ಸಿಲೇಸಿಯಾನ್ ಬಾಕ್ಸಿಂಗ್: ಚಿನ್ನದೊಂದಿಗೆ ಮೆರೆದ ಮೇರಿ, ಜ್ಯೋತಿ
Team Udayavani, Sep 17, 2018, 3:21 PM IST
ಗ್ಲಿವೈಸ್ (ಪೋಲೆಂಡ್): ಪೋಲೆಂಡ್ನಲ್ಲಿ ನಡೆಯುತ್ತಿರುವ 13ನೇ “ಸಿಲೇಸಿಯಾನ್ ಓಪನ್ ಬಾಕ್ಸಿಂಗ್ ಟೂರ್ನಿ’ಯಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಎಂ. ಸಿ. ಮೇರಿ ಕೋಮ್ ಮತ್ತು ಜ್ಯೋತಿ ಗುಲಿಯಾ ಚಿನ್ನದ ಪದಕ ಗೆದ್ದಿದ್ದಾರೆ.
ವನಿತಾ ಬಾಕ್ಸಿಂಗ್ ಟೂರ್ನಿಯ 48 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಕಜಾಕಿಸ್ಥಾನದ ಅಯಿಗೆರಿಮ್ ಕಸ್ಸಾನಯೇವಾ ಅವರನ್ನು 5-0 ಯಿಂದ ಸೋಲಿಸಿ ಪ್ರಸಕ್ತ ಋತುವಿನಲ್ಲಿ ಮೂರನೇ ಚಿನ್ನ ಗೆದ್ದರು. ಇದಕ್ಕೂ ಮುನ್ನ ಇಂಡಿಯನ್ ಓಪನ್ ಟೂರ್ನಿ, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅವರು ಬಂಗಾರ ಬೇಟೆಯಾಡಿದ್ದರು. ಆದರೆ ಗಾಯಾಳಾಗಿ ಕಳೆದ ಜಕಾರ್ತಾ ಏಶ್ಯಾಡ್ನಿಂದ ದೂರ ಉಳಿದಿದ್ದರು. ಈಗ ಚಿನ್ನದೊಂದಿಗೆ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಾರಿದ್ದಾರೆ.
ಮಾಜಿ ಒಲಿಂಪಿಕ್ ಕಂಚಿನ ಪದಕ ವಿಜೇತೆ ಮೇರಿ ಕೋಮ್ ಸ್ಪರ್ಧೆಯುದ್ದಕ್ಕೂ ಎಚ್ಚರಿಕೆಯ ಹಾಗೂ ರಕ್ಷಣಾತ್ಮಕ ಆಟವಾಡಿ ಪ್ರತಿ ಸ್ಪರ್ಧಿಗೆ ಅಂಕ ಗಳಿಸಲು ಅವಕಾಶವನ್ನೇ ನೀಡಲಿಲ್ಲ.
ಯುವ ವಿಭಾಗದ ದಾಖಲೆ
ಯುವ ವಿಭಾಗದ 55 ಕೆಜಿ ಸ್ಪರ್ಧೆಯಲ್ಲಿ ಮಾಜಿ ವಿಶ್ವ ಚಾಂಪಿಯನ್ ಖ್ಯಾತಿಯ ಜ್ಯೋತಿ ಗುಲಿಯಾ ಚಿನ್ನದ ಪದಕ ಗೆದ್ದರು. ಇದು ಭಾರತಕ್ಕೆ ಯುವ ವಿಭಾಗದಲ್ಲಿ ಲಭಿಸಿದ ಮೊದಲ ಬಂಗಾರ. ಜ್ಯೋತಿ ಗುಲಿಯಾ ಆತಿಥೇಯ ನಾಡಿನ ಮಾಜಿ ವಿಶ್ವ ಚಾಂಪಿಯನ್ ತತಿಯಾನಾ ಪುಟಾ ಅವರನ್ನು ಸೋಲಿಸಿದರು. 17ರ ಹರೆಯದ ಜ್ಯೋತಿ ನವೆಂಬರ್ ನಲ್ಲಿ ಅರ್ಜೆಂಟಿನಾದಲ್ಲಿ ನಡೆಯಲಿರುವ ಯೂತ್ ಒಲಿಂಪಿಕ್ಸ್ಗೆ ಆಯ್ಕೆಯಾದ ಭಾರತದ ಏಕೈಕ ಬಾಕ್ಸರ್
ಆಗಿದ್ದಾರೆ.
ಕಿರಿಯರಿಗೆ 13 ಪದಕ
ಈ ಟೂರ್ನಿಯಲ್ಲಿ ಕಿರಿಯ ಬಾಕ್ಸರ್ಗಳು ಉತ್ತಮ ಪ್ರದರ್ಶನ ತೋರಿದ್ದು 6 ಚಿನ್ನ, 6 ಬೆಳ್ಳಿ, 1 ಕಂಚಿನ ಪದಕಗಳೊಂದಿಗೆ ಒಟ್ಟು 13 ಪದಕ ಗೆದ್ದಿದ್ದಾರೆ.
ಬಂಗಾರದ ಸಾಧಕರೆಂದರೆ ಭಾರತಿ (46 ಕೆಜಿ), ಸನ್ಯಾ ನೇಗಿ (48 ಕೆಜಿ), ಸಂದೀಪ್ ಕೌರ್ (52 ಕೆಜಿ), ನೇಹಾ (54 ಕೆಜಿ), ಅರ್ಶಿ ಖಾನಮ್ (57 ಕೆಜಿ) ಮತ್ತು ಕೋಮಲ್ (80 ಕೆಜಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.