ಭಾರತದ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಕಾಮನ್ವೆಲ್ತ್ ಗೇಮ್ಸ್ನಿಂದ ಔಟ್
Team Udayavani, Jun 10, 2022, 11:21 PM IST
ಹೊಸದಿಲ್ಲಿ: ಭಾರತದ ಚಾಂಪಿಯನ್ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಅವರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಕನಸು ಛಿದ್ರಗೊಂಡಿದೆ. ಆಯ್ಕೆ ಟ್ರಯಲ್ಸ್ ವೇಳೆ ಮಂಡಿಗೆ ಬಲವಾದ ಏಟು ಅನುಭವಿಸಿದ ಅವರು ಗೇಮ್ಸ್ನಿಂದ ಹೊರಗುಳಿಯುವ ಸಂಕಟಕ್ಕೆ ಸಿಲುಕಿದರು.
6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕಾಮ್ 48 ಕೆಜಿ ವಿಭಾಗದ ಸೆಮಿಫೈನಲ್ನ ಮೊದಲ ಸುತ್ತಿನಲ್ಲಿ ಹರ್ಯಾಣದ ನೀತು ವಿರುದ್ಧ ಸ್ಪರ್ಧಿಸುತ್ತಿದ್ದ ವೇಳೆ ಈ ಆಘಾತಕ್ಕೆ ಒಳಗಾದರು. ಎಡಗಾಲು ಉಳುಕಿದ ಪರಿಣಾಮ ಮಂಡಿಗೆ ತೀವ್ರವಾದ ಏಟು ಬಿತ್ತು. ಇದು ಬಹಳ ಗಂಭೀರ ಸ್ವರೂಪದ್ದಾದ್ದರಿಂದ ಚೇತರಿಕೆಗೆ ಬಹಳ ಸಮಯ ತಗಲುತ್ತದೆ ಎಂದು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
39 ವರ್ಷದ ಮೇರಿ ಕೋಮ್ ಆಯ್ಕೆ ಟ್ರಯಲ್ಸ್ನ ಮೊದಲ ಸುತ್ತಿನಲ್ಲೇ ಎಡವಿದರು. ಬಳಿಕ ವೈದ್ಯಕೀಯ ಚಿಕಿತ್ಸೆ ಪಡೆದು ಮರಳಿ ಹೋರಾಟಕ್ಕೆ ಇಳಿದರೂ ಒಂದೆರಡು ಪಂಚ್ಗಳ ಬಳಿಕ ನೋವು ತೀವ್ರಗೊಂಡಿತು. ಸ್ಪರ್ಧೆಯಿಂದ ಹಿಂದೆ ಸರಿದರು. ನೀತು ಅವರನ್ನು ವಿಜೇತೆ ಎಂದು ಘೋಷಿಸಲಾಯಿತು.
ಮೇರಿ ಕೋಮ್ ಕಾಮನ್ವೆಲ್ತ್ ಗೇಮ್ಸ್ ವನಿತಾ ಬಾಕ್ಸಿಂಗ್ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸಾಧಕಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. 2018ರ ಗೋಲ್ಡ್ ಕೋಸ್ಟ್ ಗೇಮ್ಸ್ನಲ್ಲಿ ಮೇರಿ ಈ ಸಾಧನೆಗೈದಿದ್ದರು.
ಫೈನಲ್ಗೆ ಜರೀನ್, ಲವ್ಲಿನಾ
ವಿಶ್ವ ಚಾಂಪಿಯನ್ ನಿಖತ್ ಜರೀನ್ (50 ಕೆಜಿ) ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ (70 ಕೆಜಿ) ಕಾಮನ್ವೆಲ್ತ್ ಗೇಮ್ಸ್ ಆಯ್ಕೆಯ ಬಾಗಿಲಲ್ಲಿ ನಿಂತಿದ್ದಾರೆ. ಇಬ್ಬರೂ ಅರ್ಹತಾ ಸುತ್ತಿನ ಫೈನಲ್ ತಲುಪಿದ್ದು, ಶನಿವಾರ ಈ ಸ್ಪರ್ಧೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.