Swiss Open tennis; ಮ್ಯಾಟಿಯೊ ಬರೆಟಿನಿ ಚಾಂಪಿಯನ್
Team Udayavani, Jul 21, 2024, 11:43 PM IST
ಗಸ್ಟಾಡ್ (ಸ್ವಿಜರ್ಲೆಂಡ್): ಇಟಲಿಯ ಮ್ಯಾಟಿಯೊ ಬರೆಟಿನಿ “ಸ್ವಿಸ್ ಓಪನ್ ಟೆನಿಸ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 6ನೇ ಶ್ರೇಯಾಂಕದ ಬರೆಟಿನಿ ಫೈನಲ್‌ನಲ್ಲಿ ಫ್ರಾನ್ಸ್‌ನ ಅರ್ಹತಾ ಆಟಗಾರ ಕ್ವೆಂಟಿನ್ ಹ್ಯಾಲಿಸ್ ವಿರುದ್ಧ ಕೇವಲ 59 ನಿಮಿಷಗಳಲ್ಲಿ 6-3, 6-1 ಅಂತರದ ಜಯ ಸಾಧಿಸಿದರು. ಇದು ಪ್ರಸಕ್ತ ಸೀಸನ್‌ನಲ್ಲಿ ಬರೆಟಿನಿ ಗೆದ್ದ 2ನೇ ಪ್ರಶಸ್ತಿ.
ಫೈನಲ್‌ನಲ್ಲಿ ಎಡವಿದ ನಡಾಲ್
ಬಸ್ಟಾಡ್ (ಸ್ವೀಡನ್): 2022ರ ಬಳಿಕ ಮೊದಲ ಫೈನಲ್ ಕಂಡ ರಫೆಲ್ ನಡಾಲ್, ಸ್ವೀಡಿಶ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟರು. ಇವರೆದುರು ಪೋರ್ಚುಗಲ್‌ನ ನುನೊ ಬೋಗ್ಸ್ì 6-3, 6-2 ಅಂತರದ ಗೆಲುವು ಸಾಧಿಸಿದರು.
ಯೂಕಿ-ಅಲ್ಬಾನೊ ಜೋಡಿಗೆ ಪ್ರಶಸ್ತಿ
ಯೂಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ ಸೇರಿಕೊಂಡು ಸ್ವಿಸ್ ಓಪನ್ ಎಟಿಪಿ ಟೂರ್ ಟೆನಿಸ್ ಪ್ರಶಸ್ತಿ ಜಯಿಸಿದ್ದಾರೆ. ತೀವ್ರ ಹೋರಾಟ ಕಂಡ ಫೈನಲ್‌ನಲ್ಲಿ ಯುಗೊ ಹಂಬರ್ಟ್ -ಫ್ಯಾಬ್ರಿಕ್ ಮಾರ್ಟಿನ್ ವಿರುದ್ಧ 3-6, 6-3, 10-6 ಅಂತರದ ಗೆಲುವು ಸಾಧಿಸಿದರು. ಇದು ಯೂಕಿ ಭಾಂಬ್ರಿ ಗೆದ್ದ 3ನೇ ಎಟಿಪಿ ಡಬಲ್ಸ್ ಪ್ರಶಸ್ತಿ. ಒಲಿವೆಟ್ ಜತೆಗೂಡಿ ಜಯಿಸಿದ 2ನೇ ಪ್ರಶಸ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.