ಮತ್ತೆ ಗೆಲುವನ್ನು ಕೈಚೆಲ್ಲಿದ ಭಾರತ
Team Udayavani, Dec 3, 2018, 6:20 AM IST
ಭುವನೇಶ್ವರ: ಮೊದಲೆರಡು ಅವಧಿಗಳಲ್ಲಿ ಆತಿಥೇಯ ಭಾರತದ ನಿರಾಶಾದಾಯಕ ಆಟ, ಬೆಲ್ಜಿಯಂ ಪ್ರಭುತ್ವ; 3ನೇ ಹಾಗೂ 4ನೇ ಕ್ವಾರ್ಟರ್‌ನಲ್ಲಿ ತಿರುಗಿ ಬಿದ್ದ ಮನ್‌ಪ್ರೀತ್ ಪಡೆಯ ಮೇಲೆ ಗೆಲುವಿನ ನಿರೀಕ್ಷೆ; ಪಂದ್ಯದ ಮುಕ್ತಾಯಕ್ಕೆ 4 ನಿಮಿಷಗಳಿರುವಾಗ ಬೆಲ್ಜಿಯಂನಿಂದ ಮಹತ್ವದ ಗೋಲು…
ಹೀಗೆ ಹಾವು-ಏಣಿ ಆಟದಂತೆ ಸಾಗಿದ ವಿಶ್ವಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಭಾರತ-ಬೆಲ್ಜಿಯಂ ನಡುವಿನ ಅತ್ಯಂತ ಮಹತ್ವದ ಪಂದ್ಯ 2-2 ಡ್ರಾದೊಂದಿಗೆ ಮುಗಿದಿದೆ.ಆರಂಭದ ಪರಿಸ್ಥಿತಿ ಕಂಡಾಗ ಭಾರತ ಈ ಪಂದ್ಯವನ್ನು ಸೋಲುತ್ತದೆಂದೇ ಭಾವಿಸಲಾಗಿತ್ತು. ಅಲೆಕ್ಸಾಂಡರ್ ಹೆಂಡ್ರಿಕ್ಸ್ 8ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಮೂಲಕ ಗೋಲೊಂದನ್ನು ಬಾರಿಸಿ ಬೆಲ್ಜಿಯಂಗೆ ಆತ್ಮವಿಶ್ವಾಸ ತುಂಬಿದರು. ಈ ಹೊಡೆತದಿಂದ ತತ್ತರಿಸಿದ ಭಾರತದ ಆಟಗಾರರು ಒಂದಿಷ್ಟು ಹಿಡಿತ ಕಳೆದುಕೊಂಡದ್ದು ಸುಳ್ಳಲ್ಲ. ದ್ವಿತೀಯ ಕ್ವಾರ್ಟರ್ ಮುಗಿದು ಸುಮಾರು 8 ನಿಮಿಷಗಳ ತನಕ ಭಾರತ ಗೋಲಿನ ಹುಡುಕಾಟದಲ್ಲೇ ಇತ್ತು. ಕೊನೆಗೂ 39ನೇ ನಿಮಿಷದಲ್ಲಿ ಇದಕ್ಕೆ ಕಾಲ ಕೂಡಿಬಂತು. ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಬೆಲ್ಜಿಯಂ ಗೋಲಿಯನ್ನು ವಂಚಿಸುವಲ್ಲಿ ಯಶಸ್ವಿಯಾದರು.
ಲಭಿಸಿತು 2-1 ಮುನ್ನಡೆ: ಈ ಗೋಲು ಭಾರತದ ಪಾಳೆಯದಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿತು. ಆತಿಥೇಯರು ಆಕ್ರಮಣಕಾರಿ ಆಟಕ್ಕೆ ಮುಂದಾದರು. 3ನೇ ಕ್ವಾರ್ಟರ್ ಕಳೆದು ಎರಡೇ ನಿಮಿಷದಲ್ಲಿ ಸಿಮ್ರಾನ್‌ಜಿàತ್ ಸಿಂಗ್ ಮನಮೋಹಕ ಫೀಲ್ಡ್ ಗೋಲ್ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದರು. ಇದು ಈ ಕೂಟದಲ್ಲಿ ಸಿಮ್ರಾನ್‌ಜಿàತ್ ಬಾರಿಸಿದ 3ನೇ ಗೋಲ್ ಆಗಿತ್ತು.
ಭಾರತ ಈ ಮೇಲುಗೈಯನ್ನು ಉಳಿಸಿಕೊಂಡು ಗೆಲುವಿನ ಸಂಭ್ರಮ ಆಚರಿಸಬಹುದಿತ್ತು.
ಆದರೆ “ರೆಡ್ ಲಯನ್ಸ್’ ಖ್ಯಾತಿಯ ಬೆಲ್ಜಿಯಂ ಹಿನ್ನಡೆಯ ಹೊರತಾಗಿಯೂ ಪಂದ್ಯವನ್ನು ಸಮಬಲಕ್ಕೆ ತರಲು ಇನ್ನಿಲ್ಲದ ಕಸರತ್ತು ನಡೆಸತೊಡಗಿತು. 56ನೇ ನಿಮಿಷದಲ್ಲಿ ಸೈಮನ್ ಗಗ್ನರ್ಡ್ ಭಾರತದ ಕೋಟೆಗೆ ದಾಳಿ ನಡೆಸಿ ಫೀಲ್ಡ್ ಗೋಲ್ ಒಂದನ್ನು ಬಾರಿಸಿಯೇ ಬಿಟ್ಟರು.
ಭಾರತ ತನ್ನ ಅಂತಿಮ ಲೀಗ್ ಪಂದ್ಯವನ್ನು ಡಿ. 8ರಂದು ಕೆನಡಾ ವಿರುದ್ಧ ಆಡಲಿದೆ. ಅದೇ ದಿನ ಬೆಲ್ಜಿಯಂ-ದಕ್ಷಿಣ ಆಫ್ರಿಕಾ ಮುಖಾಮುಖೀಯಾಗಲಿವೆ. ಇಲ್ಲಿನ ಫಲಿತಾಂಶ ಅಗ್ರ 2 ಸ್ಥಾನಿಗಳನ್ನು ನಿರ್ಧರಿಸಲಿದೆ.
ಭಾರತಕ್ಕೆ ಅಗ್ರಸ್ಥಾನ: 2 ಪಂದ್ಯಗಳ ಬಳಿಕ 4 ಅಂಕ ಹೊಂದಿರುವ ಆತಿಥೇಯ ಭಾರತ “ಸಿ’ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಬೆಲ್ಜಿಯಂ ಕೂಡ 4 ಅಂಕ ಗಳಿಸಿದೆ. ಆದರೆ ಗೋಲು ವ್ಯತ್ಯಾಸದ ಲೆಕ್ಕಾಚಾರದಿಂದ 2ನೇ ಸ್ಥಾನದಲ್ಲಿದೆ. ಗುಂಪಿನ ಅಗ್ರಸ್ಥಾನ ಅಲಂಕರಿಸುವ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.