ಮೆಲ್ಬರ್ನ್ ಟೆಸ್ಟ್ಗೆ ಹಾರ್ದಿಕ್ ಪಾಂಡ್ಯ?
Team Udayavani, Dec 24, 2018, 6:55 AM IST
ಮೆಲ್ಬರ್ನ್: ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್ಗೆ ಸಿದ್ಧವಾಗುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಆಲರೌಂಡರ್ ಹಾರ್ದಿಕ್ ಪಾಂಡ್ಯ ಸೇರ್ಪಡೆಯಾಗುವ ಎಲ್ಲ ಸಾಧ್ಯತೆ ಇದೆ. ಆದರೆ ಸ್ಪಿನ್ನರ್ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಆಡುವುದು ಅನುಮಾನ.
ಹೊಟ್ಟೆ ಸ್ನಾಯು ಸೆಳೆತದಿಂದ ದ್ವಿತೀಯ ಟೆಸ್ಟ್ನಿಂದ ರವಿಚಂದ್ರನ್ ಅಶ್ವಿನ್ ಹೊರಬಿದ್ದಿದ್ದರು. ಭುಜದ ನೋವಿನಿಂದ ರವೀಂದ್ರ ಜಡೇಜ ಕೂಡ ಆಡಿರಲಿಲ್ಲ. 3ನೇ ಟೆಸ್ಟ್ ಹೊತ್ತಿಗೂ ಈ ಇವರಿಬ್ಬರು ಚೇತರಿಸಿಕೊಳ್ಳುವುದು ಅನುಮಾನ. ಮೆಲ್ಬರ್ನ್ ಟ್ರ್ಯಾಕ್ ಸ್ವಲ್ಪ ಮಟ್ಟಿಗೆ ಸ್ಪಿನ್ನರ್ಗಳಿಗೆ ನೆರವಾಗುವ ಸಾಧ್ಯತೆ ಇದ್ದು, ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವಕಾಶ ಪಡೆಯಲೂಬಹುದು.
ಇದೇ ವೇಳೆ ಭಾರತಕ್ಕೆ ಲಭಿಸಿರುವ ಸಂತಸದ ಸುದ್ದಿಯೆಂದರೆ ಖ್ಯಾತ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಹನ್ನೊಂದರ ಬಳಗವನ್ನು ಸೇರಲು ಸಿದ್ಧವಾಗಿರುವುದು. ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಏಶ್ಯ ಕಪ್ ವೇಳೆ ಪಾಂಡ್ಯ ಬೆನ್ನುನೋವಿನಿಂದ ಹೊರಬಿದ್ದಿದ್ದರು. ಇತ್ತೀಚೆಗೆ ಕೆಲವು ರಣಜಿ ಪಂದ್ಯಗಳಲ್ಲಿ ಆಡುವ ಮೂಲಕ ಫಾರ್ಮ್ ಮತ್ತು ಫಿಟ್ನೆಸ್ ಸಾಬೀತು ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.