Team India; ವಿಶ್ವಕಪ್‌ಗೆ ಬೇಕು ಮಾಯಾಂಕ್ ಯಾದವ್!
Team Udayavani, Apr 4, 2024, 7:20 AM IST
ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ತಂಡದ “ಸೂಪರ್ ಕ್ವಿಕ್’ ಬೌಲರ್ ಮಾಯಾಂಕ್ ಯಾದವ್ ಈ ಐಪಿಎಲ್‌ನಲ್ಲಿ ಭಾರೀ ಸಂಚಲನ ಮೂಡಿಸುತ್ತಿದ್ದಾರೆ. ಶರ ವೇಗದ, ಅಷ್ಟೇ ನಿಖರ ಎಸೆತಗಳಿಂದ ಎದು ರಾಳಿಯ ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲು ಪಂಜಾಬ್, ಬಳಿಕ ಆರ್‌ಸಿಬಿ ಆಟಗಾರರು ಈ ವೇಗಿಯ ದಾಳಿಗೆ ತತ್ತರಿಸಿ ಶರಣಾಗತಿ ಸಾರಿದ್ದಾರೆ. ಮೊನ್ನೆ ಮೊನ್ನೆಯ ತನಕ ಅಪರಿಚಿತರಾಗಿಯೇ ಇದ್ದ ದಿಲ್ಲಿಯ ಈ ಬೌಲರ್ ಈಗ ಐಪಿಎಲ್‌ನ ಸೂಪರ್ ಸ್ಟಾರ್. ಇವರ ಸಾಹಸವನ್ನು ಕೊಂಡಾಡಿದವರೆಲ್ಲ ಮುಂದಿನ ಟಿ20 ವಿಶ್ವಕಪ್‌ಗೆ ಈ ವೇಗಿ ಟೀಮ್ ಇಂಡಿಯಾದಲ್ಲಿ ಇರಲೇಬೇಕು ಎಂದು!
ಮಾಯಾಂಕ್ ಯಾದವ್ ಅವರ ವೇಗದ ಬೌಲಿಂಗ್ ವಿಶ್ವದ ಸಮಕಾ ಲೀನ ವೇಗಿಗಳಾದ ಕಾಗಿಸೊ ರಬಾಡ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮೊದಲಾದವರ ಪ್ರಶಂಸೆಗೆ ಪಾತ್ರವಾಗಿದೆ. ಮಾಯಾಂಕ್ ಭಾರತದ ವಿಶ್ವಕಪ್ ತಂಡದಲ್ಲಿರಬೇಕು ಎಂಬುದು ಎಲ್ಲರ ಹಾರೈಕೆಯೂ ಆಗಿದೆ.
ಎರಡೂ ಪಂದ್ಯಗಳಲ್ಲಿ ತಲಾ 3 ವಿಕೆಟ್ ಉರುಳಿಸಿದ್ದು, ಎರಡರಲ್ಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದದ್ದು ಮಾಯಾಂಕ್ ಯಾದವ್ ಅವರ ಯಶಸ್ಸಿಗೆ ಸಾಕ್ಷಿ.
ಇಶಾಂತ್, ಸೈನಿ ಸಲಹೆ
ಮಾಯಾಂಕ್ ಯಾದವ್ ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸು ತ್ತಿದ್ದಾರೆ. ಸೀನಿಯರ್ ಬೌಲರ್‌ಗಳಾದ ಇಶಾಂತ್ ಶರ್ಮ, ನವದೀಪ್ ಸೈನಿ ಅವರು ನೀಡಿದ ಸಲಹೆ ತನ್ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ.
“ನಿನ್ನ ಬೌಲಿಂಗ್‌ನಲ್ಲಿ ಯಾವುದೇ ಹೊಸತನ ಬೇಕಿದ್ದರೂ ಅಳವಡಿಸಿಕೊ, ಆದರೆ ಯಾವ ಕಾರಣಕ್ಕೂ ವೇಗ ದೊಂದಿಗೆ ರಾಜಿ ಮಾಡಿಕೊಳ್ಳಬೇಡ ಎಂದು ಇಶಾಂತ್ ಭಾಯ್, ಸೈನಿ ಭಾಯ್ ಸಲಹೆ ನೀಡಿದ್ದಾರೆ. ಇದನ್ನು ನಾನು ಪಾಲಿಸಿಕೊಂಡು ಬರುತ್ತಿದ್ದೇನೆ’ ಎಂದಿದ್ದಾರೆ ಮಾಯಾಂಕ್ ಯಾದವ್.
“ವೇಗದ ಎಸೆತಗಳೊಂದಿಗೆ ವಿಕೆಟ್ ಕೆಡವಿ ತಂಡದ ಯಶಸ್ಸಿಗೆ ಕೊಡುಗೆ ಸಲ್ಲಿಸುವುದು ನನ್ನ ಪ್ರಮುಖ ಗುರಿ. ಆದರೆ ಇಂಥ ವೇಗದ ಎಸೆತಗಳ ವೇಳೆ ಪೇಸ್, ಲೈನ್-ಲೆಂತ್ ಕಾಪಾಡಿ ಕೊಳ್ಳುವುದು ಅತೀ ಮುಖ್ಯ. ಬೌಲಿಂಗ್ ವೇಳೆ ವೇಗದ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಪಂದ್ಯದ ಬಳಿಕ ಜನರಲ್ಲಿ ನನ್ನ ವೇಗದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತೇನೆ’ ಎಂಬುದಾಗಿ ಮಾಯಾಂಕ್ ಯಾದವ್ ಹೇಳಿದರು.
“ಅತೀ ವೇಗದ ಬೌಲರ್ ಆಗುವು ದಕ್ಕಿಂತ ಅತ್ಯುತ್ತಮ ಬೌಲರ್ ಆಗ ಬೇಕೆಂಬುದು ನನ್ನ ಕನಸು. ಇದೇ ಯಶಸ್ಸು ಕಾಯ್ದುಕೊಂಡು ಭಾರತ ತಂಡದ ಪರ ಆಡುವುದು ನನ್ನ ಗುರಿ. ಮುಂದಿರುವುದು ಟಿ20 ವಿಶ್ವಕಪ್. ನಿರೀಕ್ಷೆಯಂತೂ ಇದೆ. ಏನಾಗುತ್ತದೋ ನೋಡೋಣ. ಸದ್ಯದ ಯೋಚನೆ ಐಪಿ ಎಲ್ ಮಾತ್ರ’ ಎಂದಿದ್ದಾರೆ ಮಾಯಾಂಕ್ ಯಾದವ್.
ಮಾಯಾಂಕ್ ಹಾದಿ…
ಮಾಯಾಂಕ್ ಪ್ರಭು ಯಾದವ್, ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಕಲ್ಪನೆ ಮಾಡುವ ಸ್ಥಿತಿಯಲ್ಲೂ ಇರಲಿಲ್ಲ. 7 ವರ್ಷಗಳ ಹಿಂದೆ ಹೊಸದಿಲ್ಲಿ ಸಾನೆಟ್ ಕ್ರಿಕೆಟ್ ಕ್ಲಬ್‌ಗ ಕಾಲಿಟ್ಟಾಗ ಅವರಿಗೆ ಕೇವಲ 14 ವರ್ಷ. ಕೃಶ ಶರೀರ ಹೊಂದಿದ್ದ ಮಾಯಾಂಕ್ ಬಳಿ ಯೋಗ್ಯವಾದ ಶೂ ಕೂಡ ಇರಲಿಲ್ಲ.
ಸಾನೆಟ್ ಕ್ಲಬ್‌ಗೆ ಒಬ್ಬ ಒಳ್ಳೆಯ ಬೌಲರ್ ಬೇಕಿತ್ತು. ಅದೇ ವೇಳೆ ಮಾಯಾಂಕ್ ಕ್ಲಬ್ ಪ್ರವೇಶಿಸಿದ್ದರು. ಅವರ ತಂದೆ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು, ಕುಟುಂಬದ ದಿನದ ಊಟಕ್ಕೆ ವ್ಯವಸ್ಥೆ ಮಾಡುತ್ತಿದ್ದರು. ಸಾನೆಟ್ ಕ್ಲಬ್‌ನ ತಾರಕ್ ಸಿನ್ಹಾ ಇವರ ಮೊದಲ ಕೋಚ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.