ಕೀರ್ತಿಯ ಶಿಖರಕ್ಕೆ ಇನ್ನೊಂದೇ ಹೆಜ್ಜೆ
Team Udayavani, Dec 31, 2018, 12:30 AM IST
ಮಣಿಪಾಲ: ಮೆಲ್ಬರ್ನ್ ನ ಗೆಲುವು ಹೊಸ ಇತಿಹಾಸ ನಿರ್ಮಿ ಸಲು ಭಾರತ ತಂಡವನ್ನು ಹುರಿಗೊಳಿಸಿರುವುದಂತೂ ಸ್ಪಷ್ಟ .”ಬಾಕ್ಸಿಂಗ್ ಡೇ’ ಪಂದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶಿಷ್ಟ ಇತಿಹಾಸ ಹೊಂದಿದೆ. ಅದನ್ನು ಗೆದ್ದಿರುವುದು ಭಾರತದ ಕೀರ್ತಿಯನ್ನು ಹೆಚ್ಚಿಸಿದೆ. ಅದಕ್ಕಿಂತ ಹೆಚ್ಚಾಗಿ ಈ ಗೆಲುವು ಹೊಸ ಇತಿಹಾಸವನ್ನು ಬರೆಯಲು ಹುರುಪು ತುಂಬಿದೆ. ಸಿಡ್ನಿಯಲ್ಲಿ ಜ. 3ರಿಂದ ಆರಂಭವಾಗುವ ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲದಿದ್ದರೂ ಪರವಾಗಿಲ್ಲ; ಡ್ರಾ ಮಾಡಿಕೊಂಡರೂ ಹೊಸ ಇತಿಹಾಸ ನಿರ್ಮಾಣವಾದಂತೆ.
ಗೆದ್ದರೆ ಮೊದಲನೆಯದು
ಆಸ್ಟ್ರೇಲಿಯ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಸ್ವಾತಂತ್ರ್ಯ ಬಂದ ವರ್ಷದಿಂದಲೂ ಅಂದರೆ 1947ರಿಂದ ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಆದರೆ ಒಂದೇ ಒಂದು ಸರಣಿ ಗೆದ್ದಿಲ್ಲ. ಅಷ್ಟೇಕೆ, ಈವರೆಗೆ 43 ಟೆಸ್ಟ್‌ಗಳನ್ನಾಡಿದರೂ ಜಯಿಸಿದ್ದು 7ರಲ್ಲಿ ಮಾತ್ರ. ಈ ಬಾರಿ ಕೊಹ್ಲಿ ಪಡೆ 2-1 ಮುನ್ನಡೆ ಸಾಧಿಸಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಈ ಹಿನ್ನೆಲೆ ಯಲ್ಲೇ ಇಂದಿನ ಗೆಲುವು ಭಾರತೀಯ ಕ್ರಿಕೆಟಿ ನಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಇದು ಭಾರತೀಯ ಟೆಸ್ಟ್ ಚರಿತ್ರೆಯ 150ನೇ ಜಯಭೇರಿ.
ಮೆಲ್ಬರ್ನ್ ಮ್ಯಾಜಿಕ್
ಪರ್ತ್ ಸೋಲಿನ ಬಳಿಕ ಕೊಹ್ಲಿ ತಂಡ ಮೆಲ್ಬರ್ನ್ ನಲ್ಲಿ ತಿರುಗಿ ಬಿದ್ದ ಪರಿ ಅಮೋಘ. ಈ “ಮೆಲ್ಬರ್ನ್ ಮ್ಯಾಜಿಕ್’ಗೆ ಕಾರಣ – ಮೊದಲನೆಯದು ಅದೃಷ್ಟದ ಟಾಸ್. ಅಂತಿಮ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಯಾವತ್ತೂ ಕಠಿನ. ಮೂರೂ ಟೆಸ್ಟ್ ಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದವರೇ ಗೆದ್ದದ್ದು.
ಟೊಂಕ ಕಟ್ಟಿದ ಅಗರ್ವಾಲ್
ಓಪನಿಂಗ್ ವೈಫಲ್ಯದಿಂದ ನರಳುತ್ತಿದ್ದ ತಂಡಕ್ಕೆ ಪರಿಹಾರ ಬೇಕಲ್ಲ? ಇದಕ್ಕೆ ಕರ್ನಾಟಕದ ಮಾಯಾಂಕ್ ಅಗರ್ವಾಲ್ ಟೊಂಕ ಕಟ್ಟಿದರು. ಪೂಜಾರ, ಕೊಹ್ಲಿ, ರೋಹಿತ್ ಸೇರಿ ಮೊತ್ತವನ್ನು 400ರ ಗಡಿ ದಾಟಿಸಿದ್ದು ಅನುಕೂಲವಾಯಿತು. ಅನಂತರದ್ದು ಬುಮ್ರಾ ಜಾದೂ. ಈ ಅಸಾಮಾನ್ಯ ಸಾಹಸ ಸಿಡ್ನಿಯಲ್ಲಿ ಸಿಡಿಯಲು ಸ್ಫೂರ್ತಿ ತುಂಬಿದೆ.
– ಪ್ರೇಮಾನಂದ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.