Mayanti Langer; ಸರಿಯಾದ ಬಟ್ಟೆ ಧರಿಸಿ ಎಂದು ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟ ಮಯಾಂತಿ
Team Udayavani, Nov 19, 2023, 10:06 AM IST
ಅಹಮದಾಬಾದ್: ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರು ಹಲವು ಬಾರಿ ವಿವಿಧ ಕಾರಣಗಳಿಂದ ಸುದ್ದಿಯಾಗುತ್ತಾರೆ. ಇದೀಗ ಅವರು ತನ್ನ ಡ್ರೆಸ್ ನ ಕಾರಣದಿಂದ ಟ್ರೋಲ್ ಆಗಿದ್ದರು. ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಸೆಮಿ ಫೈನಲ್ ಪಂದ್ಯದ ವೇಳೆ ತಾನು ಧರಿಸಿದ್ದ ಡ್ರೆಸ್ ಕಾರಣದಿಂದ ಮಯಾಂತಿ ಲ್ಯಾಂಗರ್ ಭಾರಿ ಟ್ರೋಲ್ ಆಗಿದ್ದರು.
ಈ ಪಂದ್ಯದ ವೇಳೆ ಸುನಿಲ್ ಗವಾಸ್ಕರ್ ಜೊತೆಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಮಯಾಂತಿ ಅವರು ಸ್ಕರ್ಟ್ ಮತ್ತು ಬ್ಲೇಜರ್ ಧರಿಸಿದ್ದರು. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಧಿರಿಸನ್ನು ಸಂದರ್ಭಕ್ಕೆ ಸೂಕ್ತವಲ್ಲದ್ದು ಎಂದು ಟ್ರೋಲ್ ಮಾಡಿದ್ದರು, ಗವಾಸ್ಕರ್ ಅವರ ಔಪಚಾರಿಕ ಉಡುಗೆಗೆ ಹೋಲಿಕೆ ಮಾಡಲಾಗಿತ್ತು. ಅಲ್ಲದೆ ಕೆಲವರು ಫೋಟೊ ತಿರುಚಿ ಮಯಾಂತಿ ಅವರು ಪ್ಯಾಂಟ್ ಧರಿಸಿದಂತೆ ಫೋಟೊಶೂಟ್ ಮಾಡಿದ್ದರು. ಇದೀಗ ಲ್ಯಾಂಗರ್ ಅವರು ಟ್ರೋಲ್ ಗಳಿಗೆ ಉತ್ತರಿಸಿದ್ದು, “ಫೈನಲ್ ಪಂದ್ಯಕ್ಕೆ ನಾವು ಸಂಪೂರ್ಣ ಸೂಟ್ ಅನ್ನು ಖರೀದಿಸಬಹುದು” ಎಂದು ವಿಡಂಬನಾತ್ಮಕವಾಗಿ ಹೇಳಿದ್ದಾರೆ.
“ಬಜೆಟ್ ಬಗ್ಗೆ ನಿಮ್ಮ ನಿಜವಾದ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟಿದ್ದೇನೆ. ನನ್ನನ್ನು ಅಸಂಖ್ಯಾತ ಪೋಸ್ಟ್ ಗಳಲ್ಲಿ ಟ್ಯಾಗ್ ಮಾಡಲಾಗಿದೆ, ನನ್ನ ಕುಟುಂಬ ಮತ್ತು ಸ್ನೇಹಿತರು ಚಿತ್ರಗಳಿಂದ ಮುಳುಗಿದ್ದಾರೆ, ಕೆಲವರು ಬಹುಶಃ ಬ್ಲೇಜರ್ ಡ್ರೆಸ್ ನ ದೌರ್ಜನ್ಯವನ್ನು ಕಡಿಮೆ ಮಾಡಲು ಅದನ್ನು ಬದಲಾಯಿಸಿದ್ದಾರೆ. ಭಯಪಡಬೇಡಿ, ಫೈನಲ್ ಗಾಗಿ ನಾವು ಸಂಪೂರ್ಣ ಸೂಟ್ ಅನ್ನು ಖರೀದಿಸಬಹುದು”ಎಂದು ಮಯಾಂತಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಅಲ್ಲದೆ ಕಪ್ಪು ಪೂರ್ಣ ಸೂಟ್ ನಲ್ಲಿರುವ ಚಿತ್ರವನ್ನೂ ಹಂಚಿಕೊಂಡರು.
So moved by your genuine concern regarding budgets. Concerns that have me tagged in innumerable posts, my family and friends being inundated by images, some altered perhaps to play down the atrocity of a Blazer dress 🫣 Fear not, we can afford a full suit for the Final 🥹 pic.twitter.com/cCNv32iqTq
— Mayanti Langer Binny (@MayantiLanger_B) November 18, 2023
2007 ರಲ್ಲಿ ತನ್ನ ಬ್ರಾಡ್ ಕಾಸ್ಟಿಂಗ್ ವೃತ್ತಿಯನ್ನು ಪ್ರಾರಂಭಿಸಿದ ಲ್ಯಾಂಗರ್ ಸದ್ಯ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಪ್ರಸಾರಕರಲ್ಲಿ ಒಬ್ಬರಾದರು. ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಕ್ರಿಕೆಟ್ ವಿಶ್ವಕಪ್, ಐಸಿಸಿ ಕ್ರಿಕೆಟ್ ಟ್ವೆಂಟಿ 20 ವಿಶ್ವಕಪ್ ಸೇರಿದಂತೆ ಹಲವಾರು ಪ್ರಮುಖ ಕ್ರಿಕೆಟ್ ಕೂಟಗಳಲ್ಲಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.