ಆರನೇ ತರಗತಿ ವಿದ್ಯಾರ್ಥಿನಿಯ ಬ್ಯಾಟಿಂಗ್ ವೈರಲ್: ಈಕೆಗೆ ಆ ಕ್ರಿಕೆಟರ್‌ನಂತೆ ಆಗಬೇಕಂತೆ
Team Udayavani, Oct 16, 2022, 7:54 PM IST
ಲಡಾಖ್:ಸೋಶಿಯಲ್ ಮೀಡಿಯಾದಲ್ಲಿ ದಿನ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಇತ್ತೀಚೆಗೆ ಬೆಂಗಳೂರಿನ ಯುವಕನೊಬ್ಬ ಸಂಸ್ಕೃತ ಕಾಮೆಂಟರಿ ಮಾಡಿದ ವಿಡಿಯೋ ನೆಟ್ಟಿಗರನ್ನು ಸೆಳೆದಿತ್ತು. ಇದೀಗ ಲಡಾಖ್ ನ ಬಾಲಕಿಯೊಬ್ಬಳು ಕ್ರಿಕೆಟ್ ಆಡಿರುವ ವಿಡಿಯೋ ವೈರಲ್ ಆಗಿದೆ.
ಅದು ಶಾಲಾ ಸ್ನೇಹಿತೆಯರ ಗುಂಪು. ಅವರು ಬಿಡುವಿನ ವೇಳೆ ಕ್ರಿಕೆಟ್ ಆಡುತ್ತಿದ್ದಾರೆ. ಒಬ್ಬರಾದ ಮೇಲೊಬ್ಬರು ಬ್ಯಾಟ್ ಬೀಸಿ ಕ್ರಿಕೆಟ್ ಆಡುತ್ತಿರುವ ಗುಂಪಿನಲ್ಲಿ ಬಾಲಕಿಯೊಬ್ಬಳು ಬ್ಯಾಟ್ ಬೀಸಿರುವ ವಿಡಿಯೋ ನೆಟ್ಟಿಗರ ಕಣ್ಮನ ಸೆಳೆದಿದೆ.
ಮಕ್ಸೂಮ ಎನ್ನುವ 6 ತರಗತಿ ವಿದ್ಯಾರ್ಥಿನಿ ಒಬ್ಬ ಅನುಭವಿ ಬ್ಯಾಟರ್ ಬ್ಯಾಟ್ ಹಿಡಿದು ನಿಲ್ಲುವಂತೆ, ಸಿಕ್ಸರ್, ಬೌಂಡರಿ ಸಿಡಿಸುವಂತೆ ಆಡುತ್ತಿದ್ದಾಳೆ. ಈಕೆಯ ನಿಲುವು, ಬಾಲ್ ಹೊಡೆಯುವ ಭಂಗಿ, ರನ್ ಓಡುವುದು ಹಾಗೂ ಬೌಂಡರಿಗಳನ್ನು ಹೊಡೆಯವ ಸಾಮರ್ಥ್ಯವನ್ನು ನೋಡಿದರೆ ಒಬ್ಬ ಪಕ್ಕಾ ತರಬೇತು ಹೊಂದಿದ ಕ್ರಿಕೆಟಿಗ ಆಡಿದ ಹಾಗೆಯೇ ವಿಡಿಯೋದಲ್ಲಿ ಕಂಡುಬಂದಿದೆ.
ಇವಳ ಕ್ರಿಕೆಟ್ ಆಟದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ವೈರಲ್ ಆಗಿದ್ದು, ಮಕ್ಸೂಮ ಈ ಬಗ್ಗೆ ಮಾತಾನಾಡಿದ್ದು, “ನನ್ನ ಮೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ನಾನು ಅವರಂತೆ ಆಡಲು ಬಯಸುತ್ತೇನೆ. ನಾನು ಎಂ.ಎಸ್.ಧೋನಿ ಅವರ ಹೆಲಿಕಾಪ್ಟರ್ ಶಾಟನ್ನು ಕಲಿಯಬೇಕೆಂಡಿದ್ದೇನೆ” ಎಂದು ಹೇಳಿದ್ದಾಳೆ.
ಮನೆಯಲ್ಲಿ ನನ್ನ ತಂದೆ, ಶಾಲೆಯಲ್ಲಿ ನನ್ನ ಶಿಕ್ಷಕರು ಕ್ರಿಕೆಟ್ ಆಡಲು ಪ್ರೋತ್ಸಾಹ ನೀಡುತ್ತಾರೆ. ನಾನು ಕೊಹ್ಲಿಯಂತೆ ಆಡಲು ತುಂಬಾ ಶ್ರಮವಹಿಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ.
My father at home and my teacher at school encourage me to play cricket. I’ll put all my efforts to play like @imVkohli Maqsooma student class 6th #HSKaksar pic.twitter.com/2ULB4yAyBt
— DSE, Ladakh (@dse_ladakh) October 14, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.