗೆಲುವಿನ ಬಳಿಕ ಪ್ರತಿಕ್ರಿಯಿಸಿದರು.
4 ವರ್ಷಗಳ ಬಳಿಕ :
ಮರಿನ್ ಸಿಲಿಕ್ 4 ವರ್ಷಗಳ ಬಳಿಕ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿದರು. ಅವರು ರಷ್ಯದ 7ನೇ ಶ್ರೇಯಾಂಕಿತ ಆಟಗಾರ ಆ್ಯಂಡ್ರೆ ರುಬ್ಲೇವ್ ವಿರುದ್ಧ 5-7, 6-3, 6-4, 3-6 7-6 (10-2) ಅಂತರದ ಮೇಲುಗೈ ಸಾಧಿಸಿದರು. 2014ರ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸಿಲಿಕ್ 2018ರ ಆಸ್ಟ್ರೇಲಿ ಯನ್ ಓಪನ್‌ನಲ್ಲಿ ಕೊನೆಯ ಸಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ತಲುಪಿದ್ದರು.
ಬೋಪಣ್ಣ ಜೋಡಿಗೆ ಸೋಲು :
ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ ರೋಹನ್ ಬೋಪಣ್ಣ ಜೋಡಿ ವೀರೋಚಿತ ಸೋಲನುಭವಿಸಿ ಕೂಟ ದಿಂದ ನಿರ್ಗಮಿಸಿತು. ಬೋಪಣ್ಣ ಇಲ್ಲಿ ನೆದರ್ಲೆಂಡ್ಸ್‌ನ ಮ್ಯಾಟೆÌ ಮಿಡ್ಲ್ ಕೂಪ್ ಜತೆಗೂಡಿ ಆಡಲಿಳಿದಿದ್ದರು. ನೆದರ್ಲೆಂಡ್ಸ್‌ನ ಮತ್ತೋರ್ವ ಆಟಗಾರ ಜೀನ್ ಜೂಲಿಯನ್ ರೋಜರ್ ಹಾಗೂ ಎಲ್ ಸಾಲ್ವಡಾರ್‌ನ ಮಾರ್ಸೆಲೊ ಅರೆವಲೊ ಸೇರಿಕೊಂಡು ಈ ಮುಖಾಮುಖೀಯನ್ನು ಸೂಪರ್ ಟೈ ಬ್ರೇಕರ್‌ನಲ್ಲಿ ಗೆದ್ದರು. ಅಂತರ 4-6, 6-3, 7-6 (10-8). ಬೋಪಣ್ಣ ಮೊದಲ ಸಲ ಫ್ರೆಂಚ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಆದರೆ ಇಲ್ಲಿಂದ ಮುಂದೆ ಸಾಗಲು ಅವರಿಂದ ಸಾಧ್ಯವಾಗಲಿಲ್ಲ. ಇಲ್ಲಿ ಜಯಿಸಿದ್ದೇ ಆದರೆ 2013ರ ಬಳಿಕ ಗ್ರ್ಯಾನ್‌ಸ್ಲಾಮ್ ಕೂಟದ ಪುರುಷರ ಡಬಲ್ Õನಲ್ಲಿ ಭಾರತದ ಟೆನಿಸಿಗನೋರ್ವ ಫೈನಲ್ ತಲುಪಿದಂತಾಗುತ್ತಿತ್ತು. ಅಂದು ಲಿಯಾಂಡರ್ ಪೇಸ್ ಯುಎಸ್ ಓಪನ್ ಫೈನಲ್‌ನಲ್ಲಿ ಆಡಿದ್ದರು.
ಸ್ವಿಯಾಟೆಕ್, ಗಾಫ್ ಫೈನಲ್ ಓಟ :
ವನಿತಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ, ಪೋಲೆಂಡ್‌ನ ಐಗಾ ಸ್ವಿಯಾ ಟೆಕ್ ಮತ್ತು ಅಮೆರಿಕದ ಕೊಕೊ ಗಾಫ್ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದ್ದಾರೆ. ಸ್ವಿಯಾಟೆಕ್ ರಷ್ಯದ ದರಿಯಾ ಕಸತ್ಕಿನಾ ವಿರುದ್ಧ 6-2, 6-1 ಅಂತರದ ಸುಲಭ ಗೆಲುವು ಸಾಧಿಸಿದರು. ಕೇವಲ 64 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಅಮೆರಿಕದ ಕೊಕೊ ಗಾಫ್ 6-3, 6-1ರಿಂದ ಇಟಲಿಯ ಮಾರ್ಟಿನಾ ಟ್ರೆವಿಸನ್ ಅವರನ್ನು ಮಣಿಸಿದರು.
ಐಗಾ ಸ್ವಿಯಾಟೆಕ್ 2020 ರಲ್ಲಿ ಫ್ರೆಂಚ್ ಓಪನ್ ಚಾಂಪಿ ಯನ್ ಆಗುವ ಮೂಲಕ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಈಗ ಎರಡನೇ ಸಲ ಪ್ಯಾರಿಸ್ ಕ್ವೀನ್ ಎನಿಸಿಕೊಳ್ಳುವ ಹಾದಿಯ ಲ್ಲಿದ್ದಾರೆ. ಈ ಜಯದೊಂದಿಗೆ ಸ್ವಿಯಾಟೆಕ್ ತಮ್ಮ ಸತತ ಗೆಲುವಿನ ಓಟವನ್ನು 34 ಪಂದ್ಯಗಳಿಗೆ ವಿಸ್ತರಿಸಿ ಸೆರೆನಾ ವಿಲಿಯಮ್ಸ್ ದಾಖಲೆಯನ್ನು ಸರಿದೂಗಿಸಿದರು. ಮುಂದಿರು ವುದು ವೀನಸ್ ವಿಲಿಯಮ್ಸ್ ಅವರ ಸತತ 35 ಪಂದ್ಯಗಳ ಗೆಲುವಿನ ದಾಖಲೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.