![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 23, 2019, 11:30 PM IST
ಬ್ರಿಸ್ಬೇನ್: ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳೆರಡರಲ್ಲೂ ಅಮೋಘ ಹಿಡಿತ ಸಾಧಿಸಿದ ಆಸ್ಟ್ರೇಲಿಯ, ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ವನ್ನು ಸೋಲಿನ ಪ್ರಪಾತಕ್ಕೆ ಬೀಳಿಸುವುದು ಖಚಿತಗೊಂಡಿದೆ. 340 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಪಾಕ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 64ಕ್ಕೆ 3 ವಿಕೆಟ್ ಉರುಳಿಸಿಕೊಂಡು ಪರದಾಡುತ್ತಿದೆ.
ಪಾಕಿಸ್ಥಾನದ 240ಕ್ಕೆ ಉತ್ತರವಾಗಿ ಒಂದಕ್ಕೆ 312 ರನ್ ಬಾರಿಸಿದ್ದ ಆಸ್ಟ್ರೇಲಿಯ, 3ನೇ ದಿನದಾಟದಲ್ಲಿ 580 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಲಭಿಸಿದ ಮುನ್ನಡೆ 340 ರನ್. ಪಾಕ್ ದ್ವಿತೀಯ ಸರದಿಯಲ್ಲೂ ಕುಸಿತ ಅನುಭವಿಸಿದ್ದು, ಇನ್ನಿಂಗ್ಸ್ ಸೋಲಿನ ಭೀತಿಯಲ್ಲಿದೆ. 7 ವಿಕೆಟ್‌ಗಳನ್ನು ಹೊಂದಿರುವ ಅಜರ್ ಅಲಿ ಪಡೆ, ಈ ಸಂಕಟದಿಂದ ಪಾರಾಗಲು ಇನ್ನೂ 276 ರನ್ ಮಾಡಬೇಕಿದೆ.
ಲಬುಶೇನ್ ಆಕರ್ಷಕ ಶತಕ
ಶನಿವಾರದ ಆಟದಲ್ಲಿ ಆಸೀಸ್ ಕ್ರಿಕೆಟಿನ ನವತಾರೆ, ಟೆಸ್ಟ್ ಕ್ರಿಕೆಟಿನ ಮೊದಲ “ಬದಲಿ ಬ್ಯಾಟ್ಸ್‌ಮನ್’ ಖ್ಯಾತಿಯ ಮಾರ್ನಸ್ ಲಬುಶೇನ್ 185 ರನ್ ಬಾರಿಸಿ ಪಾಕ್ ಬೌಲರ್‌ಗಳನ್ನು ಪುಡಿಗೈದರು. 10ನೇ ಟೆಸ್ಟ್ ಆಡುತ್ತಿರುವ ಲಬುಶೇನ್ ಹೊಡೆದ ಮೊದಲ ಶತಕ ಇದಾಗಿದೆ. 279 ಎಸೆತಗಳ ಈ ಆಕರ್ಷಕ ಬ್ಯಾಟಿಂಗ್ ವೇಳೆ 20 ಬೌಂಡರಿ ಸಿಡಿಯಲ್ಪಟ್ಟಿತು.
151 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಡೇವಿಡ್ ವಾರ್ನರ್ ಈ ಮೊತ್ತಕ್ಕೆ ಕೇವಲ 3 ರನ್ ಸೇರಿಸಿ ನಿರ್ಗಮಿಸಿದರು (154). ಏಳೇ ರನ್ ಅಂತರದಲ್ಲಿ ಸ್ಟೀವನ್ ಸ್ಮಿತ್ (4) ವಿಕೆಟ್ ಉರುಳಿತು. ಆದರೆ ಲಬುಶೇನ್-ಮ್ಯಾಥ್ಯೂ ವೇಡ್ ಸೇರಿಕೊಂಡು ಮತ್ತೆ ಪಾಕ್ ಮೇಲೆ ಸವಾರಿ ಮಾಡತೊಡಗಿದರು. 4ನೇ ವಿಕೆಟಿಗೆ 110 ರನ್ ಒಟ್ಟುಗೂಡಿತು. ವೇಡ್ ಗಳಿಕೆ 60 ರನ್. 97 ಎಸೆತ ಎದುರಿಸಿದ ಅವರು 7 ಬೌಂಡರಿ ಮತ್ತು ಆಸೀಸ್ ಸರದಿಯ ಏಕೈಕ ಸಿಕ್ಸರ್ ಹೊಡೆದರು.
ಪಾಕ್ ಬ್ಯಾಟಿಂಗ್ ಕುಸಿತ
ಪಾಕಿಸ್ಥಾನ ಈಗಾಗಲೇ ಅಜರ್ ಅಲಿ (5), ಹ್ಯಾರಿಸ್ ಸೊಹೈಲ್ (8) ಮತ್ತು ಅಸದ್ ಶಫೀಕ್ (0) ವಿಕೆಟ್ ಕಳೆದುಕೊಂಡಿದೆ. 27 ರನ್ ಮಾಡಿರುವ ಆರಂಭಕಾರ ಶಾನ್ ಮಸೂದ್ ಮತ್ತು 20 ರನ್ ಗಳಿಸಿರುವ ಬಾಬರ್ ಆಜಂ ಕ್ರೀಸಿನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ಥಾನ-240 ಮತ್ತು 3 ವಿಕೆಟಿಗೆ 64 (ಮಸೂದ್ ಬ್ಯಾಟಿಂಗ್ 27, ಬಾಬರ್ ಬ್ಯಾಟಿಂಗ್ 20, ಸ್ಟಾರ್ಕ್ 25ಕ್ಕೆ 2). ಆಸ್ಟ್ರೇಲಿಯ-580 (ಲಬುಶೇನ್ 185, ವಾರ್ನರ್ 154, ಬರ್ನ್ಸ್ 97, ವೇಡ್ 60, ಯಾಸಿರ್ ಶಾ 205ಕ್ಕೆ 4, ಸೊಹೈಲ್ 75ಕ್ಕೆ 2, ಅಫ್ರಿದಿ 96ಕ್ಕೆ 2).
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.