ಮೇರಿ, ಮಂಜುರಾಣಿ ಕ್ವಾರ್ಟರ್ ಫೈನಲಿಗೆ
ವಿಶ್ವ ವನಿತಾ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಹೊರಬಿದ್ದ ಸವೀಟಿ ಬೋರಾ
Team Udayavani, Oct 9, 2019, 3:02 AM IST
ಉಲನ್ ಉಡೆ (ರಶ್ಯ): ಆರು ಬಾರಿಯ ಚಾಂಪಿಯನ್ ಎಂಸಿ ಮೇರಿ ಕೋಮ್ ಅವರು ಕಠಿನ ಹೋರಾಟದಲ್ಲಿ ಗೆಲುವು ಸಾಧಿಸಿ ವಿಶ್ವ ವನಿತಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದ್ದಾರೆ.
ಇದೇ ವೇಳೆ 48 ಕೆ.ಜಿ. ವಿಭಾಗದಲ್ಲಿ ಭಾರತದ ಮಂಜು ರಾಣಿ ಅವರು ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಆದರೆ 75 ಕೆ.ಜಿ. ವಿಭಾಗದಲ್ಲಿ ಸವೀಟಿ ಬೋರಾ ಅವರು ಪ್ರಬಲ ಹೋರಾಟ ನಡೆಸಿದ್ದರೂ ಪ್ರೀ-ಕ್ವಾರ್ಟರ್‌ಫೈನಲ್ ಹೋರಾಟದಲ್ಲಿ ಸೋತು ನಿರಾಸೆ ಮೂಡಿಸಿದರು.
ಹೋರಾಟದ ಗೆಲುವು
ಕಠಿನ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೇರಿ ಕೋಮ್, ಮೊದಲ ಬಾರಿಗೆ ಇಲ್ಲಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಈ ಹಿಂದೆ 48 ಕೆ.ಜಿ. ವಿಭಾಗದಲ್ಲಿ 6 ವಿಶ್ವಕಪ್ ಗೆದ್ದಿರುವ ಮೇರಿ, ಈ ಬಾರಿ ತೂಕ ವಿಭಾಗವನ್ನು ಬದಲಿಸಿಕೊಂಡು ಕಣಕ್ಕಿಳಿದಿದ್ದಾರೆ. ಹಿಂದಿನ ವಿಭಾಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದರೂ, ಹೊಸ ವಿಭಾಗ ಅವರಿಗೆ ಸ್ವಲ್ಪ ಸವಾಲಾಗಿ ಪರಿಣಮಿಸಿದೆ.
ಮೊದಲ ಪಂದ್ಯದಲ್ಲಿ ಬೈ ಪಡೆದಿದ್ದ ಮೇರಿ, 16ರ ಘಟ್ಟದಲ್ಲಿ ಬಹಳ ಹೋರಾಟ ಮಾಡಿ ಗೆಲುವು ಸಾಧಿಸಿದರು. ಥಾಯ್ಲೆಂಡ್‌ನ ಜುಟಾಮಸ್ ಜಿಟಾ³ಂಗ್ ಎದುರು 36 ವರ್ಷದ ಮೇರಿ 5-0 ಅಂತರದಿಂದ ಜಯಭೇರಿ ಮೊಳಗಿಸಿದರು. ಆದರೆ ಇದು ಸುಲಭವಾಗಿರಲಿಲ್ಲ. ಸ್ಪರ್ಧಾ ಲೆಕ್ಕಾಚಾರದಲ್ಲಿ 5-0 ಗೆಲುವು ಸಾಧಿಸಿದರೂ, ಪ್ರತೀ ಹೋರಾಟದಲ್ಲಿಯೂ ಬಡಿದಾಡಬೇಕಾಯಿತು. ಪಂದ್ಯಾರಂಭವಾದ ಮೊದಲ ಮೂರು ನಿಮಿಷ ಮೇರಿ ಕೋಮ್, ದಾಳಿ ಮಾಡಲು ಮುಂದಾಗದೇ ಕೇವಲ ರಕ್ಷಣೆ ಮಾಡಿಕೊಳ್ಳುತ್ತ; ಎದುರಾಳಿಯ ಚಲನೆಯ ಗತಿಯನ್ನು ನಿರೀಕ್ಷಿಸುತ್ತ ಸಾಗಿದರು. ಅದಾದ ನಂತರ ತಿರುಗಿಬಿದ್ದು ಆಕ್ರಮಣ ನಡೆಸಿದರು. ಇಲ್ಲಿ ಮೇರಿಯ ಅನುಭವ ಬಹಳ ಕೆಲಸ ಮಾಡಿತು.
ಥಾಯ್ಲೆಂಡ್ ಎದುರಾಳಿಯ ಪ್ರಬಲ ಹೊಡೆತಗಳನ್ನು ತಡೆದುಕೊಂಡು, ಸೂಕ್ತ ಪ್ರತಿಕ್ರಿಯೆ ನೀಡಲು ಯಶಸ್ವಿಯಾದರು. ಜಿಟಾ³ಂಗ್ ಆಕ್ರಮಣಕಾರಿಯಾಗಿ ಕಂಡರೂ, ಹೊಡೆತಗಳನ್ನು ನಿಖರವಾಗಿ ಗುರಿಮುಟ್ಟಿಸಲು ಸಾಧ್ಯವಾಗದೇ ಒದ್ದಾಡಿದರು. ಮೇರಿ ಚಾಣಾಕ್ಷತೆಯಿಂದ ತಪ್ಪಿಸಿಕೊಂಡು ಎದುರಾಳಿಯನ್ನು ಸೋಲಿನ ಬಲೆಗೆ ಕೆಡವಿದರು.
ಎಚ್ಚರಿಕೆಯ ಸೆಣಸಾಟ
ಈ ಹಿಂದೆ ಮೇರಿಕೋಮ್ ಹೋರಾಡುತ್ತಿದ್ದ 48 ಕೆ.ಜಿ. ವಿಭಾಗದಲ್ಲಿ ಕಣಕ್ಕೆ ಇಳಿದಿದ್ದ ಮಂಜು ರಾಣಿ ಅವರು ಯಾವುದೇ ಒತ್ತಡಕ್ಕೆ ಒಳಗಾಗದೇ ಸೆಣಸಾಟ ನಡೆಸಿದರು. ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಅವರು ವೆನೆಜುವೆಲಾದ ರೋಜಾಸ್ ಟಯೊನಿಸ್ ಸಿಡೆನೊ ಅವರನ್ನು 5-0 ಅಂತರದಿಂದ ಉರುಳಿಸಿ ಕ್ವಾರ್ಟರ್‌ಫೈನಲಿಗೇರಿದರು.
ಚೊಚ್ಚಲ ಬಾರಿ ವಿಶ್ವಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಮಂಜು ರಾಣಿ ಇನ್ನೊಂದು ಸ್ಪರ್ಧೆಯಲ್ಲಿ ಗೆದ್ದರೆ ಪದಕ ಗೆಲ್ಲಲಿದ್ದಾರೆ. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಅವರಿಗೆ ಕಠಿನ ಎದುರಾಳಿ ಸಿಕ್ಕಿದ್ದಾರೆ. ಕಳೆದ ಋತುವಿನ ಕಂಚು ಪದಕ ವಿಜೇತೆ ಮತ್ತು ಅಗ್ರ ಶ್ರೇಯಾಂಕದ ದಕ್ಷಿಣ ಕೊರಿಯದ ಕಿಮ್ ಹ್ಯಾಂಗ್ ಮೀ ಅವರನ್ನು ಮಂಜು ಎದುರಿಸಬೇಕಾಗಿದೆ. ಈ ಹೋರಾಟ ಗುರುವಾರ ನಡೆಯಲಿದೆ.
ಮಂಜು ರಾಣಿ ಈ ವರ್ಷದ ಆರಂಭದಲ್ಲಿ ಬಲ್ಗೇರಿಯಾದಲ್ಲಿ ನಡೆದ ಪ್ರತಿಷ್ಠಿತ ಸ್ಟ್ರಾಡ್ಜ ಮೆಮೊರಿಯನ್ ಬಾಕ್ಸಿಂಗ್ ಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.
ಬೋರಾ ನಿರಾಸೆ
75 ಕೆ.ಜಿ. ವಿಭಾಗದಲ್ಲಿ ಭಾರತದ ಸವೀಟಿ ಬೋರಾ ಪ್ರಬಲ ಹೋರಾಟ ನಡೆಸಿದ್ದರೂ ವೇಲ್ಸ್ ನ ಲಾರೆನ್ ಪ್ರೈಸ್ ಅವರಿಗೆ 3-1 ಅಂತರದಿಂದ ಶರಣಾದರು. ಯುರೋಪಿಯನ್ ಗೇಮ್ಸ್‌ನ ಚಿನ್ನ ವಿಜೇತೆ ಪ್ರೈಸ್ ಕಳೆದ ವರ್ಷದ ಈ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. ಅವರು ಹಾಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?
Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.