ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್ ಸ್ಟ್ರೆಂತ್ ಮ್ಯಾಟರ್ಸ್”
ಸುನಿಲ್ ಜೋಷಿ ಪುತ್ರ ಆರ್ಯನ್ ಜೋಷಿ ವಿನೂತನ ಪರಿಕಲ್ಪನೆ
Team Udayavani, Aug 11, 2020, 5:40 PM IST
ಪ್ರಸಂಗ 1- ಒಲಿಂಪಿಕ್‌ನಲ್ಲಿ ಕಂಚಿನ ಪದಕ ತಂದುಕೊಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ ಹರಿಯಾಣ ಮೂಲದವರು. ಒಂದು ಕಾಲದಲ್ಲಿ ಅತಿ ಹೆಚ್ಚು ಸ್ತ್ರೀ ಭ್ರೂಣ ಹತ್ಯೆ ಪ್ರಮಾಣ ಹೊಂದಿದ್ದ ರಾಜ್ಯ ಅದು. ಗಂಡುಮಕ್ಕಳಿಗೆ ಆದ್ಯತೆ ನೀಡುವ ಸಮಾಜದ ಸಹಜ ಮನಃಸ್ಥಿತಿಯಲ್ಲಿ ಬೆಳೆದ ಅವರು, ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಧೃಡಚಿತ್ತ ತಮ್ಮ ಕನಸನ್ನು ನನಸ್ಸಾಗಿಸಲು ಮತ್ತು ಗುರಿ ಸಾಧನೆಗೆ ಪ್ರೇರೇಪಿಸಿತು. ಅವರಲ್ಲಿದ್ದ ದೃಢಚಿತ್ತ ಎಂತಹದ್ದು?
ಪ್ರಸಂಗ 2- ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಮೊದಲ ಬಾರಿಗೆ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡಾಗ 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿದ್ದರು. ಅಪರೂಪದ ಕ್ಯಾನ್ಸರ್ ಜತೆಗೆ ಎದುರಾಳಿ ತಂಡಗಳನ್ನು ಸೋಲಿಸುವ ಸವಾಲು ಅವರ ಮುಂದಿತ್ತು. ಇದೆಲ್ಲವನ್ನೂ ಗೆದ್ದ ಯುವರಾಜ್, ಇಡೀ ಪಂದ್ಯಾವಳಿಯ ಕೇಂದ್ರಬಿಂದು ಆದರು. ಮ್ಯಾನ್ ಆಫ್ ದಿ ಸಿರೀಸ್ ಮುಡಿಗೇರಿಸಿಕೊಂಡರು. ನಿದ್ರಾಹೀನ ರಾತ್ರಿಗಳನ್ನು ಕಳೆದು ಜಯಿಸಿದ ವ್ಯಕ್ತಿಯ ಆ ಧೃಢ ಮನಸ್ಸು ಎಷ್ಟು ಬಲಶಾಲಿಯಾಗಿರಬಹುದು?
– ಇವು ಕೇವಲ ಸ್ಯಾಂಪಲ್. ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ಆ ಪ್ರತಿ ಸಾಧಕರ ಹಾದಿಯಲ್ಲೂ ಒಂದಿಲ್ಲೊಂದು ಕಠಿಣ ಸವಾಲುಗಳು ಎದುರಾಗಿರುತ್ತವೆ. ಅದನ್ನು ಎದುರಿಸುವ “ಮಾನಸಿಕ ಸ್ಥೈರ್ಯ’ದ ಮೇಲೆ ಯಶಸ್ಸು ನಿಂತಿರುತ್ತದೆ. ಪ್ರತಿಯೊಬ್ಬರಲ್ಲಿರುವ ಆ ಮಾನಸಿಕ ಸ್ಥೈರ್ಯವನ್ನು ಜಾಗೃತಗೊಳಿಸಲು ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಅವರ ಪುತ್ರ 17 ವರ್ಷದ ಆರ್ಯನ್ ಜೋಶಿ ಹೊರಟಿದ್ದಾರೆ. ಇದಕ್ಕಾಗಿ “ಮೆಂಟಲ್ ಸ್ಟ್ರೆಂತ್ ಮ್ಯಾಟರ್ಸ್’ ಆರಂಭಿಸಿದ್ದಾರೆ. ಇದರಡಿ ಕ್ರೀಡಾಲೋಕದಲ್ಲಿನ ಪಟುಗಳಿಗೆ ಮಾನಸಿಕ ಸ್ಥೈರ್ಯದ ಮಹತ್ವ ತಿಳಿಸಲು ಮುಂದಾಗಿದ್ದಾರೆ.
ಮಾನಸಿಕ ಸ್ಥೈರ್ಯವು ಯಾವೊಬ್ಬ ವ್ಯಕ್ತಿಯ ಕಠಿಣ ಸಂದರ್ಭಗಳಲ್ಲಿ ಧೈರ್ಯ ತುಂಬು ಸಾಧನ. ವಿವಿಧ ಯಶಸ್ವಿ ಕ್ರೀಡಾಪಟುಗಳು ತಮ್ಮ ಜೀವನದ ಸಂದಿಗ್ಧ ಸ್ಥಿತಿಯಲ್ಲಿ ಇದನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಸ್ವತಃ ಕ್ರೀಡಾಪಟುಗಳು ಇಲ್ಲಿ ಹಂಚಿಕೊಂಡಿದ್ದಾರೆ. “ಮಾನಸಿಕ ಸ್ಥೈರ್ಯ ಎನ್ನುವುದು ಒಬ್ಬರ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ವ್ಯಾಪಕವಾಗಿ ನಿರ್ಲಕ್ಷಿಸಲ್ಪಟ್ಟ ಅಂಶ. ಇದನ್ನು ಜಾಗೃತಗೊಳಿಸಿದರೆ, ನಮ್ಮ ಒತ್ತಡ ಮತ್ತು ಸವಾಲುಗಳನ್ನು ನಿವಾರಿಸಬಲ್ಲ ಮಾರ್ಗವಾಗಿ ಬದಲಾಯಿಸಬಹುದು’ ಎನ್ನುತ್ತಾರೆ 17 ವರ್ಷದ ಆರ್ಯನ್ ಜೋಶಿ.
ಕ್ರೀಡೆಗೆ ಸೀಮಿತವಲ್ಲ
“ಈ ಪರಿಕಲ್ಪನೆಯು ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದೆಯೇ? ಇಲ್ಲ. ಕ್ರೀಡೆ ಮತ್ತು ಕ್ರೀಡಾ-ಅನುಭವಗಳನ್ನು ಆಧರಿಸಿ ಸಮಾಜದ ಹಲವು ತೊಡಕುಗಳ ನಿವಾರಿಸಲು ಮತ್ತು ಜಾಗೃತಿ ಮೂಡಿಸಲು ಸಾಧನವಾಗಿ ಬಳಸುವುದು ಇದರ ಉದ್ದೇಶ. ಮುಂದಿನ ದಿನಗಳಲ್ಲಿ ಮಾನಸಿಕ ಸಾಮರ್ಥ್ಯ ವೃದ್ಧಿಯು ಶೈಕ್ಷಣಿಕ ಪಠ್ಯಕ್ರಮದಲ್ಲಿ ಒಂದು ಅಧ್ಯಾಯವಾಗಿರಲಿದೆ. ಈ ಯೋಜನೆಯ ವಿಸ್ತಾರ ಈಗ ಕೇವಲ ಸಾಗರದಲ್ಲಿನ ಒಂದು ಹನಿ ಅಷ್ಟೇ. ಆದರೆ ಜನರ ಸಮಸ್ಯೆಗಳನ್ನು ಹೋಗಲಾಡಿಸುವ ಗುರಿಯ ಸಾಧನೆಯಲ್ಲಿ ಒಂದು ಸದೃಢ ಹೆಜ್ಜೆಯಾಗಿರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಗ್ರಾಮೀಣದಲ್ಲಿ ಜಾಗೃತಿ ಗುರಿ
ನಮ್ಮಲ್ಲಿ ನಿಜವಾದ ಪ್ರತಿಭೆ ಗ್ರಾಮೀಣ ಭಾಗಗಳಲ್ಲಿದೆ. ಆದರೆ, ಅವುಗಳು ಸಾಕ್ಷಿ ಮಲಿಕ್, ಮಿಥಾಲಿ ಅವರಂತೆಯೇ ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಆ ಪೈಕಿ ಬಹುತೇಕ ಮಾನಸಿಕ ಸ್ಥೈರ್ಯದ ಕೊರತೆಯಿಂದ ಸ್ಥಳೀಯವಾಗಿಯೇ ಕಳೆದುಹೋಗುತ್ತವೆ. “ಮೆಂಟಲ್ ಸ್ಟ್ರೆಂತ್ ಮ್ಯಾಟರ್ಸ್’ ಆ ಪ್ರತಿಭೆಗಳಲ್ಲಿ ಮಾನಸಿಕ ಸ್ಥೈರ್ಯವನ್ನು ಜಾಗೃತಗೊಳಿಸಲು ಹೊರಟಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕೋಚ್‌ಗಳು, ಕ್ರೀಡಾ ಪ್ರಾಧಿಕಾರಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲಾಗುವುದು. ಅಲ್ಲದೆ, ಮುಂದಿನ ದಿನಗಳಲ್ಲಿ ರಾಜ್ಯ ಶಿಕ್ಷಣ ಮಂಡಳಿ, ಶಿಕ್ಷಣ ಇಲಾಖೆಗೂ ಇದರ ಮಹತ್ವದ ಬಗ್ಗೆ ಮನವರಿಕೆ ಮಾಡಿ, ಪ್ರತಿ ಶಾಲೆಯನ್ನು ತಲುಪುವ ಗುರಿ ಇದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.