Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್ ಆಟ!
Team Udayavani, May 16, 2024, 8:39 AM IST
ರೀಸಿ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಹಾಜಿ ಕರಮ್ ದಿನ್ ಅವರಿಗೀಗ 102 ವರ್ಷ ವಯಸ್ಸು. ಆದರೆ ಕ್ರಿಕೆಟ್ ಮೇಲಿನ ಅವರ ಪ್ರೀತಿ, ಉತ್ಸಾಹ ಇನ್ನೂ ಬತ್ತಿಲ್ಲ. ಈಗಲೂ ಸ್ಥಳೀಯವಾಗಿ ಕ್ರಿಕೆಟ್ ಆಡುತ್ತಿರುವ ಅವರು ಅಸಾಮಾನ್ಯ ಸಾಧನೆಯಿಂದ ಗಮನ ಸೆಳೆದಿದ್ದಾರೆ.
1922ರಲ್ಲಿ ಜನಿಸಿರುವ ಹಾಜಿ ಕರಮ್ ದಿನ್, ಸ್ಥಳೀಯ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸಕ್ಕಾಗಿ ಬರುವ ಯುವಕರ ಜತೆಗೂಡಿ ತಾವೂ ಆಡುತ್ತಿದ್ದಾರೆ. ಕಾಲಿಗೆ ಪ್ಯಾಡ್ ಕಟ್ಟಿಕೊಂಡು, ಬ್ಯಾಟ್ ಎತ್ತಿಕೊಂಡು ಆಟದಲ್ಲಿ ತೊಡಗುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರ ಕ್ರಿಕೆಟ್ ಮೇಲಿನ ಪ್ರೀತಿ ನಮಗೆಲ್ಲ ಸ್ಫೂರ್ತಿ ತುಂಬುತ್ತಿದೆ ಎನ್ನುತ್ತಿದ್ದಾರೆ ಸ್ಥಳೀಯರು.
ಈ ಬಗ್ಗೆ ಮಾತನಾಡಿರುವ ಹಾಜಿ, “ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಯುವಕರು ಹೇಗೆ ಆಡುತ್ತಾರೆ ಎಂದು ನೋಡಲು ಇಲ್ಲಿಗೆ ಬರುತ್ತೇನೆ. ನನ್ನ ವಯಸ್ಸಿನವರು ಇಲ್ಲಿ ಯಾರೂ ಇಲ್ಲ. ಅವರೆಲ್ಲ ಈಗ ವಿಧಿವಶರಾಗಿದ್ದಾರೆ’ ಎಂದರು.
ಹಾಜಿಯವರ ಮಗ, ಮೊಮ್ಮಗ ಸೇರಿದಂತೆ ಪರಿವಾರವೇ ಕ್ರಿಕೆಟ್ ಆಡಲು ಬರುತ್ತದೆ. ಆಗ ಹಾಜಿ ಕರಮ್ ಕೂಡ ಆಗಮಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.