ಮಾಯಗಾರ ಮಾಯಾಂಕ್‌


Team Udayavani, Dec 27, 2018, 6:00 AM IST

mayank-agarwal-3rd-test.jpg

ಮೆಲ್ಬರ್ನ್: ಸತತವಾಗಿ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತ, ಭಾರತ ಅಂತಾರಾಷ್ಟ್ರೀಯ ತಂಡದಲ್ಲಿ ಆಡಲು ಸುದೀರ್ಘ‌ ಕಾಲ ಕಾದು, ಈಗಷ್ಟೇ ಅವಕಾಶ ಪಡೆದ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌, ಆ ಅವಕಾಶವನ್ನು ಚಿನ್ನದ ಅವಕಾಶವನ್ನಾಗಿ ಬದಲಾಯಿಸಿದ್ದಾರೆ. 

ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಮಾಯಾಂಕ್‌, ಬೌಲರ್‌ಗಳ ತಾಳ್ಮೆಯನ್ನು ಕೆಡಿಸುತ್ತ ಸಾಗಿ 76 ರನ್‌ ಗಳಿಸಿದರು. ಈ ರನ್‌ಗಳೊಂದಿಗೆ ಹಲವು ನೋವು, ಆಕ್ರೋಶ, ಆತಂಕದ ದಿನಗಳಿಗೆ ಮುಕ್ತಾಯ ಹಾಡಿದರು. ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಅದ್ಭುತವಾಗಿ ಆರಂಭಿಸಿರುವ ಅವರಿಗೆ, ಇದನ್ನು ಅಷ್ಟೇ ಸಶಕ್ತವಾಗಿ ಮುಂದುವರಿಸಬೇಕಾದ ಜವಾಬ್ದಾರಿ ಬಾಕಿಯುಳಿದಿದೆ.

ಹಿಂದಿನೆರಡು ಟೆಸ್ಟ್‌ ಪಂದ್ಯಗಳಲ್ಲಿ ಕೆ.ಎಲ್‌. ರಾಹುಲ್‌ ಮತ್ತು ಮುರಳಿ ವಿಜಯ್‌ ಆರಂಭಕಾರರಾಗಿ ವಿಫ‌ಲರಾಗಿದ್ದರು. ಇಬ್ಬರ ತೀವ್ರ ವೈಫ‌ಲ್ಯದಿಂದ ಬೇಸತ್ತ ತಂಡ, ಈ ಟೆಸ್ಟ್‌ನಲ್ಲಿ ಇಬ್ಬರನ್ನೂ ಹೊರಗಿಟ್ಟು ಮಾಯಾಂಕ್‌ ಅಗರ್ವಾಲ್‌ ಮತ್ತು ಹನುಮ ವಿಹಾರಿಗೆ ಇನಿಂಗ್ಸ್‌ ಆರಂಭಿಸುವ ಹೊಣೆಗಾರಿಕೆ ನೀಡಿತು. ಈ ಇಬ್ಬರು ಸೂಕ್ತವಾಗಿಯೇ ನಿರ್ವಹಿಸಿದರು. ಚೆಂಡು ಎದುರಿಸಿದ ಲೆಕ್ಕಾಚಾರದಲ್ಲಿ, ದ.ಆಫ್ರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯ,ನ್ಯೂಜಿಲೆಂಡ್‌ನ‌ಲ್ಲಿ 2010ರ ನಂತರ ಭಾರತದ ಆರಂಭಿಕರು ದಾಖಲಿಸಿದ ಅತ್ಯುತ್ತಮ ಜೊತೆಯಾಟವಿದು. ಈ ವರ್ಷ ವಿದೇಶದಲ್ಲಿ ಆಡಿದ ಒಟ್ಟಾರೆ 11 ಟೆಸ್ಟ್‌ಗಳಲ್ಲಿ ವಿಹಾರಿ-ಅಗರ್ವಾಲ್‌ 6ನೆಯ ಆರಂಭಿಕ ಜೋಡಿ.

ಈ ಇಬ್ಬರೂ 18.5 ಓವರ್‌ ಎದುರಿಸಿ ದಾಖಲಿಸಿದ್ದು ಬರೀ 40 ರನ್‌. ಇದರಿಂದ ಹಿಂದಿನೆರಡು ಪಂದ್ಯಗಳಲ್ಲಿ ಭಾರತೀಯರು ಎದುರಿಸಿದ್ದ ಆರಂಭಿಕ ಆಘಾತ ಈ ಬಾರಿ ತಪ್ಪಿ ಹೋಯಿತು. ಅದರಲ್ಲೂ ಹನುಮ ವಿಹಾರಿ ಮೊದಲ ರನ್‌ ಬಾರಿಸಲು ತೆಗೆದುಕೊಂಡಿದ್ದು 25 ಎಸೆತ! ಅವರು ಒಟ್ಟಾರೆ 66 ಎಸೆತ ಎದುರಿಸಿ 8 ರನ್‌ ಮಾತ್ರ ಗಳಿಸಿದರು. ಈ ಹಂತದಲ್ಲಿ ಅವರು ಪ್ರದರ್ಶಿಸಿದ ತಾಳ್ಮೆ ಅಸಾಧಾರಣ.

ಮಾಯಾಂಕ್‌ ಮಾಯೆ: ತಮ್ಮ ವೃತ್ತಿಜೀವನದಲ್ಲಿ ಒದಗಿ ಬಂದ ಅವಕಾಶವನ್ನು ಅತ್ಯುತ್ತಮವಾಗಿಯೇ ಬಳಸಿಕೊಂಡ ಮಾಯಾಂಕ್‌ ಅಗರ್ವಾಲ್‌,ಎಲ್ಲೂ ಅಪಾಯಕ್ಕೆ ಆಹ್ವಾನ ನೀಡಲಿಲ್ಲ. ಹಾಗಂತ ಬಹಳ ನಿಧಾನಕ್ಕೂ ಆಡಲಿಲ್ಲ. 95 ಅರ್ಧಶತಕ ಬಾರಿಸಿದರು. ಒಟ್ಟು 76 ರಅವರು ಅದಕ್ಕಾಗಿ ಬಳಸಿಕೊಂಡ ಎಸೆತ ಹಂತದಲ್ಲಿ 8 ಬೌಂಡರಿ, 1 ಸಿಕ್ಸರ್‌ ಬಾರಿಸಿದರು. ಟೀ ವಿರಾಮಕ್ಕೂ ಮುಂಚೆ ಅವರು ಆಸ್ಟ್ರೇಲಿಯ ಬೌಲರ್‌ಗಳು ನಿಟ್ಟುಸಿರುಬಿಟ್ಟರು.

ಕೊಹ್ಲಿ-ಪೂಜಾರ ಹೊಣೆಗಾರಿಕೆ: ಅಗರ್ವಾಲ್‌-ಹನುಮ ವಿಹಾರಿ ಔಟಾದ ನಂತರ ಜೊತೆಚೇತೇಶ್ವರ ಪೂಜಾರ-ವಿರಾಟ್‌ ಕೊಹ್ಲಿ. ತಮ್ಮ ಪಾಲಿನ ಹೊಣೆಗಾರಿಕೆಯನ್ನು ಅತ್ಯುತ್ತನಿಭಾಯಿಸಿ 92 ರನ್‌ ಜೊತೆಯಾಟವಾಡಿಇಬ್ಬರೂ ಒಂದೊಂದು ಜೀವದಾನ ಪಡೆದಿದ್ದಾರೆ.

ಮೊದಲ ಟೆಸ್ಟ್‌ನಂತೆಯೇ ಈ ಟೆಸ್ಟ್‌ನಲ್ಲೂ ಪೂಜಾರ ತಾಳ್ಮೆ ಸಾಕಾರಮೂರ್ತಿಯಂತೆ ಆಡಿದರು. 200 ಎಸೆತ ಎದುರಿಸಿದ ಅವರು 6 ಬೌಂಡರಿಗಳ ಸಹಿತ 68 ರನ್‌ಗಳಿಸಿ ಶತಕದತ್ತ ಸಾಗಿದ್ದಾರೆ. ಅಷ್ಟು ಮಾತ್ರವಲ್ಲ ತಮ್ಮ ಅಸಾಮಾನ್ಯ ತಾಳ್ಮೆಯ ಮೂಲಕ ಎದುರಾಳಿ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡಿದ್ದಾರೆ. 52ನೇ ಓವರ್‌ನಲ್ಲಿ ಒಮ್ಮೆ ಚೇತೇಶ್ವರ ಪೂಜಾರ ಕ್ಯಾಚ್‌ ನೀಡಿದರು.

ಹಿಡಿಯಲು ಬಹಳ ಕಷ್ಟವಾಗಿದ್ದ ಅದನ್ನು ಉಸ್ಮಾನ್‌ ಆಸ್ಟ್ರೇಲಿಯಕ್ಕೆ ಆಘಾತಕಾರಿಯಾಗಿ ಪರಿಣಮಿಸಿದ್ದು ನಾಯಕ ಕೊಹ್ಲಿ ಕ್ಯಾಚ್‌ ಕೈಚೆಲ್ಲಿದ್ದು. 87ನೇ ಓವರ್‌ ನಲ್ಲಿ ಮಿಚೆಲ್‌ ಸ್ಟಾರ್ಕ್‌ ಎಸೆತದಲ್ಲಿ ಕೊಹ್ಲಿ ನೀಡಿದ ಕ್ಯಾಚನ್ನು ಟಿಮ್‌ ಪೇನ್‌ ಬಿಟ್ಟುಬಿಟ್ಟರು.

ಕೊಹ್ಲಿಗೆ ಚೀತ್ಕಾರ, ಪುರಸ್ಕಾರ: ಕೊಹ್ಲಿ ಬ್ಯಾಟ್‌ ಹಿಡಿದು ಬಂದಾಗ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ತೋರಿದರು. ಒಂದು ಗುಂಪು ಸಂತೋಷದಿಂದ ಚಪ್ಪಾಳೆ ತಟ್ಟಿದರೆ, ಇನ್ನೊಂದು ಗುಂಪು ಜೋರಾಗಿ ಕೂಗಿ ಅಣಕಿಸಿತು. ಇದಕ್ಕೆಲ್ಲ ತಮ್ಮ ಬ್ಯಾಟಿಂಗ್‌ ಮೂಲಕವೇ ಉತ್ತರ ಕೊಟ್ಟ ಅವರು ಅಜೇಯ 47 ರನ್‌ಗಳಿಸಿದರು. 107 ಎಸೆತ ಎದುರಿಸಿ ಅವರು 6 ಬೌಂಡರಿ ಬಾರಿಸಿದರು.

ರನ್‌ಗತಿ ತೀವ್ರ ಕುಸಿತ
ಮೊದಲ ದಿನ ಭಾರತ ಕೇವಲ ಎರಡು ವಿಕೆಟ್‌ ಕಳೆದುಕೊಂಡರೂ,ಗಳಿಸಿದ್ದು 215 ರನ್‌ ಮಾತ್ರ. ವಿಕೆಟ್‌ ಉಳಿಸಿಕೊಂಡ ಸಂತಸವಿದ್ದರೂ ನಿಧಾನಗತಿಯಲ್ಲಿ ರನ್‌ ಬಂದಿರುವುದು ಸ್ವಲ್ಪ ಹಿನ್ನಡೆಯೇ ಸರಿ. ಇಡೀ ದಿನ ಭಾರತದ ಒಟ್ಟಾರೆ ರನ್‌ ಸರಾಸರಿ ಓವರ್‌ಗೆ 2.5 ರನ್‌ ಮಾತ್ರ! ಬ್ಯಾಟಿಂಗ್‌ಗೆ ಅನುಕೂಲವಾಗಿರುವಂತೆ ಮೆಲ್ಬರ್ನ್ ಅಂಕಣ ಕಂಡುಬಂದರೂ,ಭಾರತೀಯರು ರನ್‌ಗಳಿಸಲು ತಿಣುಕಾಡಿದ್ದು ಪ್ರಶ್ನಾರ್ಹವಾಗಿತ್ತು.

ಸ್ಕೋರ್‌
ಭಾರತ ಮೊದಲ ಇನಿಂಗ್ಸ್‌    215/2
ಹನುಮ ವಿಹಾರಿ ಸಿ ಫಿಂಚ್‌ ಬಿ ಕಮಿನ್ಸ್‌    8
ಮಾಯಾಂಕ್‌ ಅಗರ್ವಾಲ್‌ ಸಿ ಪೇನ್‌ ಬಿ ಕಮಿನ್ಸ್‌    76
ಚೇತೇಶ್ವರ ಪೂಜಾರ ಅಜೇಯ    68
ವಿರಾಟ್‌ ಕೊಹ್ಲಿ ಅಜೇಯ    47
ಇತರೆ    16
ವಿಕೆಟ್‌ ಪತನ: 1-40, 2-123
ಬೌಲಿಂಗ್‌
ಮಿಚೆಲ್‌ ಸ್ಟಾರ್ಕ್‌    16    6    32    0
ಜೋಶ್‌ ಹೇಜಲ್‌ವುಡ್‌    18    6    45    0
ನಥನ್‌ ಲಿಯೋನ್‌    21    4    59    0
ಪ್ಯಾಟ್‌ ಕಮಿನ್ಸ್‌    19    6    40    2
ಮಿಚೆಲ್‌ ಮಾರ್ಷ್‌    15    3    23    0

ಟಾಪ್ ನ್ಯೂಸ್

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.