ಪ್ರಸಿಡೆಂಟ್ಸ್ ಕಪ್ ಬಾಕ್ಸಿಂಗ್: ಬಂಗಾರ ಗೆದ್ದ ಮೇರಿ ಕೋಮ್
Team Udayavani, Jul 29, 2019, 10:44 AM IST
ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ 23ನೇ “ಪ್ರಸಿಡೆಂಟ್ಸ್ ಕಪ್ ಬಾಕ್ಸಿಂಗ್’ ಟೂರ್ನಿಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ. ಇಂಡೋನೇಶ್ಯದಲ್ಲಿ ನಡೆದ ಈ ಕೂಟದ 51 ಕೆಜಿ ವಿಭಾಗದಲ್ಲಿ ಮೇರಿ ಈ ಸಾಧನೆಗೈದರು.
ರವಿವಾರ ನಡೆದ ಫೈನಲ್ನಲ್ಲಿ ಮೇರಿ ಕೋಮ್ ಆಸ್ಟ್ರೇಲಿಯದ ಎಪ್ರಿಲ್ ಫ್ರ್ಯಾಂಕ್ಸ್ ಅವರನ್ನು 5-0 ಅಂಕಗಳ ಅಂತರದಿಂದ ಮಣಿಸಿದರು. ಮೇರಿ ಪಟ್ಟುಗಳಿಗೆ ತತ್ತರಿಸಿದ ಫ್ರ್ಯಾಂಕ್ಸ್ ಪ್ರತಿಹೋರಾಟ ನೀಡುವಲ್ಲಿ ಸಂಪೂರ್ಣ ವಿಫಲರಾದರು. ಸ್ಪರ್ಧೆ ಏಕಪಕ್ಷೀಯವಾಗಿ ಮುಗಿಯಿತು.
36ರ ಹರೆಯದ ಮೇರಿ ಕೋಮ್ ಕಳೆದ “ಇಂಡಿಯನ್ ಓಪನ್ ಬಾಕ್ಸಿಂಗ್’ ಟೂರ್ನಿಯಲ್ಲೂ ಬಂಗಾರಕ್ಕೆ ಮುತ್ತಿ ಕ್ಕಿದ್ದರು. ಆದರೆ ಒಲಿಂಪಿಕ್ ಅರ್ಹತಾ ಸುತ್ತಿನ ಪ್ರಮುಖ ಕೂಟವಾಗಿದ್ದ ಏಶ್ಯನ್ ಚಾಂಪಿ ಯನ್ಶಿಪ್ನಿಂದ ಹೊರಗುಳಿದಿದ್ದರು.
ವಿಶ್ವ ಕೂಟಕ್ಕೆ ತಯಾರಿ
ಮುಂಬರುವ ವಿಶ್ವ ಚಾಂಪಿಯನ್ಶಿಪ್ ಬಾಕ್ಸಿಂಗ್ ಟೂರ್ನಿಯ ಹಿನ್ನೆಲೆಯಲ್ಲಿ ಮೇರಿ ಕೋಮ್ ಅವರಿಗೆ ಈ ಕೂಟ ಅತ್ಯಂತ ಮಹತ್ವದ್ದಾಗಿತ್ತು. 2019ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ರಶ್ಯದ ಯೆಕಟೆರಿನ್ಬರ್ಗ್ನಲ್ಲಿ ಸೆ. 7ರಿಂದ 21ರ ತನಕ ನಡೆಯಲಿದೆ. 2020ರ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಸಂಪಾದಿಸುವ ನಿಟ್ಟಿನಲ್ಲಿ ಮೇರಿ ಕೋಮ್ ಪಾಲಿಗೆ ಇದು ಮಹತ್ವದ ಕೂಟವಾಗಿದೆ.
ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮೇರಿ ಕೋಮ್ 6ನೇ ಚಿನ್ನದ ಪದಕ ಜಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ಕೂಟದಲ್ಲಿ ಭಾರತ ಒಟ್ಟು 9 ಪದಕ ಗೆದ್ದಿತು. ಇದರಲ್ಲಿ 7 ಚಿನ್ನದ ಪದಕಗಳಾದರೆ, 2 ಬೆಳ್ಳಿ ಪದಕಗಳಾಗಿವೆ. ಫೈನಲ್ ತಲುಪಿದ ಎಲ್ಲ 4 ವನಿತಾ ಬಾಕ್ಸರ್ಗಳು ಚಿನ್ನ ಜಯಿಸಿದರು. ಪುರುಷರು 3 ಚಿನ್ನ, 2 ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಸಿಮ್ರನ್ಜಿತ್ ಕೌರ್, ಜಮುನಾ ಬೋರೊ, ಮೋನಿಕಾ, ಪುರುಷರ ವಿಭಾಗದಲ್ಲಿ ಅಂಕುಷ್ ದಹಿಯಾ, ನೀರಜ್ ಸ್ವಾಮಿ, ಅನಂತ್ ಪ್ರಹ್ಲಾದ್ ಸ್ವರ್ಣ ಸಾಧನೆಗೈದ ಬಾಕ್ಸರ್ಗಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.