ಪದಕಪಟ್ಟಿ: 1962ರ ಇತಿಹಾಸ ಪುನರಾವರ್ತನೆ ?
Team Udayavani, Aug 13, 2018, 6:10 AM IST
ಹೊಸದಿಲ್ಲಿ: ಏಶ್ಯನ್ ಗೇಮ್ಸ್‌ನ ಆರಂಭಿಕ ಹಂತದಲ್ಲಿ ಭಾರತವು ಪದಕ ಪಟ್ಟಿಯಲ್ಲಿ ಉನ್ನನ ಸಾಧನೆ ಮಾಡುತ್ತಿತ್ತು. ಹೊಸದಿಲ್ಲಿಯಲ್ಲಿ ನಡೆದ ಉದ್ಘಾಟನಾ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿತ್ತು. ಜಪಾನ್ ಅಗ್ರಸ್ಥಾನ ಪಡೆದಿತ್ತು. ಜಕಾರ್ತದಲ್ಲಿ ನಡೆದ 1962ರ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಮೂರನೇ ಸ್ಥಾನ ಪಡೆದಿತ್ತು.
1980ರ ವರೆಗೆ ಭಾರತ ಸ್ಥಿರ ನಿರ್ವಹಣೆ ನೀಡುತ್ತ ಬಂದಿದ್ದು ಅಗ್ರ ಐದರೊಳಗಿನ ಸ್ಥಾನ ಅಲಂಕರಿಸುತ್ತಿತ್ತು. ಆದರೆ ಕ್ರೀಡೆಯಲ್ಲಿ ಸೂಪರ್ ಶಕ್ತಿಯಾಗಿ ಚೀನ ಮತ್ತು ಕೊರಿಯ ಉದಯಿಸಿದ ಬಳಿಕ ಮತ್ತು ಕಜಾಕ್‌ಸ್ಥಾನ, ಉಜ್ಬೆಕಿಸ್ಥಾನದಂತಹ ರಾಷ್ಟ್ರಗಳ ಸೇರ್ಪಡೆಯಾದ ಬಳಿಕ ಭಾರತ ತನ್ನ ಅಗ್ರ ಐದರೊಳಗಿನ ಸ್ಥಾನ ಕಳೆದುಕೊಳ್ಳುತ್ತ ಬಂತು.
ಕಳೆದೆರಡು ದಶಕದಲ್ಲಿ ಉತ್ತಮ ಆಟ
1990ರ ಬೀಜಿಂಗ್ ಗೇಮ್ಸ್‌ನಲ್ಲಿ ಭಾರತ ನಿರ್ವಹಣೆ ನಿಕೃಷ್ಟ ವಾಗಿತ್ತು. ಮೊದಲ ಬಾರಿ ಅಗ್ರ ಹತ್ತರೊಳಗಿನ ಸ್ಥಾನ ಪಡೆಯಲು ವಿಫಲವಾಗಿತ್ತು. ಭಾರತ ಈ ಗೇಮ್ಸ್‌ನಲ್ಲಿ ಕಬಡ್ಡಿಯಲ್ಲಿ ಮಾತ್ರ ಚಿನ್ನ ಜಯಿಸಿತ್ತು. ಆ ಬಳಿಕ ಕಳೆದ ಎರಡು ದಶಕದಲ್ಲಿ ಭಾರತ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತ ಬಂದಿದೆ.
ಗ್ವಾಂಗ್‌ಝೂ: ಸರ್ವಶ್ರೇಷ್ಠ ನಿರ್ವಹಣೆ
ಕಳೆದ ಮೂರು ದಶಕದಲ್ಲಿ ಪದಕಪಟ್ಟಿಯಲ್ಲಿ ಭಾರತದ ಸಾಧನೆ ಆರರಿಂದ ಎಂಟನೇ ಸ್ಥಾನದ ನಡುವೆ ಇತ್ತು. 2010ರ ಗ್ವಾಂಗ್‌ಝೂ ಗೇಮ್ಸ್‌ನಲ್ಲಿ ಭಾರತ ಸರ್ವಶ್ರೇಷ್ಠ ನಿರ್ವಹಣೆ ನೀಡಿತ್ತು. ಒಟ್ಟಾರೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದ ಭಾರತ 14 ಚಿನ್ನ ಸಹಿತ ಒಟ್ಟು 65 ಪದಕ ಗೆದ್ದ ಸಾಧನೆ ಮಾಡಿತ್ತು. ಇಂಚಿಯಾನ್‌ನಲ್ಲಿ ನಡೆದ 2014ರ ಗೇಮ್ಸ್‌ನಲ್ಲಿ ಭಾರತ ಎಂಟನೇ ಸ್ಥಾನಕ್ಕೆ ಕುಸಿದಿತ್ತು. ಥಾçಲಂಡ್ ಮತ್ತು ಉತ್ತರ ಕೊರಿಯವು ಭಾರತಕ್ಕಿಂತ ಹೆಚ್ಚಿನ ಚಿನ್ನದ ಪದಕ ಗೆದ್ದ ಕಾರಣ ಭಾರತ ಎಂಟನೇ ಸ್ಥಾನಕ್ಕೆ ಕುಸಿಯಬೇಕಾಯಿತು. ಒಟ್ಟು ಪದಕ ಗಳಿಕೆಯಲ್ಲಿ ಭಾರತ ಈ ಎರಡು ದೇಶಗಳಿಗಿಂತ ಹೆಚ್ಚು ಪಡೆದಿತ್ತು.
ಆದರೆ ಈ ಎಲ್ಲ ರಾಷ್ಟ್ರಗಳಿಗೆ ಬಲವಾದ ಸ್ಪರ್ಧೆಯನ್ನು ಭಾರತ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ನಿರ್ವಹಣೆ ನೀಡುತ್ತಿದ್ದಾರೆ.
ಶೂಟಿಂಗ್, ಆ್ಯತ್ಲೆಟಿಕ್ಸ್, ಬ್ಯಾಡ್ಮಿಂಟನ್, ಸ್ಕ್ವಾಷ್, ಟೆನಿಸ್, ಆರ್ಚರಿ ಮುಂತಾದ ಸ್ಪರ್ಧೆಗಳಲ್ಲಿ ಭಾರತ ಬಲಿಷ್ಠವಾಗಿದೆ ಮತ್ತು ವಿಶ್ವ ಖ್ಯಾತಿಯ ಆಟಗಾರರನ್ನು ಕೂಡ ಒಳಗೊಂಡಿದೆ.
ಹಾಕಿ ಮತ್ತು ಕಬಡ್ಡಿಯಲ್ಲಿ ಭಾರತ ಚಿನ್ನ ಗೆಲ್ಲುವ ಫೇವರಿಟ್ ತಂಡವಾಗಿ ಕಣಕ್ಕೆ ಇಳಿಯುತ್ತಿದೆ. ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ಭಾರತೀಯ ಆಟಗಾರರು ನಿರ್ವಹಣೆ ನೀಡಿದಲ್ಲಿ ಭಾರತ ಅಗ್ರ ಐದರೊಳಗಿನ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ.
2018ರ ಗೇಮ್ಸ್ ಹೇಗೆ ?
ವಿಶ್ವದ ಶ್ರೇಷ್ಠ ಮೂರು ಕ್ರೀಡಾ ದೇಶಗಳಲ್ಲಿ ಒಂದಾಗಿರುವ ಚೀನ 2018ರ ಏಶ್ಯನ್ ಗೇಮ್ಸ್‌ನ ಪದಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸುವುದು ಖಚಿತ. ಈಜು, ಆ್ಯತ್ಲೆಟಿಕ್ಸ್, ಶೂಟಿಂಗ್, ಜಿಮ್ನಾಸ್ಟಿಕ್ಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ವೇಟ್‌ಲಿಫ್ಟಿಂಗ್ ಸಹಿತ ಪ್ರಮುಖ ಕ್ರೀಡೆಗಳಲ್ಲಿ ಚೀನ ತಂಡದಲ್ಲಿ ಚಾಂಪಿಯನ್ ಆಟಗಾರರು ಇರುವುದು ಉನ್ನತ ಕ್ರೀಡಾ ಸಾಧನೆಗೆ ಕಾರಣವಾಗಿದೆ. ಎರಡನೇ ಮತ್ತು ಮೂರನೇ ಸ್ಥಾನಕ್ಕಾಗಿ ಜಪಾನ್ ಮತ್ತು ದಕ್ಷಿಣ ಕೊರಿಯ ದೇಶಗಳ ನಡುವೆ ತೀವ್ರ ಸ್ಪರ್ಧೆ ಸಾಗುವ ನಿರೀಕ್ಷೆಯಿದೆ.
ಕಳೆದ ಗೇಮ್ಸ್‌ನಲ್ಲಿ ಕೊರಿಯ ದ್ವಿತೀಯ ಸ್ಥಾನ ಪಡೆದಿತ್ತು. ಆತಿಥ್ಯ ರಾಷ್ಟ್ರವಾದ ಕಾರಣ ಕೊರಿಯಕ್ಕೆ ತವರಿನ ಅಭಿಮಾನಿಗಳ ಬೆಂಬಲವೂ ಸಿಕ್ಕಿತ್ತು. ಆದರೆ ಈ ಬಾರಿ ಕೊರಿಯಕ್ಕೆ ತವರಿನ ಲಾಭವಿಲ್ಲ. ಹಾಗಾಗಿ ದ್ವಿತೀಯ ಸ್ಥಾನ ಉಳಿಸಿಕೊಳ್ಳುವುದು ಅವರಿಗೆ ಅಷ್ಟೊಂದು ಸುಲಭವಲ್ಲ.
ಭಾರತಕ್ಕೆ ಯಾವ ಸ್ಥಾನ
ಪದಕ ಪಟ್ಟಿಯಲ್ಲಿ ಅಗ್ರ ಮೂರರೊಳಗಿನ ಸ್ಥಾನ ಪಡೆಯುವುದು ಭಾರತಕ್ಕೆ ಕನಸಿನ ಮಾತಾಗಿದೆ. ಆದರೆ 4 ಮತ್ತು 5ನೇ ಸ್ಥಾನಕ್ಕಾಗಿ ಭಾರತ ಪ್ರಯತ್ನ ಪಡಬಹುದು. ಆದರೆ ಅದು ಪ್ರಮುಖ ದೇಶಗಳಾದ ಕಜಾಕ್‌ಸ್ಥಾನ, ಇರಾನ್, ಥಾçಲಂಡ್, ಉತ್ತರ ಕೊರಿಯ, ಕತಾರ್, ಚೈನೀಸ್ ತೈಪೆ, ಮಲೇಶ್ಯ, ಆತಿಥೇಯ ಇಂಡೋನೇಶ್ಯ ರಾಷ್ಟ್ರಗಳ ಸವಾಲನ್ನು ಎದುರಿಸಬೇಕಾಗಿದೆ. ಕಳೆದ ಎರಡು ಗೇಮ್ಸ್‌ನಲ್ಲಿ ಇರಾನ್ ಮತ್ತು ಕಜಾಕ್‌ಸ್ಥಾನ ಅನುಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿತ್ತು. ವೇಟ್‌ಲಿಫ್ಟಿಂಗ್, ಕುಸ್ತಿ, ಶೂಟಿಂಗ್ ಮುಂತಾದ ಕ್ರೀಡೆಗಳಲ್ಲಿ ಈ ಎರಡು ರಾಷ್ಟ್ರಗಳ ಆಟಗಾರರು ಉತ್ಕೃಷ್ಟ ನಿರ್ವಹಣೆ ನೀಡುತ್ತಿದ್ದಾರೆ. ಹಾಗಾಗಿ ಈ ಬಾರಿಯೂ ಆ ಸ್ಥಾನ ಉಳಿಸಿಕೊಳ್ಳಲು ಅವರು ಫೇವರಿಟ್‌ಗಳಾಗಿದ್ದಾರೆ.
ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಸಾಧನೆ
ವರ್ಷ ಸ್ಥಳ ಚಿನ್ನ ಬೆಳ್ಳಿ ಕಂಚು ಒಟ್ಟು ಸ್ಥಾನ
1951 ಹೊಸದಿಲ್ಲಿ 15 16 20 51 ದ್ವಿತೀಯ
1954 ಮನಿಲಾ 4 4 5 13 ಐದನೇ
1958 ಟೋಕಿಯೊ 5 3 3 11 ಆರನೇ
1962 ಜಕಾರ್ತ 10 13 10 33 ಮೂರನೇ
1966 ಬ್ಯಾಂಕಾಂಕ್ 7 4 11 22 ಐದನೇ
1970 ಬ್ಯಾಂಕಾಂಕ್ 6 9 10 25 ಐದನೇ
1974 ಟೆಹ್ರಾನ್ 4 12 12 28 ಏಳನೇ
1978 ಬ್ಯಾಂಕಾಂಕ್ 11 11 6 28 ಆರನೇ
1982 ಹೊಸದಿಲ್ಲಿ 13 19 25 57 ಐದನೇ
1986 ಸೋಲ್ 5 9 23 37 ಐದನೇ
1990 ಬೀಜಿಂಗ್ 1 8 14 23 11ನೇ
1994 ಹಿರೋಶಿಮ 4 3 15 22 ಎಂಟನೇ
1998 ಬ್ಯಾಂಕಾಂಕ್ 7 11 17 35 9ನೇ
2002 ಬೂಸಾನ್ 10 12 13 35 ಎಂಟನೇ
2006 ದೋಹಾ 10 17 26 53 ಎಂಟನೇ
2010 ಗ್ವಾಂಗ್‌ಝೂ 14 17 34 65 ಆರನೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Pro Kabaddi: ಬೆಂಗಳೂರು ಬುಲ್ಸ್ ಗೆ 18ನೇ ಸೋಲು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.