ಮಾರ್ಲಾನ್ ಸಾಮ್ಯುಯೆಲ್ಸ್ ವಿದಾಯ
Team Udayavani, Nov 4, 2020, 11:22 PM IST
ಜಾರ್ಜ್‌ಟೌನ್: ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್, ಅವಳಿ ಟಿ20 ವಿಶ್ವಕಪ್ ಗೆಲುವಿನ ರೂವಾರಿ ಹಾಗೂ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿದ್ದ ಮಾರ್ಲಾನ್ ಸ್ಯಾಮುಯೆಲ್ಸ್ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.
ಸಾಮ್ಯಯೆಲ್ಸ್ ಕ್ರಿಕೆಟ್ ಬದುಕಿನ ಮಹಾನ್ ಸಾಧನೆಯೆಂದರೆ, 2012 ಮತ್ತು 2016ರಲ್ಲಿ ವೆಸ್ಟ್ ಇಂಡೀಸಿಗೆ ಟಿ20 ವಿಶ್ವಕಪ್ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದು. ಈ ಎರಡೂ ಫೈನಲ್‌ಗಳಲ್ಲಿ ಸ್ಯಾಮುಯೆಲ್ಸ್ ಅವರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 2012ರಲ್ಲಿ 56 ಎಸೆತಗಳಿಂದ 78 ರನ್, 2016ರಲ್ಲಿ 66 ಎಸೆತಗಳಿಂದ 85 ರನ್ ಬಾರಿಸಿದ್ದು ಸಾಮ್ಯುಯೆಲ್ಸ್ ಸಾಧನೆ.
2000ದ ಋತುವಿನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಯಾಮುಯೆಲ್ಸ್ , 2018ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಈ ನಡುವೆ ನಾನಾ ವಿವಾದಗಳಿಂದ 2 ವರ್ಷ ಕಾಲ ನಿಷೇಧಕ್ಕೂ ಒಳಗಾಗಿದ್ದರು.
ಸ್ಯಾಮುಯೆಲ್ಸ್ ಕಳೆದ ಜೂನ್‌ನಲ್ಲಿಯೇ ತಮ್ಮ ನಿವೃತ್ತಿ ಬಗ್ಗೆ “ಕ್ರಿಕೆಟ್ ವೆಸ್ಟ್ ಇಂಡೀಸ್’ಗೆ ಮಾಹಿತಿ ನೀಡಿದ್ದರು ಎಂದು ಮಂಡಳಿಯ ಸಿಇಓ ಜಾನಿ ಗ್ರೇವ್ ತಿಳಿಸಿದ್ದಾರೆ.
ಸಾಮ್ಯುಯೆಲ್ಸ್ ಸಾಧನೆ
ಸ್ಯಾಮುಯೆಲ್ಸ್ ವಿಂಡೀಸ್ ಪರ 71 ಟೆಸ್ಟ್ , 207 ಏಕದಿನ ಮತ್ತು 67 ಟಿ20 ಪಂದ್ಯಗಳನ್ನಾಡಿದ್ದಾರೆ. ಒಟ್ಟು 17 ಶತಕಗಳ ನೆರವಿನಿಂದ 11,134 ರನ್ ಹಾಗೂ 152 ವಿಕೆಟ್ ಸಂಪಾದಿಸಿದ್ದು ಸಾಮ್ಯುಯೆಲ್ಸ್ ಅವರ ಅಂತಾರಾಷ್ಟ್ರೀಯ ಸಾಧನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.